ಕೋಲಾರ ಜಿಲ್ಲೆಯ ಮಹನೀಯರು ತಮ್ಮದೇ ಕೊಡುಗೆ ನೀಡಿದ್ದಾರೆ / ಅಂತಹ ಜಿಲ್ಲೆಗೆ ಕನಿಷ್ಟ ನೀರು ನೀಡದಿರುವುದು ವಿಷಾದನೀಯ / ವೀರೇಶಸ್ವಾಮಿಜೀ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರದಲ್ಲಿ ಚಿನ್ನ ಮಾತ್ರವಲ್ಲ ಚಿನ್ನಕ್ಕಿಂತ ಅಮೂಲ್ಯವಾದ ಮಕ್ಕಳನ್ನು ಹೊಂದಿದ್ದು, ಐತಿಹಾಸಿಕ ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ದಾಖಲೆಗಳನ್ನು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ವಿಶ್ವದಾದ್ಯಂತ ಪಸರಿಸಿದ್ದಾರೆ. ಸರ್.ಎಂ.ವಿ, ಇನ್ಫೋಸೀಸ್ ನಾರಾಯಣಮೂರ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗರ್, ಬಿ.ಕೆ.ಎಸ್.ಅಯ್ಯಂಗಾರ್. ಡಿ.ವಿ.ಜಿ. ಸೇರಿದಂತೆ ಅನೇಕರು ತಮ್ಮದೇ ಆದ ಕೊಡುಗೆ ನೀಡಿದವರು ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಸ್ವಾಮಿಜೀ ತಿಳಿಸಿದರು.

ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನೆ ನೀಡಿ ಮಾತನಾಡಿದರು.

ವಿದ್ಯೆಯ ಹಾತೊರೆಯುವನನ್ನು ವಿದ್ಯಾರ್ಥಿ ಎನ್ನುತ್ತಾರೆ. ವಿದ್ಯೆಯೆಂಬುವುದು ಪರಿಮಳದ ಪುಷ್ಪವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರುತರ ಸಾಧನೆ ಮಾಡಿ, ಗುರುತಿಸುವಂತಾಗಬೇಕು. ಶ್ರೀಮಂತಿಯಿAದ ದೊಡ್ಡವನಾಗಲು ಸಾಧ್ಯವಿಲ್ಲ. ವ್ಯಕ್ತಿತ್ವದಿಂದ ಮಾತ್ರ ದೊಡ್ಡವರಾಗಲು ಸಾಧ್ಯ. ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವ ಕಾಪಾಡಿ ಕೊಳ್ಳುವಂತಾಗಬೇಕು ಎಂದರು.

ಸರ್.ಎಂ.ವಿ ಮೈಸೂರಿನ ಕೆ.ಆರ್.ಎಸ್ ನಿರ್ಮಿಸಿದರು, ವಿಶ್ವವಿದ್ಯಾಲಯ ಸ್ಥಾಪಿಸಿದರು, ವಿದ್ಯುತ್ ನೀಡಿದರು, ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿದವರು, ಇಂತಹ ಮಹಾನ್ ಚೇತನರು ಇದ್ದಂತ ತವರು ಜಿಲ್ಲೆಯಾಗಿದೆ. ನಾನು ಸಹ ಕೋಲಾರ ಜಿಲ್ಲೆಯವನೇ ಆಗಿದ್ದೇನೆಂದು ಪರಿಚಯಿಸಿಕೊಂಡರು. ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷ ಕಳೆದರೂ ಸಹ ನಮ್ಮ ಸರ್ಕಾರಕ್ಕೆ ಕೋಲಾರದ ಜಿಲ್ಲೆಗೆ ಕನಿಷ್ಟ ನೀರು ಕೊಡುವಷ್ಟು ಕೃತಜ್ಞಾನತಾಭಾವನೆ ಇಲ್ಲದಿರುವುದು ವಿಷಾದನೀಯ ಸಂಗತಿ ಎಂದರು.

ಶಿಕ್ಷಣದಿAದ ಮೊದಲು ಚರಿತ್ರೆ ನಿರ್ಮಾಣ ಮಾಡಬೇಕು. ಶಿಕ್ಷಣದ ಅಧ್ಯಯನದಿಂದ ಮಾನಸಿಕ ಶಕ್ತಿ, ಬೌತಿಕ ಶಕ್ತಿಗಳು ವಿಸ್ತರಿಸಬೇಕು.ಪ್ರಾಮಾಣಿಕತೆಗೆ ಅರ್ಹನಾಗಿರಬೇಕು. ಸ್ವಾವಲಂಭನೇಯ ಬದುಕಿನಲ್ಲಿ ಸ್ವಾವಲಂಭಿ ಜೀವನ ನಡೆಸುವಂತಾಗಬೇಕು. ವಿದ್ಯಾರ್ಥಿಗಳ ಜೀವನದ ಕಟ್ಟಡದ ಅಡಿಪಾಯ ಗಟ್ಟಿಯಾಗಿದ್ದು, ಎಷ್ಟು ಸುಭದ್ರವಾಗಿರುತ್ತದೆಯೋ ಅಷ್ಟೇ ಕಟ್ಟಡವು ಸುರಕ್ಷಿತವಾಗಿರಲು ಸಾಧ್ಯ. ಶರೀರ ಪವಿತ್ರವಾಗಿರಬೇಕು, ದೇಹವು ಸಧೃಡವಾಗಿರಬೇಕು. ಬೌತಿಕವಾಗಿ ನಿಷ್ಟಾವಂತನಾಗಿರಬೇಕು. ಭೌತಿಕನಾಗಿ ಉದಯೋನ್ಮುಖ ಮಕ್ಕಳಾಗಬೇಕು. ಇಂದಿನ ಮಕ್ಕಳು ಮುಂದಿನ ಭವಿಷ್ಯದ ಸಂಪನ್ಮೂಲವಾಗಬೇಕೆAದು ಎಂದು ತಿಳಸಿದರು.

ಇಂದು ವಿದ್ಯಾರ್ಥಿಗಳು ಸಿ.ಸಿ.ಕ್ಯಾಮೆರದಡಿಯಲ್ಲಿ ಪರೀಕ್ಷೆಗಳು ಬರೆಯುವಂತಾಗಿದೆ. ಸಮಯ ಪ್ರಜ್ಞೆ, ಶಿಸ್ತು, ನೀತಿ ಹೇಳಿ ಕೊಡುವಂತ ಶಿಕ್ಷಕರಿಗೂ ಸಹ ಬಯೋಮೆಟ್ರಿಕ್ ಒತ್ತಬೇಕಾದ ದುಃಸ್ಥಿತಿ ಉಂಟಾಗಿದೆ. ಬಿಟ್ಟಿಯಾಗಿ ಗಿಟ್ಟಿಸುವ ೫ ಡಾಲರ್‌ಗಳಿಗಿಂತ ಶ್ರಮಪಟ್ಟು ಗಳಿಸುವಂತ ೧ ಡಾಲರ್ ಹೆಚ್ಚು ಮೌಲ್ಯಯುತವಾದದ್ದು, ಅನ್ಯಾಯದಿಂದ ಗೆಲ್ಲುವ ಬದಲು ನ್ಯಾಯವಾದ ಮಾರ್ಗದಲ್ಲಿ ಸೋಲುವುದೇ ಗೌರವದ ಘನತೆಯಾಗಿದೆ ಎಂದರು.

ಚಿತ್ರ ೦೬ ಕೆ.ಎಲ್.ಆರ್. ೦೭ : ಕೋಲಾರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಟಿ.ಚೆನ್ನಯ್ಯ ರಂಗಮAದಿರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಸ್ವಾಮಿಜೀ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net