ವಿಜಯವಾಣಿ ಸುದ್ದಿಜಾಲ ಕೋಲಾರ
ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾಪುರುಷ ಭಗವಾನ್ ಮಹಾವೀರರ ಆದರ್ಶಗಳು ಸಮಾಜ ಎಲ್ಲ ವರ್ಗದವರೂ ಅನುಸರಿಸುವಷ್ಟು ಶ್ರೇಷ್ಠವಾದುದು ಎಂದು ಅಪರ ಜಿಲ್ಲಾಧಿಕಾರಿ ಮಂಗಳಾ ತಿಳಿಸಿದರು.
ನಗರದ ಟಿ.ಚನ್ನಯ ರಂಗಮAದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಜಿಲ್ಲಾ ಜೈನರ ಸಂಘದ ವತಿಯಿಂದ ನಡೆದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೈನಸಿದ್ದಾಂತದಲ್ಲಿ ಋಷಿ ಮುನಿಗಳಿಗೆ ಹೆಚ್ಚಿನ ಗೌರವವಿದೆ. ಸ್ತಿçÃಯರು ಪುರುಷರಿಗೆ ಸಮಾನರಾಗಿದ್ದಾರೆ. ಮನುಷ್ಯ ಹುಟ್ಟಿ ಸಾಯುವುದರೊಳಗಿನ ಅವಧಿಯಲ್ಲಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಮಹಾವೀರರು ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.
ಜೈನ ಧರ್ಮ ಎಂದೂ ಹಿಂಸೆಗೆ ಪ್ರೋತ್ಸಾಹ ನೀಡಿಲ್ಲ. ಹಿಂಸೆಯ ಸಂಕಲ್ಪ ಮಾಡುವುದೇ ಪಾಪ ಎಂಬ ಸಂದೇಶ ಮಾಡಿರುವ ಈ ಧರ್ಮ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ನಗರಠಾಣೆ ವೃತ್ತ ನಿರೀಕ್ಷಕ ಸದಾನಂದ ಮಾತನಾಡಿ, ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಜೈನ ಧರ್ಮದ ವಿಚಾರಗಳು ಸಮಾಜಕ್ಕೆ ಮುಟ್ಟುವಂತಾಗಬೇಕು. ಜೈನ ಧರ್ಮದಲ್ಲಿ ಮಹಾವೀರ, ಭರತ ಸೇರಿದಂತೆ ನೂರಾರು ಮಹಾಪುರುಷರು ಹುಟ್ಟಿ ಸಮಾಜಕ್ಕೆ ಉತ್ತಮ ವಿಚಾರಗಳನ್ನು ಸಾರಿದ್ದಾರೆ. ಅವು ಕೃತಿ, ಗ್ರಂಥ, ಓಲೆಗರಿಗಳಿಗೆ ಸೀಮಿತವಾಗದೆ ಪುಸ್ತಕ ರೂಪದಲ್ಲಿ ಬಂದು ಮಕ್ಕಳು ಓದುವಂತಾಗಬೇಕು ಎಂದರು.
ಮಹಾವೀರರ ಆಶಯದಂತೆ ಹಿಂಸೆ ತ್ಯಜಿಸಿದರೆ ಪ್ರಪಂಚದಲ್ಲಿ ಶಾಂತಿ ನೆಲೆಸುತ್ತದೆ ಮತ್ತು ಮನುಕುಲ ನೆಮ್ಮದಿಯಿಂದ ಜೀವನ ನಡೆಸಬಹುದೆಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ನಗರದ ನಾನಾ ಬೀದಿಗಳಲ್ಲಿ ಮಹಾವೀರ ಪ್ರತಿಮೆಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸಂಭ್ರಮದಿAದ ಆಚರಿಸಿ, ಲೋಕದ ಜನತೆಗೆ ಶಾಂತಿ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದರು.
ಜೈನ ಸಮುದಾಯದವರಾದ ಇಂದರಚAದ್, ಮಿತಾಲಾಲ್, ವಿಜಯರಾಜ್, ವೋಟಮಾಲ್, ದಾರಿವಾಲ್, ಆನಂದ್ ಭಾಟಿಯಾ, ಜವಾರಿಲಾಲ್, ರಮೇಶ್ ಕುಮಾರ್, ರಾಜೇಶ್, ಪ್ರೇಮಚಂದ್, ಪ್ರದೀಪಚಂದ, ಸುನೀಲಕುಮಾರ, ಮನುಭಯ್, ಪ್ರೇಮಭಾಯಿ, ವಲಮೈಭಾಯಿ, ದಿಲೀಪ್ ಕುಮಾರ್, ಲಾಲ್ ಚಂದ್, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿ÷್ಮ ಹಾಗೂ ಸಮುದಾಯದವರಿದ್ದರು.
ಚಿತ್ರ ೧೦ ಕೆ.ಎಲ್.ಆರ್. ೦೭ : ಕೋಲಾರ ನಗರದ ಟಿ.ಚನ್ನಯ ರಂಗಮAದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಜಿಲ್ಲಾ ಜೈನರ ಸಂಘದ ವತಿಯಿಂದ ನಡೆದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಮಂಗಳಾ ಉದ್ಘಾಟಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷಿö್ಮÃ, ಜೈನ ಸಮುದಾಯದ ಮುಖಂಡರಾದ ಇಂದರಚAದ್ ಮುಂತಾದವರು ಇದ್ದರು.