ಕೋಲಾರ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಗಳಿಂದ ರಾಮನವಮಿ ಆಚರಣೆ / ವಿಶೇಷಪೂಜೆ, ಪಾನಕ, ಮಜ್ಜಿಗೆ ಕೋಸಂಬರಿ ಹಂಚಿಕೆ / ಅನ್ನಸಂತರ್ಪಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸ್ಮರಣೆಯನ್ನು ಜಿಲ್ಲೆಯಾದ್ಯಂತ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆಯ ಮೂಲಕ ಶ್ರೀರಾಮನವಮಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.

ಕೋಲಾರ ಜಿಲ್ಲೆಗೂ ಶ್ರೀರಾಮ, ಹನುಮನಿಗೂ ವಿಶೇಷ ನಂಟು. ಜಿಲ್ಲೆಯಲ್ಲಿ ಹನುಮನ ದೇಗುಲವಿಲ್ಲದ ಊರೇ ಇಲ್ಲ. ಪ್ರತಿ ರಸ್ತೆಯಲ್ಲೂ ಹನುಮನ ದೇಗುಲಗಳು ರಾರಾಜಿಸುವ ಮೂಲಕ ಶ್ರೀರಾಮ, ಹನುಮರ ಪೂಜೆ ನಿರಂತರವಾಗಿ ನಡೆದಿದೆ.

ಶ್ರೀರಾಮನವಮಿ ಅಂಗವಾಗಿ ಎಲ್ಲಾ ದೇವಾಲಯಗಳಲ್ಲಿ, ರಸ್ತೆ ಬದಿಯಲ್ಲಿ ವಿವಿಧ ಸಂಘಟನೆಗಳು, ವ್ಯಾಪಾರಿಗಳು ಬಿಸಿಲ ತಾಪಕ್ಕೆ ದಣಿದು ಸಾಗುವವರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸುವ ಮೂಲಕ ಶ್ರೀರಾಮನಮಿಯನ್ನು ಸಡಗರ ಸಂಭ್ರಮದಿAದ ಆಚರಿಸಿದರು.

ಎಪಿಎಂಸಿ, ನಗರದ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದ ಬಳಿ, ಕೀಲುಕೋಟೆ, ದೊಡ್ಡಪೇಟೆ, ರಾಮದೇವರ ಗುಡಿಬೀದಿ, ಕಿಲಾರಿಪೇಟೆ ವೇಣುಗೋಪಾಲಸ್ವಾಮಿ ದೇವಾಲಯ, ನಗರದ ಪಿಸಿ ಬಡಾವಣೆಯ ಶ್ರೀರಾಮ ಕಾಂಡಿಮೆAಟ್ಸ್ನ ಸ್ನೇಹಿತರು, ಪ್ರಭಾತ್ ಚಿತ್ರಮಂದಿರದ ಬಳಿ ಭಾಸ್ಕರ್ ಸ್ನೇಹಿತರು, ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗ ಗಣೇಶ್ ಸ್ನೇಯಿತರು, ಡೂಂಲೈಟ್ ವೃತ್ತ ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.

ಬ್ರಾಹ್ಮಣರ ಬೀದಿಯ ರಾಮದೇವರ ಗುಡಿ :

ಶ್ರೀರಾಮನವಮಿ ಅಂಗವಾಗಿ ನಗರದ ಬಸ್‌ನಿಲ್ದಾಣದ ಸಮೀಪವಿರುವ ಶ್ರೀರಾಮದೇವರ ಗುಡಿಯಲ್ಲಿ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.

ಇಡೀ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿದ್ದು, ಇಂದು ಬೆಳಗ್ಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಭರದಿಂದ ನಡೆಯಿತು.

ಕೋಲಾರ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದ ಸಮೀಪ ನಿರ್ಮಾಣಗೊಂಡಿರುವ ಬೃಹತ್ ಶ್ರೀರಾಮ ಚಂದ್ರ ಮೂರ್ತಿಗೆ ಹಾಗೂ ಆಂಜನೇಯಸ್ವಾಮಿಗೆ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಿದ್ದು, ಪಾನಕ, ಹೆಸರು ಬೇಳೆ, ಮಜ್ಜಿಗೆ ವಿನಿಯೋಗ ಕಾರ್ಯಕ್ರಮಕ್ಕೆ ನಡೆಯಿತು.

ನಗರದ ದೊಡ್ಡಪೇಟೆಯ ಶ್ರೀರಾಮ ದೇವಸ್ಥಾನ, ವೆಂಕಟರಮಣಸ್ವಾಮಿ, ಬ್ರಾಹ್ಮಣರ ಬೀದಿಯ ದೊಡ್ಡ ಆಂಜನೇಯಸ್ವಾಮಿ, ಕುರುಬರ ಪೇಟೆಯ ಪಂಚಮುಖಿ ಗಣಪತಿ, ನಗರದೇವತೆ ಕೋಲಾರಮ್ಮ ದೇವಾಲಯ, ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ, ಪಾಲಸಂದ್ರ ಬಡಾವಣೆಯ ಎಸ್ಪಿ ನಿವಾಸದ ಮುಂದಿನ ಆಂಜನೇಯಸ್ವಾಮಿ ದೇವಾಲಯ, ಪಿಸಿ ಬಡಾವಣೆಯ ಕೋದಂಡರಾಮಸ್ವಾಮಿ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಭಕ್ತರು ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಮುಂಜಾನೆಯಿAದಲೇ ಸಾಲುಗಟ್ಟಿ ನಿಂತಿದ್ದರು. ಅಭಿಷೇಕ, ಮಹಾಸು ದರ್ಶನ ಹೋಮ, ರಾಮತಾರಕ ಹೋಮ, ರಾಮಾಯಣ ಪಾರಾಯಣ, ವೇದ ಪಾರಾಯಣ, ಮಹಾಮಂಗಳಾರತಿ ನೆರವೇರಿದವು. ಹಲವು ಭಕ್ತರು ಉಪವಾಸ ವ್ರತ ಆಚರಿಸಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರು.

ಭಜನಾ ಮಂಡಳಿಗಳು ರಾತ್ರಿ ಶ್ರೀರಾಮ ಭಜನೆ, ಹನುಮಾನ್ ಕೀರ್ತನೆ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು.

ಚಿತ್ರ ೦೬ ಕೆ.ಎಲ್.ಆರ್. ೦೩ : ಕೋಲಾರದ ಪಾಲಸಂದ್ರ ಬಡಾವಣೆಯ ಎಸ್ಪಿ ನಿವಾಸದ ಮುಂಭಾಗವಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಅಲಂಕಾರ ಮಾಡಿದ್ದು, ಅರ್ಚಕ ವೆಂಕಟೇಶ್ ನೇತೃತ್ವ ವಹಿಸಿದ್ದರು.

ಚಿತ್ರ ೦೬ ಕೆ.ಎಲ್.ಆರ್. ೦೩ಎ : ಶ್ರೀರಾಮನವಮಿ ಅಂಗವಾಗಿ ಕೋಲಾರದ ಡೂಂಲೈಟ್ ವೃತ್ತದಲ್ಲಿ ಅನ್ನಪೂರ್ಣಾ ಹೋಟೆಲ್ ಮಾಲೀಕರು ಹಾಗೂ ಅವರ ಸ್ನೇಹಿತರು ರಾಮನವಮಿ ಆಚರಿಸಿ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಿದರು.

ಚಿತ್ರ ೦೩ ಕೆ.ಎಲ್.ಆರ್. ೦೩ಬಿ : ಕೋಲಾರನಗರದ ಪಿಸಿ ಬಡಾವಣೆಯ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ೪೩ನೇ ವರ್ಷದ ರಾಮೋತ್ಸವ ಕಾರ್ಯಕ್ರಮಗಳ ಅಂಗವಾಗಿ ಶ್ರೀರಾಮನವಮಿಯಾದ ಭಾನುವಾರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹೂವಿನ ಅಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net