ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ/೨೫ ಸಾವಿರ ಸದಸ್ಯತ್ವದ ಸಂಕಲ್ಪ/ ಬಡ ವಿಪ್ರರ ನೆರವಿಗೆ ೧೦೦ ಕೋಟಿರೂ ಕ್ಷೇಮಾಭಿವೃದ್ದಿ ನಿಧಿಗೆ ಸಂಕಲ್ಪ/ಎಸ್.ರಘುನಾಥ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ವಿಪ್ರ ಸಮುದಾಯ ಸಂಘಟಿತರಾಗಬೇಕು. ಸಮುದಾಯದಲ್ಲಿನ ಹಿಂದುಳಿದವರ ನೆರವಿನ ದೃಷ್ಟಿಯಿಂದ ೧೦೦ ಕೋಟಿ ರೂ ಕ್ಷೇಮಾಭಿವೃದ್ದಿ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದು ಈ ಸಂಬAಧ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ತಿಳಿಸಿದರು.

ಭಾನುವಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬ್ರಾಹ್ಮಣ ಸಮುದಾಯದಲ್ಲಿನ ಕನಿಷ್ಟ ೧೦ ಸಾವಿರ ಮಂದಿ ಉಳ್ಳವರಿಂದ ತಲಾ ೧ ಲಕ್ಷ ಸಂಗ್ರಹಿಸಿ ೧೦೦ ಕೋಟಿ ನಿಧಿ ಇಡುವ ಗುರಿ ಇದ್ದು, ಈಗಾಗಲೇ ೩ ತಿಂಗಳಲ್ಲಿ ೮೦ ಲಕ್ಷ ಸಂಗ್ರಹವಾಗಿದ್ದು, ಈ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಲೋಪವಾದಂತೆ ಎಚ್ಚರವಹಿಸಲು ಉಪಸಮಿತಿ ರಚಿಸುವುದಾಗಿ ತಿಳಿಸಿದರು.

೨೫ ಸಾವಿರ ಮಂದಿ ಸದಸ್ಯರನ್ನಾಗಿಸಿ:

ಕೋಲಾರ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿ, ಕಟ್ಟಕಡೆಯ ಹಳ್ಳಿಯ ವಿಪ್ರರೂ ಸಂಘಟನೆಯಲ್ಲಿ ಸದಸ್ಯರಾಗಬೇಕು ಒಟ್ಟಾರೆ ಜಿಲ್ಲೆಯಲ್ಲಿ ೨೫ ಸಾವಿರ ಸದಸ್ಯತ್ವ ನೋಂದಣಿಯ ಸಂಕಲ್ಪದೊAದಿಗೆ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರ ಕೈಹಿಡಿಯುವ ಕಾರ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಜೈನ್ಯರ ಸಂಘಟನೆ ಕಾರ್ಯ ನಮಗೆ ಮಾದರಿಯಾಗಬೇಕಿದೆ, ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಕೆಲಸದ ಆಸೆ ಕ್ಷೀಣಿಸತೊಡಗಿದೆ, ಖಾಸಗಿ ವಲಯದಲ್ಲಿ ಉದ್ಯೋಗ ಸಿಗುತ್ತಿದೆ, ಮತ್ತು ಸಮುದಾಯದ ಉದ್ಯೋಗದಾತರು ಬಡ ವಿಪ್ರರ ನೆರವಿಗೆ ಬರಲು ಕೋರಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷ ಆರ್.ಲಕ್ಷಿö್ಮÃಕಾಂತ್ ಮಾತನಾಡಿ, ಮಹಾ ಸಭಾ ಅತ್ಯಂತ ದೂರದೃಷ್ಟಿಯ ಕಾರ್ಯಯೋಜನೆ ರೂಪಿಸಿದೆ, ೧೦೦ ಕೋಟಿ ಸಂಗ್ರಹದ ಈ ಕಾರ್ಯ ಮಾಡಿಯೇ ತೀರಲು ನಿರ್ಧಾರ ಕೈಗೊಂಡಿದೆ ಎಂದರು.

ಮಹಾಸಭಾ ಮುಖ್ಯ ಉದ್ದೇಶ ಪ್ರತಿಯೊಂದು ವಿಪ್ರ ಕುಟುಂಬದ ಸದಸ್ಯತ್ವವೂ ನೋಂದಣಿ ಮಾಡಿಸಬೇಕು, ಸಮುದಾಯದ ಯಾರೂ ಸಂಘಟನೆಯಿAದ ದೂರ ಉಳಿಯಬಾರದು ಎಂಬುದಾಗಿದೆ, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಆ. ೩೦ ರೊಳಗಾಗಿ ವಿಪ್ರರ ಸರ್ವೇ:

ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿ.ಎಸ್.ಚಂದ್ರಶೇಖರ್ ಮಾತನಾಡಿ ಜಿಲ್ಲೆಯಲ್ಲಿ ೪೫ ಲಕ್ಷ ವಿಪ್ರರಿದ್ದಾರೆ ಅದರೆ ಸರ್ಕಾರ ೧೫ ಲಕ್ಷ ಎಂದು ಹೇಳುತ್ತಿದೆ ಈ ಹಿನ್ನಲೆಯಲ್ಲಿ ಆ. ೩೦ ರೊಳಗೆ ಜಿಲ್ಲೆಯಲ್ಲಿ ಇರುವ ವಿಪ್ರರ ಸರ್ವೇ ನಡೆಸಲು ಕ್ರಮವಹಿಸಿದ್ದು, ಈಗಾಗಲೇ ಕೆಲವು ಹೋಬಳಿಗಳ ಸರ್ವೇ ಕಾರ್ಯ ಮುಗಿದಿದೆ. ಜಾತಿ ಸರ್ವೇಗೆ ಬಂದಾಗ ಉಪಪಂಗಡಗಳ ಹೆಸರು ಹೇಳದಿರಿ, ಬ್ರಾಹ್ಮಣ ಎಂದು ತಿಳಿಸಲು ಮನವಿ ಮಾಡಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕೋಲಾರ ಜಿಲ್ಲಾ ಪ್ರತಿನಿಧಿ ಆನಂದಮೂರ್ತಿಮಾತನಾಡಿ, ೧೯೯೮ ರಿಂದ ಜಿಲ್ಲಾ ಬ್ರಾಹ್ಮಣ ಸಂಘ ನಿಷ್ಕಿçಯವಾಗಿತ್ತು, ಈ ಹಿನ್ನಲೆಯಲ್ಲಿ ಮಹಾಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಜಿಲ್ಲಾ ಮಹಾಸಭಾ ರಚಿಸಲಾಗಿದೆ, ವಿಪ್ರರಿಗೆ ಸಹಾಯಹಸ್ತ ಚಾಚುವ ಉದ್ದೇಶದಿಂದ ಸಾಮೂಹಿಕ ಉಪನಯನ, ವಟುಗಲಿಗೆ ವೇದ ಪಾಠ, ಸಂಸ್ಕೃತಿ ರಕ್ಷಣೆಗಾಗಿ ಪ್ರಯತ್ನ ನಡೆಸಿ, ಸಂಘಟನೆ, ಸ್ವಾವಲಂಬನೆ, ಸಂಸ್ಕಾರದ ನೆಲೆಗಟ್ಟಿನಲ್ಲಿ ಸಾಗುವುದಾಗಿ ತಿಳಿಸಿದರು.

ರಾಜ್ಯ ಮಹಾಸಭಾ ಅಧ್ಯಕ್ಷ ರಘುನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಲಕ್ಷಿö್ಮÃಶ, ಜೆ.ಎನ್.ರಾಮಕೃಷ್ಣ, ಹೆಚ್.ಆರ್.ವೆಂಕಟೇಶ್, ಜಂಟಿ ಕಾರ್ಯದರ್ಶಿಗಳಾದ ಟಿ.ಕೆ.ವೆಂಕಟಾಚಲಪತಿ, ಶೇಷಗಿರಿರಾವ್, ವಲ್ಲಭಣ್ಣ, ಕೃಷ್ಣಮೂರ್ತಿ ಮತ್ತಿತರರನ್ನು ಅಭಿನಂದಿಸಲಾಯಿತು.

ವಿಪ್ರಸಮುದಾಯದ ಸಾಧಕರಿಗೆ ಸನ್ಮಾನ

ನೀರಿನಲ್ಲಿನ ಪ್ಲೊರೈಡ್ ಪರಿಣಾಮಗಳ ಕುರಿತು ಸಂಶೋಧನೆನಡೆಸುತ್ತಿರುವ ಡಾ.ಕೆ.ಎನ್.ಶಶಿಧರ್,ಪಿಎಚ್‌ಡಿ ಸಾಧಕರಾದ ಡಾ.ವೈಪಿ.ಅರುಣ, ಡಾ.ಎಂ.ಎಸ್.ಶಿವಪ್ರಸಾದ್, ಕಂಪನಿ ಸೆಕ್ರೆಟರಿ ೭ನೇ ರ‍್ಯಾಂಕ್ ಸಾಧಕಿ ಸ್ಪೂರ್ತಿ ಮುರಳೀಧರ್, ಪಿಯುಸಿ ೨ನೇ ರ‍್ಯಾಂಕ್ ಪಡೆದ ಹೆಚ್.ಬಿ.ಭಾರ್ಗವಿರನ್ನು ಗೌರವಿಸಲಾಯಿತು.

ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಪುರುಷೋತ್ತಮ್, ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣ, ಸಮಾಜಸೇವಕ ಹೊಳಲಿ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಸವಿನಯ್, ಖಜಾಂಚಿ ರವಿ, ಗೌರವ ಸಲಹೆಗಾರ ಎಸ್.ಜಯರಾವ್, ನಿರ್ದೇಶಕರಾದ ಸೌಜನ್ಯ ಮತ್ತಿತರರಿದ್ದರು.

ಚಿತ್ರ ೨೦ ಕೆ.ಎಲ್.ಆರ್. ೦೨ ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಚಾಲನೆ ನೀಡಿದರು. ಹಿರಿಯ ಉಪಾಧ್ಯಕ್ಷ ಆರ್.ಲಕ್ಷಿö್ಮÃಕಾಂತ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಲಕ್ಷಿö್ಮÃಶ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net