ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ನಗರ ಜಿಲ್ಲಾ ಕೇಂದ್ರವಾಗಿದ್ದು, ರಾಜ್ಯಧಾನಿಗೆ ಹತ್ತಿರವಿದ್ದರು ಅಭಿವೃದ್ದಿಯಲ್ಲಿ ಕುಂಠಿತಗೊAಡಿದೆ. ನಗರ ಅಭಿವೃದ್ಧಿಗೆ ಸೂಕ್ತ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರಿಗೆ ಕೋಲಾರ ನಗರದ ಕಠಾರಿಪಾಳ್ಯ ಹಿರಿಯ ನಾಗರೀಕ ಮುನಿವೆಂಕಟೇಶ್ ಮನವಿ ನೀಡಿ ಒತ್ತಾಯಿಸಿದ್ದಾರೆ.
ಸೋಮವಾರ ಜನಪರ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರಿಗೆ ಮನವಿ ನೀಡಿ, ಕೋಲಾರ ನಗರದಲ್ಲಿ ಬೀದಿ ದೀಪಗಳು ಬೆಳ್ಳಿಗ್ಗೆ ೮ ಗಂಟೆಯಾದರೂ ಉರಿಯುತ್ತಿರುತ್ತವೆ. ನಗರದ ಎಂ.ಜಿ.ರಸ್ತೆಯನ್ನು ಏಕ ಮುಖ ರಸ್ತೆ ಮಾಡಿರುವುದು ಸಮರ್ಪಕವಾಗಿಲ್ಲ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ರಸ್ತೆ ಇದೆ ಎಂಬುದನ್ನು ಅರಿತು ಸರಿಪಡಿಸಬೇಕು.
ಎಂ.ಜಿ.ರಸ್ತೆಯ ಎರಡೂ ಬದಿ ಇರುವ ಫುಟ್‌ಭಾತ್‌ನ್ನು ಸಾರ್ವಜನಿಕರು ಹಾಗೂ ಹಿರಿಯ ನಾಗರೀಕರ ಓಡಾಟಕ್ಕೆ ಸುಸೂತ್ರವಾಗಿ ಫುಟ್‌ಬಾತ್ ಬಳಕೆಗೆ ಅನುಕೂಲವಾಗುವಂತೆ ಮಾಡಬೇಕಾಗಿದೆ ಎಂದು ಕೋರಿದ್ದಾರೆ.
ನಗರದ ನೀರಿನ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಆಸ್ತಿ ತೆರಿಗೆ ಕಟ್ಟದವರನ್ನು ಎ, ಬಿ ಮತ್ತು ಸಿ ಗುಂಪುಗಳೆAದು ವಿಂಗಡಿಸಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಅಮ್ಮವಾರಿಪೇಟೆ, ನಲ್ಲಗಂಗಮ್ಮ ದೇವಸ್ಥಾನದಿಂದ ಮಹಾತ್ಮಗಾಂಧಿ ವೃತ್ತದವರೆಗೆ ಸಾರ್ವಜನಿಕ ಶೌಚಾಲಯ ಇಲ್ಲದೆ ಪರಿದಾಡುವಂತಾಗಿದೆ. ಇದರ ಕೊರತೆ ನಿವಾರಿಸಲು ಎಸ್.ಬಿ.ಐ ಹಿಂಭಾಗದ ಕನ್ಸ್ರ್‌ವೆನ್ಸಿಯಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಪಡಿಸಿದ್ದಾರೆ.
ಎಂ.ಜಿ.ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ನಗರದ ವಿವಿಧ ಬಡಾವಣೆಗಳಲ್ಲಿ ಹಳೆಯ ಕಟ್ಟಡಗಳು ಇದ್ದು, ಅವುಗಳಿಂದ ಅನಾಹುತಗಳು ತಪ್ಪಿಸಲು ಕೂಡಲೇ ಅವುಗಳನ್ನು ತೆರವುಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮನವಿಯಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವಶ್ಯಕತೆಗೆ ತಕ್ಕಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಮತ್ತು ನಗರಸಭೆ ಕಮೀಷನರ್‌ಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿರುವುದಾಗಿ ಹಿರಿಯ ನಾಗರೀಕರ ಮುನಿವೆಂಕಟೇಶ್ ತಿಳಿಸಿದ್ದಾರೆ.
ಚಿತ್ರ ೨೫ ಕೆ.ಎಲ್.ಆರ್. ೦೩ : ಕೋಲಾರ ನಗರದ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾಗಿ ಸಚಿವ ಬೈರತಿ ಸುರೇಶ್ ರವರಿಗೆ ನಗರ ಹಿರಿಯ ನಾಗರೀಕ ಮುನಿವೆಂಕಟೇಶ್ ಮನವಿ ಸಲ್ಲಿಸಿದರು.