ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯೆಂದೇ ಪರಿಗಣಿಸಿರುವ ಟೊಮೆಟೋ ಬೆಳೆಯನ್ನು ಬೆಳೆಯಲು ರೈತರು ಮುಂದಾಗಿದ್ದು, ಜೂನ್ ಜುಲೈನಲ್ಲಿ ಬರುವ ಸುಗ್ಗಿಗೆ ಕಳೆದ ಮಾರ್ಚ್ ೨ನೇ ವಾರದಿಂದ ಏಪ್ರಿಲ್ ತಿಂಗಳ ಪ್ರಾರಂಭದಿAದಲೇ ಟೊಮೆಟೋ ಸಸಿಗಳನ್ನು ನಾಟಿ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಸುಮಾರು ೧೫೦೦ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ರೈತರು ಸಜ್ಜಾಗಿದ್ದಾರೆ. ಈಗಾಗಲೇ ಸಸಿಗಳನ್ನು ನಾಟಿ ಮಾಡಿದ್ದಾರೆ. ಪ್ರತಿವರ್ಷ ಜೂನ್ ಜುಲೈ ತಿಂಗಳಿನಲ್ಲಿ ಟೊಮೆಟೋ ಸುಗ್ಗಿ, ಈ ಎರಡೂ ತಿಂಗಳಿನಲ್ಲಿ ಉತ್ತಮ ಬೆಲೆ ಸಿಗುತ್ತದೆ. ಕೋಲಾರ ಮಾರುಕಟ್ಟೆಯಿಂದ ಹೊರ ರಾಜ್ಯ ಮತ್ತು ಹೊರ ದೇಶಗಳಿಗೂ ಕೋಲಾರ ಮಾರುಕಟ್ಟೆಯಿಂದ ಟೊಮೆಟೋ ರಫ್ತಾಗುತ್ತದೆ.
ಹೊರ ರಾಜ್ಯಗಳಾದ ಮಹಾರಾಷ್ಟç, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯುತ್ತಾರೆ. ಮಾರ್ಚ್, ಏಪ್ರಿಲ್ ಮೇ ತಿಂಗಳಿನಲ್ಲಿ ಹೊರ ರಾಜ್ಯಗಳಲ್ಲಿ ಉಷ್ಣಾಂಶ ಹೆಚ್ಚಾಗಿರುವ ಕಾರಣ ಈ ರಾಜ್ಯಗಳಲ್ಲಿ ಟೊಮೆಟೋ ಫಸಲು ಇಳಿಮುಖವಾಗುತ್ತದೆ. ಹಾಗೂ ಬೆಳೆ ಬೆಳೆಯಲು ಕಷ್ಠವಾಗುತ್ತದೆ. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಟೊಮೆಟೋ ಬೆಳೆಯಲು ಉತ್ತಮ ವಾತಾವರಣ ಇರುತ್ತದೆ. ಆದ್ದರಿಂದ ಕೋಲಾರ ಟೊಮೆಟೋಗೆ ಬೇಡಿಕೆ ಹೆಚ್ಚಾಗುತ್ತದೆ.
ಈ ಹಿನ್ನಲೆಯಲ್ಲಿ ಪ್ರತಿವರ್ಷ ಕೋಲಾರ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿಗೂ ಫಸಲು ಬರುವಂತೆ ಟೊಮೆಟೋ ಸಸಿಗಳನ್ನು ಮಾರ್ಚ್ ೨ನೇ ವಾರದಿಂದ ಮೇ ೨೦ರ ತನಕ ನಾಟಿ ಮಾಡುತ್ತಾರೆ. ಜೂನ್ ತಿಂಗಳಿನಲ್ಲಿ ಫಸಲು ಪ್ರಾರಂಭವಾಗಿ ಜುಲೈ ಮತ್ತು ಆಗಸ್ಟ್ ತಿಂಗಳ ತನಕ ಉತ್ತಮ ಬೆಲೆ ಇರುತ್ತದೆ ಎಂದು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಮುಂದಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಪ್ರಸ್ತುತ ಉಷ್ಣಾಂಶ ಹೆಚ್ಚಾಗಿದೆ. ಆದರೆ ರೈತರು ಕಷ್ಟ ಬಿದ್ದು, ಬೆಳೆಯನ್ನು ಬೆಳೆಯುತ್ತಿದ್ದಾರೆ. ಒಂದು ಹೆಕ್ಟೇರ್ ಟೊಮೆಟೋ ಬೆಳೆಯಲು ೩ ಲಕ್ಷದಿಂದ ೪ ಲಕ್ಷ ರೂ.ಗಳ ತನಕ ಖರ್ಚು ಬರುತ್ತದೆ. ಆದರೂ ಸಹ ರೈತರು ಸಾಲ ಸೋಲ ಮಾಡಿ ಟೊಮೆಟೋ ಬೆಳೆಯಲು ಮುಂದಾಗಿದ್ದಾರೆ.
ಡ್ರಿಪ್ ಮಲ್ಚಿಂಗ್ ಪೇಪರ್‌ಗೆ ಡಿಮ್ಯಾಂಡ್ :
ಈಗ ಟೊಮೆಟೋ ಸಸಿ ನಾಟಿ ಮಾಡುವ ಸುಗ್ಗಿಯಾಗಿರುವ ಕಾರಣ ಡ್ರಿಪ್ ಪೈಪ್ ಮತ್ತು ಮಲ್ಚಿಂಗ್ ಪೇಪರ್ ಹಾಗೂ ಗೊಬ್ಬರ ಮತ್ತು ಔಷಧಿಗಳಿಗೆ ಬಾರಿ ಬೇಡಿಕೆ ಇದೆ. ಅಂಗಡಿಗಳವರು ತಮಗೆ ಇಷ್ಟ ಬಂದAತೆ ರೀತಿಯಲ್ಲಿ ಡಿಮ್ಯಾಂಡ್ ನೋಡಿಕೊಂಡು ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ.
ಟೊಮೆಟೋ ಬೆಳೆಯಲು ಪ್ರತಿ ರೈತರು ಮಲ್ಚಿಂಗ್ ಪೇಪರ್‌ನ್ನು ಭೂಮಿಗೆ ಅಳವಡಿಸುತ್ತಾರೆ. ಹನಿ ನೀರಾವರಿಗಾಗಿ ಡ್ರಿಪ್ ಪೈಪ್ ಬಳಸುತ್ತಾರೆ. ಇವುಗಳ ಬೆಲೆ ಗಗನಕ್ಕೇರಿದೆ. ಸಸಿ ನಾಡಿ ಮಾಡಿ ಒಂದು ತಿಂಗಳ ನಂತರ ಗಿಡ ದೊಡ್ಡದಾದ ನಂತರ ಗಿಡ ಎತ್ತರಕ್ಕೆ ಬೆಳೆಯಲು ಕಡ್ಡಿ ಬಳಸುತ್ತಾರೆ. ಕಡ್ಡಿಯ ಬೆಲೆಯು ಹೆಚ್ಚಾಗಿದೆ. ೮ ಅಡಿ ಉದ್ದದ ಕಡ್ಡಿ ರೂ.೩೫ ರಿಂದ ೪೦ ರೂ.ಗಳಿಗೆ ಮಾರಾಟವಾಗುತ್ತಿದೆ. ಹೀಗೆ ಟೊಮೆಟೋ ಬೆಳೆಸುವ ಎಲ್ಲಾ ಸಾಮಗ್ರಿಗಳ ಬೆಲೆಯು ಹೆಚ್ಚಾಗಿದೆ. ಒಂದು ನಾರಿಗೆ ರೂ.೧.೫೦ ರಿಂದ ೨ ರೂ.ಗಳನ್ನು ನೀಡಿ ಖರೀದಿಸುತ್ತಿದ್ದು, ಉಷ್ಣಾಂಶ ಹೆಚ್ಚಾಗಿರುವ ಕಾರಣ ಸಸಿಗಳು ಸಾಯುತ್ತಿದ್ದು ಅವುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಕೋಟ್
ಕೋಲಾರ ಜಿಲ್ಲೆಯಲ್ಲಿ ೧೫೦೦ ಹೆಕ್ಟೇರ್‌ನಿಂದ ೨೦೦೦ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಸಸಿಗಳನ್ನು ರೈತರು ನಾಟಿ ಮಾಡಿದ್ದಾರೆ. ಉಷ್ಣಾಂಶ ಹೆಚ್ಚಾಗಿರುವ ಕಾರಣ ನಾಟಿ ಮಾಡಿದ ಸಸಿಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ರೋಗ ರುಜಿನಗಳು ಬಾರದಂತೆ ಸಕಾಲಕ್ಕೆ ಔಷಧಿಗಳನ್ನು ಸಿಂಪಡನೆ ಮಾಡಿಕೊಂಡು ಕೊಟ್ಟಿಗೆ ಗೊಬ್ಬರದ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನು ಕಾಲ ಕಾಲಕ್ಕೆ ನೀಡಬೇಕಾಗಿದೆ. ಕಳಪೆ ಬಿತ್ತನೆ ಬೀಜಕ್ಕೆ ಮತ್ತು ಕಳಪೆ ಸಸಿಗಳ ವಿತರಣೆ ಬಗ್ಗೆ ರೈತರು ಜಾಗೃತವಹಿಸಬೇಕು. ಇಲಾಖೆಯವರು ಕ್ರಮ ವಹಿಸಲಾಗುತ್ತಿದ್ದೆ. ಅದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಲು ಸರ್ಕಾರ ಮುಂದಾಗಿದೆ. ಅದು ಕಾರ್ಯಗತವಾದರೆ ಎಲ್ಲದಕ್ಕೂ ಕಡಿವಾಣ ಬೀಳುತ್ತದೆ.
-ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ. ಕೋಲಾರ
ಕೋಟ್
ರೈತರು ಒಂದೇ ಬೆಳೆಯನ್ನು ನಂಬಿ ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಟೊಮೆಟೋ ಬೆಳೆಯಲು ಮುಂದಾಗಿದ್ದಾರೆ. ಇದು ವರ್ಷಕ್ಕೆ ಒಂದು ಅಥವಾ ೨ ಸುಗ್ಗಿ ಬರುತ್ತವೆ. ಈ ಸಗ್ಗಿಯಲ್ಲಿ ಉತ್ತಮ ಬೆಲೆ ಸುಗುತ್ತದೆಂಬುದು ರೈತರ ಅನಿಸಿಕೆ. ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಆದರೂ ಸಹ ರೈತರು ಬೆಳೆ ಮಾಡಲು ಮುಂದಾಗಿದ್ದಾರೆ. ವೈರಸ್ ಕಾಟ ಇಲ್ಲದಿದ್ದರೆ ರೈತರು ಬಚಾವ್ ಆಗುತ್ತಾರೆ. ಪ್ರತಿವರ್ಷ ವೈರಸ್ ಕಾಟ ತಪ್ಪಿದ್ದೇ ಅಲ್ಲ. ಈ ವರ್ಷ ವೈರಸ್ ಏನು ಮಾಡುತ್ತದೆಯೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಉಷ್ಣಾಂಶ ಹೀಗೆ ಮುಂದುವರೆದರೆ ವೈರಸ್ ಕಾಟದಿಂದ ಬಚಾವ್ ಆದಂತೆ ಆಗುತ್ತದೆ.
-ತರ‍್ನಹಳ್ಳಿ ಮಂಜು. ರೈತ
ಚಿತ್ರ ೧೦ ಕೆ.ಎಲ್.ಆರ್. ೦೨ : ಟೊಮೆಟೋ ಸುಗ್ಗಿಗೆ ಟೊಮೆಟೋ ಸಸಿಗಳನ್ನು ನಾಟಿ ಮಾಡಿರುವ ರೈತರು
ಚಿತ್ರ ೧೦ ಕೆ.ಎಲ್.ಆರ್. ೦೨ಎ : ತರ‍್ನಹಳ್ಳಿ ಮಂಜು. ರೈತ
ಚಿತ್ರ ೧೦ ಕೆ.ಎಲ್.ಆರ್. ೦೨ಬಿ : ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ. ಕೋಲಾರ