ಕೋಲಾರ ಜಿಲ್ಲೆಯ ೧೯ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ೮೨೯೯ ವಿದ್ಯಾರ್ಥಿಗಳ ನೋಂದಣಿ/ಸುಗಮ ಪರೀಕ್ಷೆಗೆ ಕ್ರಮ/ಡಿಸಿ ಅಕ್ರಂ ಪಾಷಾ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ೧೯ ಕೇಂದ್ರಗಳಲ್ಲಿ ಏ.೧೮ ಹಾಗೂ ೧೯ ರಂದು ಎರಡು ದಿನಗಳ ಕಾಲ ನಡೆಯುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ೮೨೯೯ ವಿದ್ಯಾರ್ಥಿಗಳು ನೋದಾಯಿಸಿದ್ದು, ಯಾವುದೇ ಗೊಂದಲಕ್ಕೆಡೆಯಿಲ್ಲದAತೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.

ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಸಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರ ನಗರದ ೧೭ ಹಾಗೂ ಕೆಜಿಎಫ್ ನಗರದ ೨ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಅಗತ್ಯ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೊಠಡಿಗಳಲ್ಲಿ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ, ಶುದ್ದ ಕುಡಿಯುವ ನೀರು, ಶೌಚಾಲಯ ಸ್ವಚ್ಚತೆಗೆ ಗಮನ ನೀಡಲು ಸೂಚಿಸಿ, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದAತೆ ಕ್ರಮವಹಿಸಲು ಸೂಚಿಸಿದರು.

ಪರೀಕ್ಷಾ ಕೇಂದ್ರಗಳ ಮಾರ್ಗಾಧಿಕಾರಿಗಳು ಪರೀಕ್ಷಾ ದಿನಗಳಂದು ಖಜಾನೆಯಿಂದ ಸೀಲ್ ಮಾಡಲ್ಪಟ್ಟಿರುವ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟುಗಳ ಬಂಡಲ್ ಗಳನ್ನು ನಿಗಧಿತ ಸಮಯಕ್ಕೆ ಸರಿಯಾಗಿ ತ್ರಿಸದಸ್ಯ ಸಮಿತಿಯ ಅಧಿಕಾರಿಗಳಿಂದ ಪಡೆದು ನಿಯಮಾನುಸಾರ ಪರೀಕ್ಷಾ ಕೇಂದ್ರಗಳಿಗೆ ಪೋಲಿಸ್ ರಕ್ಷಣೆಯಲ್ಲಿ ಬೆಳಿಗ್ಗೆ ೧೦.೦೦ ಗಂಟೆಗೆ ಮುನ್ನ ಹಾಗೂ ಮದ್ಯಾಹ್ನ ೨.೦೦ ಗಂಟೆಗೆ ಮುನ್ನ ತಲುಪಿಸುವುದು ಹಾಗೂ ಪರೀಕ್ಷಾ ಅವಧಿ ಮುಗಿದ ನಂತರ ಓಎಂಆರ್ ಶೀಟುಗಳ ಬಂಡಲ್ ಗಳನ್ನು ವಾಪಸ್ ಖಜಾನೆಗೆ ತಲುಪಿಸಬೇಕು ಎಂದರು.

ಕೇAದ್ರಗಳ ಸುತ್ತ ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ಸುತ್ತಮುತ್ತ ನಿಷೇಧಾಜ್ಞೆö ಜಾರಿ ಮಾಡುವ ಬಗ್ಗೆ ಹಾಗೂ ಪರೀಕ್ಷಾ ಕೇಂದ್ರದಿAದ ೨೦೦ ಅಡಿಗಳ ಅಂತರದೊಳಗಿರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವ ಬಗ್ಗೆ ಕ್ರಮವಹಿಸಲಾಗಿದೆ ಎಂದು ಡಿಸಿಯವರು ತಿಳಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೋಲೀಸ್ ರಕ್ಷಣೆ ನೀಡುವ ಬಗ್ಗೆ ಸಂಬAಧಿಸಿದ ಪರೀಕಾ ಕೇಂದ್ರಗಳ ಉಪ ಮುಖ್ಯ ಅಧೀಕ್ಷಕರುಗಳು ಆಯಾ ಕೇಂದ್ರಗಳಿಗೆ ಸಂಬAಧಿಸಿದ ಪೋಲೀಸ್ ಠಾಣೆಗಳಲ್ಲಿ ರಕ್ಷಣೆ ಕೋರುವುದು ಹಾಗೂ ಠಾಣೆಯ / ಅಧಿಕಾರಿಯ ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಎಂದರು.

ಸುಗಮ ಪರೀಕ್ಷೆಗೆ ಜಾಗೃತದಳ ನೇಮಕ
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಸಭೆಗೆ ಮಾಹಿತಿ ನೀಡಿ, ಸುಗಮ ಪರೀಕ್ಷೆ ಹಾಗೂ ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ, ಪ್ರತಿಕೇಂದ್ರಕ್ಕೂ ಕೇಂದ್ರ ಕಚೇರಿಯ ಜಾಗೃತದಳ, ಜಿಲ್ಲಾಧಿಕಾರಿಗಳ ನೇತೃತ್ವದ ಒಂದು ಜಾಗೃತದಳ, ತಮ್ಮ ನೇತೃತ್ವದ ಒಂದು ಜಾಗೃತದಳ, ಹಾಗೂ ಪರೀಕ್ಷಾ ಕೇಂದ್ರವಾರು ದ್ವಿಸದಸ್ಯ ಜಾಗೃತದಳಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಪತ್ರ ೨ ಪೆನ್ನು, ಯಾವುದಾದರೂ ಒಂದು ಗುರುತಿನ ಚೀಟಿ ಮಾತ್ರ ತರಲು ಅವಕಾಶ ನೀಡಲಾಗುವುದು. ಯಾವುದೇ ರೀತಿಯ ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ. ಆಭರಣ, ಶೂ, ಟೋಪಿ, ಪೂರ್ಣ ತೋಳಿನ ಬಟ್ಟೆ ಧರಿಸುವುದನ್ನೂ ನಿಷೇಧಿಸಲಾಗಿದೆ. ಪರೀಕ್ಷೆಗೆ ಸಂಬAಧಪಡದ ಯಾವುದೇ ವ್ಯಕ್ತಿಗಳಾಗಲಿ, ಆಡಳಿತ ಮಂಡಳಿಯವರಾಗಲಿ ಕೇಂದ್ರದ ಒಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ವಿದ್ಯಾರ್ಥಿಗಳು, ಕೊಠಡಿ ಮೇಲ್ಚಿಚಾರಕರು ಮೊಬೈಲ್ ತರಬಾರದು ಎಂದು ತಿಳಿಸಿದ ಅವರು, ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಫೋಟೋಗ್ರಾಫರ್, ವಿಡೀಯೋಗ್ರಾಫರ್, ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆ ಕೇಂದ್ರಗಳ ವಿವರ
ಕೋಲಾರ ನಗರದ ಅಲ್‌ಅಮೀನ್ ಪಿಯು ಕಾಲೇಜಿನಲ್ಲಿ ೫೦೪ ವಿದ್ಯಾರ್ಥಿಗಳು, ಗೋಕುಲ ಸ್ವತಂತ್ರö್ಯ ಪಿಯು ಕಾಲೇಜಿನಲ್ಲಿ ೪೮೦, ಮಹಿಳಾ ಸಮಾಜ ಪಿಯು ಕಾಲೇಜಿನ ಕೇಂದ್ರದಲ್ಲಿ ೫೯೪, ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ೫೨೮, ನೂತನ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ೩೧೨, ಆದರ್ಶ ಪಿಯು ಕಾಲೇಜಿನಲ್ಲಿ ೨೪೦ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.

ಸಹ್ಯಾದ್ರಿ ಪಿಯು ಕಾಲೇಜು ಕೇಂದ್ರದಲ್ಲಿ ೫೯೫, ಎನ್.ಎಂ.ಜೆ ಪಿಯು ಕಾಲೇಜಿನಲ್ಲಿ ೩೬೦, ಎಸ್‌ಎಫ್‌ಎಸ್ ಪಿಯು ಕಾಲೇಜಿನಲ್ಲಿ ೫೨೮ ಮಂದಿ, ಎಕ್ಸಲೆಂಟ್ ಪಿಯು ಕಾಲೇಜು ಕೇಂದ್ರದಲ್ಲಿ ೨೮೮,ಚಿನ್ಮಯ ವಿದ್ಯಾಲಯ ಕೇಂದ್ರದಲ್ಲಿ೫೦೪ ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ ೫೦೪ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.

ಮದರ್ ತೆರೇಸಾ ಪಿಯು ಕಾಲೇಜಿನಲ್ಲಿ ೨೮೮ ಮಂದಿ,ನಾರಾಯಣ ಪಿಯು ಕಾಲೇಜಿನಲ್ಲಿ ೨೮೮ ಮಂದಿ, ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ೫೫೨ ಮಂದಿ, ಆರ್.ವಿ.ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ೨೬೪ ಮಂದಿ, ಆರ್.ವಿ.ಇಂಟರ್ ನ್ಯಾಷನಲ್ ಶಾಲೆಯಲ್ಲಿ ೨೬೪ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.

ಉಳಿದಂತೆ ಕೆಜಿಎಫ್‌ನಲ್ಲಿ ಎರಡು ಕೇಂದ್ರಗಳಿದ್ದು, ಅಲ್ಲಿನ ಉರಿಗಾಂ ಸರ್ಕಾರಿ ಪಿಯು ಕಾಲೇಜಿನಲ್ಲಿ ೫೫೮ ಹಾಗೂ ಬಾಲಕಿಯರ ಸರ್ಕಾರಿ ಪಿಯುಕಾಲೇಜಿನ ಕೇಂದ್ರದಲ್ಲಿ ೩೩೬ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಇಟಿ ಪರೀಕ್ಷಾ ವೇಳಾಪಟ್ಟಿ
ಏ.೧೮ ರಂದು ಗುರುವಾರ ಬೆಳಗ್ಗೆ ೧೦-೩೦ರಿಂದ ೧೧-೫೦ ರವರೆಗೂ ಜೀವಶಾಸ್ತç, ಮಧ್ಯಾಹ್ನ ೨-೩೦ರಿಂದ ೩-೫೦ ರವರೆಗೂ ಗಣಿತ ಪರೀಕ್ಷೆ ನಡೆಯಲಿದೆ.

ಏ.೧೯ ರ ಶುಕ್ರವಾರ ಬೆಳಗ್ಗೆ ೧೦-೩೦ ರಿಂದ ೧೧-೫೦ ರವರೆಗೂ ಭೌತಶಾಸ್ತç, ಮಧ್ಯಾಹ್ನ ೨-೩೦ರಿಂದ ೩-೫೦ ರವರೆಗೂ ರಸಾಯನಶಾಸ್ತç ಪರೀಕ್ಷೆ ನಡೆಯಲಿದೆ ಎಂದು ಪಿಯು ಡಿಡಿ ರಾಮಚಂದ್ರಪ್ಪ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಾಣಿಕ್ಯಾಳ್, ಪ್ರಾಂಶುಪಾಲರಾದ ಎಂ.ಬಾಲಕೃಷ್ಣ, ಪರುಶುರಾಂ ಉನ್ಕಿ, ಶೇಖರ್‌ಸೇರಿದಂತೆ ಎಲ್ಲಾ ಕೇಂದ್ರದ ಪ್ರಾಂಶುಪಾಲರು, ಪ್ರಶ್ನೆಪತ್ರಿಕೆ ಪಾಲಕರು, ಸಹ ಮುಖ್ಯ ಅಧೀಕ್ಷಕರು, ವಿವಿಧ ಕಾಲೇಜುಗಳ ಉಪಸ್ಥಿತರಿದ್ದರು.

ಚಿತ್ರ ೧೬ ಕೆ.ಎಲ್.ಆರ್. ೦೨ : ಕೋಲಾರದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಸಿದ್ದತೆಗಳ ಕುರಿತ ಪೂರ್ವಭಾವಿ ಸಭೆ ನಡೆಯಿತು. ಪಿಯು ಉಪನಿರ್ದೇಶಕ ರಾಮಚಂದ್ರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net