ಕೋಲಾರ ಜಿಲ್ಲೆಗೆ ಎಸ್ಸೆಸ್ಸೆಲ್ಸಿ ಶೇ.೬೮.೩೭ ಫಲಿತಾಂಶದೊAದಿಗೆ ೧೪ನೇ ಸ್ಥಾನಕ್ಕೆ ಜಿಗಿತ / ಎಂ.ರಕ್ಷಾ, ಭಾವನಿಕ ಟಾರ‍್ಸ್ / ಅನು, ತೇಜಸ್ ನಾರಾಯಣಸ್ವಾಮಿಗೆ ೨ನೇ ಸ್ಥಾನ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ ಕುಳಿತಿದ್ದ ೧೮,೫೬೦ ಮಂದಿ ವಿದ್ಯಾರ್ಥಿಗಳ ಪೈಕಿ ೧೨,೭೦೮ ಮಂದಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಶೇ.೬೮.೩೭ ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ೧೪ನೇ ಸ್ಥಾನವನ್ನು ಪಡೆದುಕೊಂಡಿದೆ.

ಜಿಲ್ಲೆಯ ಮುಳಬಾಗಿಲು ಅಮರಜ್ಯೋತಿ ಶಾಲೆಯ ಎಂ.ರಕ್ಷಾ ಹಾಗೂ ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ಎಸ್.ಭಾವನಿಕಾ ೬೨೪ ಅಂಕಗಳೊAದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಪರೀಕ್ಷೆಗೆ ಕುಳಿತಿದ್ದ ೯,೧೨೦ ಬಾಲಕರ ಪೈಕಿ ೫,೭೩೮ ಮಂದಿ ಉತ್ತೀರ್ಣರಾಗಿದ್ದು, ಶೇ.೬೨.೯೨ ಫಲಿತಾಂಶ ಬಂದಿದೆ. ಹಾಗೆಯೇ ಪರೀಕ್ಷೆ ಬರೆದ ೯,೪೬೬ ಬಾಲಕಿಯರ ಪೈಕಿ ೬,೯೭೦ ಮಂದಿ ಉತ್ತೀರ್ಣರಾಗಿ ಶೇ.೭೩.೬೩ ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಮರಜ್ಯೋತಿ ಶಾಲೆಯ ಜಿ.ಅನು ಹಾಗೂ ಕೋಲಾರ ತಾಲೂಕು ಸೀತಿ ಬಿಜಿಎಸ್ ಶಾಲೆಯ ಕೆ.ಎಸ್.ತೇಜಸ್ ಹಾಗೂ ಬಂಗಾರಪೇಟೆ ಮೊರಾರ್ಜಿದೇಸಾಯಿ ವಸತಿ ಶಾಲೆಯ ನಾರಾಯಣಸ್ವಾಮಿ ೬೨೩ ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ರೈತನ ಮಗಳಿಗೆ ೬೨೪ ಅಂಕಗಳ ಹಿರಿಮೆ :

ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯ ವಿದ್ಯಾರ್ಥಿನಿ ಎಂ.ರಕ್ಷಾ ಪುರಾಣಪ್ರಸಿದ್ದ ಕುರುಡು ಮಲೆಯ ರೈತ ಜಿ.ಮಂಜುನಾಥ್ ಮತ್ತು ಪ್ರತಿಭಾ ದಂಪತಿಗಳ ಪುತ್ರಿಯಾಗಿದ್ದು, ಈಕೆ ಇಂಗ್ಲೀಷ್ ವಿಷಯವೊಂದರಲ್ಲಿ ಮಾತ್ರ ೯೯ ಅಂಕ ಗಳಿಸಿದ್ದು, ಉಳಿದೆಲ್ಲಾ ವಿಷಯಗಳಲ್ಲಿ ಶೇ.೧೦೦ ಸಾಧನೆ ಮಾಡಿದ್ದು, ಶಾಲೆಯ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕಾರ್ಯದರ್ಶಿ ಅಶೋಕ್ ಹಾಗೂ ಮುಖ್ಯಶಿಕ್ಷಕ ಚೆಂಗಾರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.

ಭಾವನಿಕಾಗೂ ೬೨೪ :

ಕೆಜಿಎಫ್ ನಗರದ ಮಹಾವೀರ್ ಜೈನ್ ಶಾಲೆಯ ವಿದ್ಯಾರ್ಥಿನಿ ಎಸ್.ಭಾವನಿಕ ೬೨೪ ಅಂಕಗಳೊAದಿಗೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದು, ಈ ವಿದ್ಯಾರ್ಥಿನಿ ಎಂ.ಸAದೀಲ್‌ಕುಮಾರ್, ಬಿ.ಸೂರ್ಯಕಲಾ ದಂಪತಿಗಳ ಪುತ್ರಿಯಾಗಿದ್ದು, ಈಕೆಯೂ ಇಂಗ್ಲೀಷ್ ವಿಷಯದಲ್ಲಿ ಮಾತ್ರ ೯೯ ಅಂಕ ಪಡೆದಿದ್ದು, ಉಳಿದೆಲ್ಲಾ ವಿಷಯಗಳಲ್ಲೂ ಶೇ.೧೦೦ ಸಾಧನೆ ಮಾಡಿದ್ದು, ಟಾರ‍್ಸ್ ಆಗಿರುವ ಈ ಇಬ್ಬರು ವಿದ್ಯಾರ್ಥಿನಿಯರು ವೈದ್ಯರಾಗುವ ಆಸೆ ವ್ಯಕ್ತಪಡಿಸಿದ್ದಾರೆ.

೬೨೩ ಅಂಕಪಡೆದ ಸಾಧಕರು ಮೂವರು :

ಅಮರಜ್ಯೋತಿ ಶಾಲೆಯ ಜಿ.ಅನು, ಮೊರಾರ್ಜಿದೇಸಾಯಿ ಶಾಲೆಯ ನಾರಾಯಣಸ್ವಾಮಿ ಹಾಗೂ ಕೋಲಾರ ತಾಲೂಕು ಸೀತಿ ಬಿಜಿಎಸ್ ಶಾಲೆಯ ಕೆ.ಎಸ್.ತೇಜಸ್ ೬೨೩ ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

೬೨೨ ಪಡೆದವರು ಐವರು ವಿದ್ಯಾರ್ಥಿಗಳು :

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ೬೨೨ ಅಂಕಗಳೊAದಿಗೆ ಜಿಲ್ಲೆಗೆ ತೃತೀಯ ಸ್ಥಾನವನ್ನು ನಗರದ ಚಿನ್ಮಯ ಶಾಲೆಯ ಎನ್.ಗಾನಶ್ರೀ, ಅಮರಜ್ಯೋತಿ ಶಾಲೆಯ ಎ.ಕಾವ್ಯಶ್ರೀ, ಶ್ರೀನಿವಾಸಪುರ ವೇಣು ವಿದ್ಯಾಸಂಸ್ಥೆಯ ಹೆಚ್.ಮಾನ್ಯಶ್ರೀ, ಕೋಲಾರದ ಅಮರಜ್ಯೋತಿ ಶಾಲೆಯ ನಯನ, ಕೋಲಾರದ ವ್ಯಾಲಿ ಪಬ್ಲಿಕ್ ಶಾಲೆಯ ಪ್ರಣವ್ ಪಡೆದುಕೊಂಡಿದ್ದಾರೆ.

ತಾಲ್ಲೂಕು ವಾರು ಫಲಿತಾಂಶದ ವಿವರ :

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೨೩೦೭ ಮಂದಿ ಪರೀಕ್ಷೆ ಬರೆದಿದ್ದು, ೨೧೮೮ ಮಂದಿ ಉತ್ತೀರ್ಣರಾಗಿ ಶೇ.೮೭.೨೯ ಫಲಿತಾಂಶ ಬಂದಿದೆ.

ಕೋಲಾರ ತಾಲ್ಲೂಕಿನಲ್ಲಿ ೪೫೭೨ ಮಂದಿ ಪರೀಕ್ಷೆ ಬರೆದಿದ್ದು, ೩೩೯೪ ಮಂದಿ ಉತ್ತೀರ್ಣರಾಗಿ ಶೇ.೭೪.೨೩ ಫಲಿತಾಂಶ ಬಂದಿದೆ.

ಮಾಲೂರು ತಾಲ್ಲೂಕಿನಲ್ಲಿ ೨೯೮೯ ಮಂದಿ ಪರೀಕ್ಷೆ ಬರೆದಿದ್ದು, ೨೦೭೫ ಮಂದಿ ಉತ್ತೀರ್ಣರಾಗಿ ೬೯.೪೨ ಫಲಿತಾಂಶ ಬಂದಿದೆ.

ಮುಳಬಾಗಿಲು ತಾಲೂಕಿನಲ್ಲಿ ೩೦೭೯ ಮಂದಿ ಪರೀಕ್ಷೆ ಬರೆದಿದ್ದು, ೨೦೫೨ ಮಂದಿ ಉತ್ತೀರ್ಣರಾಗಿ ಶೇ.೬.೬೫ ಫಲಿತಾಂಶ ಬಂದಿದೆ.

ಬಂಗಾರಪೇಟೆಯಲ್ಲಿ ಪರೀಕ್ಷೆ ಬರೆದ ೨೩೫೭ ಮಂದಿ ಪೈಕಿ ೧೩೫೦ ಮಂದಿ ಉತ್ತೀರ್ಣರಾಗಿ ೫೭.೨೮ ಫಲಿತಾಂಶ ಬಂದಿದೆ.

ಕೆಜಿಎಫ್ ತಾಲ್ಲೂಕಿನಲ್ಲಿ ೩೦೮೨ ಮಂದಿ ಪರೀಕ್ಷೆ ಬರೆದಿದ್ದು, ೧೬೫೧ ಮಂದಿ ಉತ್ತೀರ್ಣರಾಗಿ ಶೇ.೫೩.೫೭ ಫಲಿತಾಂಶ ಬಂದಿದೆ.

ಜಿಲ್ಲೆಗೆ ಗುಣಾತ್ಮಕ ಫಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಗೀರಾ ಅಂಜುA, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿಗಳಾದ ನಾಯಿತ್ ಪಾತಿಮಾ, ರಾಜೇಶ್ವರಿ, ಬಿಇಒಗಳಾದ ಮಧುಮಾಲತಿ, ಪಡುವಣೆ, ಮುನಿಲಕ್ಷö್ಮಯ್ಯ, ಚಂದ್ರಕಲಾ, ಅನಿತಾ, ಗುರುಮೂರ್ತಿ, ರಾಮಚಂದ್ರಪ್ಪ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ವೆಂಕಟೇಶಬಾಬು, ಶರಣಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ರ ೦೨ ಕೆ.ಎಲ್.ಆರ್. ೦೬ : ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಗೆ ಟಾಫರ್ ಆಗಿ ಹೊರಹೊಮ್ಮಿರುವ ಅಂಕ ಪಡೆದ ಎಂ.ರಕ್ಷಾ ಭಾವಚಿತ್ರ

ಚಿತ್ರ ೦೨ ಕೆ.ಎಲ್.ಆರ್. ೦೬ಎ : ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಗೆ ಟಾಫರ್ ಆಗಿ ಹೊರಹೊಮ್ಮಿರುವ ಅಂಕ ಪಡೆದ ಭಾವನಿಕ ಭಾವಚಿತ್ರ

ಚಿತ್ರ ೦೨ ಕೆ.ಎಲ್.ಆರ್. ೦೬ಬಿ : ದ್ವಿತೀಯ ಸ್ಥಾನ ಪಡೆದಿರುವ ಅನು ಭಾವಚಿತ್ರ

ಚಿತ್ರ ೦೨ ಕೆ.ಎಲ್.ಆರ್. ೦೬ಸಿ : ದ್ವಿತೀಯ ಸ್ಥಾನ ಪಡೆದಿರುವ ತೇಜಸ್ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net