ಕೋಲಾರ ನಗರದ ರಸ್ತೆಗಳಲ್ಲಿ ಕಸದ ರಾಶಿಗಳು / ದುರಸ್ಥಿ ಕಾಣದ ರಸ್ತೆಗಳು / ರಸ್ತೆಗಳಲ್ಲಿ ಮೊಣಕಾಲುದ್ದ ನೀರು / ಸಾರ್ವಜನಿಕರ ಆಕ್ರೋಶ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ನಗರದಲ್ಲಿ ತಾಜ್ಯ ಮತ್ತೆ ರಸ್ತೆಗಳಲ್ಲಿ ರಾರಾಜಿಸುವಂತೆ ಆಗಿದೆ. ಮೊದಲೇ ನಗರದ ರಸ್ತೆಗಳು ಹಾಳಾಗಿದ್ದು, ಮಳೆಗಾಲ ಪ್ರಾರಂಭವಾಗಿದ್ದು, ಮಳೆ ಬಿದ್ದರೆ ರಸ್ತೆಗಳಲ್ಲಿ ಮೊಣಕಾಲು ಉದ್ದ ಬಿದ್ದಿರುವ ಹಳ್ಳಕೊಳ್ಳಗಳಲ್ಲಿ ನೀರು ನಿಂತು ಈಜುಕೊಳಗಳು ನಿರ್ಮಾಣವಾಗುತ್ತಿವೆ. ಲೋಕಸಮರ ಮುಗಿದು ೧೫ ದಿನಗಳು ಕಳೆದಿದ್ದರು, ನಗರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊAಡಿಲ್ಲ. ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.

ರಾಜಧಾನಿ ಕೇಂದ್ರಕ್ಕೆ ಕೇವಲ ೭೦ ಕಿ.ಲೋ. ಮೀಟರ್ ದೂರದಲ್ಲಿರುವ ಕೋಲಾರ ನಗರ ಅಭಿವೃದ್ಧಿಯಲ್ಲಿ ಹಿಂದೆ ಸರಿದಿದೆ. ಕಳೆದ ೧೦ ವರ್ಷಗಳ ಹಿಂದೆ ಕ್ಲೀನ್‌ಸಿಟಿ ಎಂಬ ಹೆಗ್ಗಳಿಕೆ ಪಡೆದಿದ್ದ ನಗರ ಈಗ ಕೊಳಚೆ ನಗರವಾಗಿ ಪರಿಣಮಿಸಿದೆ.

ನಗರದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದರೆ ಉಳಿದ ಬಡಾವಣೆ ಮತ್ತು ಮುಖ್ಯ ರಸ್ತೆಗಳ ಸಂಪರ್ಕ ರಸ್ತೆಗಳು ಶಿಥಿಲಗೊಂಡಿದ್ದು, ಮಳೆ ಬಂದರೆ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಲ್ಲುವಂತಾಗಿದೆ. ರಸ್ತೆ ಪಕ್ಕಗಳಲ್ಲಿ ಚರಂಡಿಗಳಲ್ಲಿ ತಾಜ್ಯ ತುಂಬಿ ನೀರು ರಸ್ತೆಗಳ ಮೇಲೆ ಹರಿಯುವಂತಾಗಿದೆ.

ಇತ್ತೀಚೆಗೆ ಕಸದ ರಾಶಿಗಳು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು, ಚರಂಡಿ ಮತ್ತು ಮಳೆ ನೀರಿನೊಂದಿಗೆ ತಾಜ್ಯ ರಸ್ತೆಗಳ ಮೇಲೆ ಹರಿಯುವಂತಾಗಿದೆ. ಜೋರಾಗಿ ಮಳೆ ಬಂದರೆ ನೀರಿನ ಜೊತೆಗೆ ತಾಜ್ಯ ಮನೆಗಳ ಒಳಗೆ ಪ್ರವೇಶ ಮಾಡುವಂತಹ ಸಂದರ್ಭಗಳು ಎದುರಾಗಿವೆ.

ನಗರಸಭೆಯ ಅಧ್ಯಕ್ಷರ ಅಧಿಕಾರ ಇಲ್ಲದೆ ಇರುವುದರಿಂದ ಸದಸ್ಯ ದಿನನಿತ್ಯ ನಗರಸಭೆ ಮುಂಭಾಗ ಪ್ರತಿಭಟನೆ ಮತ್ತು ಅಧಿಕಾರಿಗಳೊಂದಿಗೆ ಸ್ವಚ್ಛತೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ವಾಗ್ವಾದ ನಡೆಸುಂತೆ ಆಗಿದೆ.

ಕಳೆದ ೨ ತಿಂಗಳಿನಿAದ ಲೋಕ ಸಮರ ಇದ್ದ ಕಾರಣ ನೀತಿ ಸಂಹಿತೆ ಜಾರಿ ಇರುವ ನೆಪದಲ್ಲಿ ನಗರದಲ್ಲಿ ನಡೆಯಬೇಕಾದ ಅನೇಕ ಅಭಿವೃದ್ಧಿ ಕಾರ್ಯಗಳು ಕುಂಠಿತಗೊAಡಿದ್ದವು. ಲೋಕ ಸಮರ ಮುಗಿದು ನೀತಿ ಸಂಹಿತಿ ಮುಗಿದು ೧೫ ದಿನಗಳು ಕಳೆದಿವೆ. ಮಳೆ ಗಾಲ ಪ್ರಾರಂಭವಾಗಿದೆ. ಆದರೆ ನಗರದಲ್ಲಿ ರಸ್ತೆ ಚರಂಡಿ ಕಸ ವಿಲೇವಾರಿ ಮಾಡುವ ಕಾಮಗಾರಿಗಳು ಪ್ರಾರಂಭಗೊAಡಿಲ್ಲ.

ಕೋಟ್
ಬಕ್ರೀದ್ ಹಬ್ಬ ಇದ್ದ ಕಾರಣ ಕಸ ವಿಲೇವಾರಿ ಮಾಡಲು ಸಾಧ್ಯವಾಗಲಿಲ್ಲ. ರಸ್ತೆಗಳಲ್ಲಿ ಬಿದ್ದಿರುವ ತಾಜ್ಯ ವಿಲೇವಾರಿ ಮಾಡಲು ಇನ್ನು ೨ ದಿನಗಳ ಕಾಲಾವಕಾಶ ಹಿಡಿಯುತ್ತದೆ. ಮಂಗಳವಾರದಿAದ ತಾಜ್ಯ ವಿಲೇವಾರಿ ಮಾಡುವ ಕೆಲಸ ಪ್ರಾರಂಭವಾಗಿದೆ. ಮಳೆ ಬಂದರೆ ರಸ್ತೆಗಳಲ್ಲಿ ನಿಲ್ಲುವ ನೀರನ್ನು ಚರಂಡಿಗಳಲ್ಲಿ ಹರಿಯುವಂತಹ ಕೆಲಸ ಮಾಡಲಾಗುವುದು. ಹಂತ ಹಂತವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ರಸ್ತೆಗಳನ್ನು ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

-ಶಿವಾನಂದ, ನಗರಸಭಾ ಆಯುಕ್ತರು, ಕೋಲಾರ

ಕೋಟ್
ನಗರಸಭೆ ಅಧಿಕಾರಿಗಳಿಗೆ ಕೋಲಾರ ನಗರವನ್ನು ಅಭಿವೃದ್ಧಿಪಡಿಸುವ ಕಿಂಚಿತ್ತು ಕಾಳಜಿ ಅವರಲ್ಲಿ ಇಲ್ಲ. ಜನರಿಂದ ಆಯ್ಕೆ ಆಗಿರುವ ಸದಸ್ಯರಿಗಂತೂ ನಗರ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದಂತೆ ಆಗಿದೆ. ಜನಪ್ರತಿನಿಧಿಗಳಿಗೆ ಮತವೇ ಮುಖ್ಯ ಹೊರತು ಅಭಿವೃದ್ಧಿಯ ಬಗ್ಗೆ ಚಿಂತೆ ಇಲ್ಲದಂತಾಗಿದೆ. ಕೋಲಾರ ನಗರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಗಾಂಧಿನಗರದಿAದ ಗದ್ದೆ ಕಣ್ಣೂರಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅನೇಕ ಬಾರಿ ನಗರಸಭೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳು ನಗರಸಂಚಾರವನ್ನು ಹಮ್ಮಿಕೊಂಡು ರಸ್ತೆಗಳ ಅಭಿವೃದ್ಧಿ ಕಡೆ ಗಮನ ಹರಿಸಬೇಕಾಗಿದೆ.

-ನಾರಾಯಣಸ್ವಾಮಿ, ಗಾಂಧಿನಗರ.

ಚಿತ್ರ ೦೮ ಕೆ.ಎಲ್.ಆರ್. ೦೩ಎ : ಕೋಲಾರ ನಗರದ ಪಿ.ಸಿ.ಬಡಾವಣೆಯ ಅಂಚೆ ಕಛೇರಿ ಮುಂಭಾಗದ ರಸ್ತೆಯಲ್ಲಿ ಕಸದ ರಾಶಿ ಬಿದ್ದಿರುವುದು.
ಚಿತ್ರ ೦೮ ಕೆ.ಎಲ್.ಆರ್. ೦೩ಬಿ : ಕಾಲೇಜು ಮುಂಭಾಗದಿAದ ಡಿ.ಡಿ.ಪಿ.ಐ ಕಛೇರಿ ಪಕ್ಕದ ಕೋಟೆ ಕಡೆಗೆ ಹೋಗುವ ರಸ್ತೆಯಲ್ಲಿ ಗುಂಡಿಗಳು ಬಿದ್ದು ನೀರು ನಿಂತಿರುವುದು.
ಚಿತ್ರ ೦೮ ಕೆ.ಎಲ್.ಆರ್. ೦೩ಸಿ : ನಾರಾಯಣಸ್ವಾಮಿ, ಗಾಂಧಿನಗರ.
ಚಿತ್ರ ೦೮ ಕೆ.ಎಲ್.ಆರ್. ೦೩ಡಿ : ಶಿವಾನಂದ, ಕೋಲಾರ ನಗರಸಭೆಯ ಆಯುಕ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net