ಕೋಲಾರ ಜಿಲ್ಲೆಗೆ ಮೇ.೨೯ ರಿಂದ ಜೂ.೧೨ರ ವರೆಗೆ ವಿಜ್ಞಾನಿಗಳ ನಡೆ ರೈತರ ಕಡೆ ಕಾರ್ಯಕ್ರಮ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಕೃಷಿ ಅಭಿಯಾನ ಪೂರ್ವ ಮುಂಗಾರು ೨೦೨೫ ನ್ನು ಮೇ.೨೯ ರಿಂದ ಜೂ. ೧೨ ರವರೆಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಅದರ ವಿವಿಧ ಅಂಗ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಸಂಬAಧಿತ ಅಭಿವೃದ್ಧಿ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಆತ್ಮ ಯೋಜನೆ ಸಹಯೋಗದೊಂದಿಗೆ ಮುಂಗಾರು ಹಂಗಾಮಿನಲ್ಲಿ ಕೃಷಿಕರಿಗೆ ಹೊಸ ತಾಂತ್ರಿಕತೆಗಳು ಲಭ್ಯವಾಗುವಂತೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಏರ್ಪಡಿಸಲಾಗಿದೆ ಎಂದು ಕೋಲಾರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ರವರ ತಿಳಿಸಿದ್ದಾರೆ.

ಈ ಬಗ್ಗೆ ಅವರು ಪತ್ರಿಕಾ ಹೇಳಿಕೆ ನೀಡಿ, ಈ ವಿನೂತನ ಕಾರ್ಯಕ್ರಮದಲ್ಲಿ ಮುಂಗಾರು ಬೆಳೆಗಳಿಗೆ ಸಂಬAಧಿಸಿದ ಸುಧಾರಿತ ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು. ಸರ್ಕಾರಿ ನೀತಿಗಳು ಮತ್ತು ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸುವುದು. ಬೆಳೆ ಮತ್ತು ಕೃಷಿ ಪರಿಕರಗಳ ಆಯ್ಕೆಗಳ ಬಗ್ಗೆ ಉತ್ತಮ ಮಾಹಿತಿ ಹಾಗೂ ಮಣ್ಣಿನ ಆರೋಗ್ಯ ಕಾರ್ಡ್ಗಳ ಬಳಕೆಯನ್ನು ಉತ್ತೇಜಿಸಲಾಗುವುದು ಎಂದಿದ್ದಾರೆ.

ಮಣ್ಣು ಪರೀಕ್ಷೆ ಆಧಾರಿತ ಪರಿಕರ ಮತ್ತು ಬೆಳೆ ಆಯ್ಕೆ ಮಾಡುವುದು. ರಸಗೊಬ್ಬರಗಳ ವಿವೇಚನಾಯುಕ್ತ ಬಳಕೆಯನ್ನು ಉತ್ತೇಜಿಸಿ ಉತ್ತಮ ಕೃಷಿ ಪದ್ದತಿಗಳ ಮೇಲೆ ಒತ್ತು ನೀಡುವುದು. ಭವಿಷ್ಯದ ಸಂಶೋಧನೆಯನ್ನು ರೂಪಿಸಲು ರೈತರಿಂದ ಕೃಷಿಗೆ ಸಂಬAಧಿಸಿದ ಸಮಸ್ಯೆಗಳನ್ನು ಹಾಗೂ ಕ್ಷೇತ್ರ ಮಟ್ಟದ ನೂತನ ಪರಿಹಾರಗಳನ್ನು ಸಂಗ್ರಹಿಸುವುದು. ಈ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ.

ಸದರಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಎಲ್ಲಾ ಅಭಿವೃದ್ದಿ ಇಲಾಖೆಗಳ ಅಧಿಕಾರಿಗಳು ರೈತರ ಕಡೆ ತೆರಳಿ, ಜಿಲ್ಲೆಯ ಎಲ್ಲ ರೈತರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ರಾಷ್ಟ್ರೀಯ ಜನ ಜಾಗೃತಿ ಅಭಿಯಾನದಲ್ಲಿ ೧೫೦೦ ರಿಂದ ೨೦೦೦ ತಂಡಗಳ ಮೂಲಕ ದೇಶದ ೭೦೦ ಜಿಲ್ಲೆಗಳಲ್ಲಿನ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net