ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಟೊಮೆಟೋ ಬೆಳೆಗಾರರಿಗೆ ಶುಕ್ರದೆಸೆ ಬಂದAತಾಗಿದೆ. ೧೫ ಕೆ.ಜಿ.ಟೊಮೆಟೋ ಬಾಕ್ಸ್ ೧೨೦೦ ರೂ.ಗಳು ಗಡಿ ದಾಟಿದೆ. ಇನ್ನು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಪ್ರತಿವರ್ಷ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಟೊಮೆಟೋಗೆ ಉತ್ತಮ ಬೆಲೆ ಬರುವುದು ವಾಡಿಕೆ. ಈ ಮಧ್ಯೆ ಆಗಾಗ ಹವಾಮಾನ ವೈಪ್ಯರೀತ್ಯ ಉಂಟಾದಾಗ ಹಾಗೂ ಫಸಲು ಕಡಿಮೆಯಾದಾಗ ಬೆಲೆ ಏರಿಕೆಯಾಗುವುದು ಸಹಜ. ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಟೊಮೆಟೋಗೆ ಬೆಲೆ ಏರಿಕೆಯಾಗುವುದಿಲ್ಲ. ಆದರೆ ಫೆಂಗಲ್ ಚಂಡಮಾರುತ ಎಫೆಕ್ಟ್ನಿಂದ ಟೊಮೆಟೋ ದಿಢೀರನೆ ಬೆಲೆ ಏರಿಕೆಯಾಗಿದೆ.
ವೈರಸ್, ಅಂಗಮಾರಿ ಮತ್ತು ಬಿಂಗಿ ರೋಗಗಳ ನಡುವೆಯೂ ಟೊಮೆಟೋಗೆ ಉತ್ತಮ ಬೆಲೆ ಬರುವಂತಾಗಿದೆ. ರೈತರು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ರೋಗಗಳನ್ನು ಹತೋಟಿಗೆ ತಂದು ತೋಟಗಳಲ್ಲಿರುವ ಕಾಯಿಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟ ಹಾಗೂ ಫಸಲು ಕಡಿಮೆಯಾಗಿದ್ದು, ಇದಕ್ಕೆ ತಕ್ಕಹಾಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯು ಸಿಗುವಂತಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಟೊಮೆಟೋ ಬೆಲೆ ಕುಸಿದಿತ್ತು. ೧೫ ಕೆ.ಜಿ.ಬಾಕ್ಸ್ ೨೫೦ ರಿಂದ ೪೦೦ ರೂ.ಗಳ ತನಕ ಮಾರಾಟವಾಗಿತ್ತಿತ್ತು. ಕಳೆದ ಒಂದು ವಾರದಿಂದ ಬೆಲೆ ಏರಿಕೆ ಆಗುತ್ತಲೇ ಇದೆ. ಫೆಂಗಲ್ ಚಂಡಮಾರುತದ ಎಫೆಕ್ಟ್ನಿಂದ ದಿಢೀರನೆ ಬೆಲೆ ಏರಿಕೆಯಾಗಿದೆ. ಮಳೆ ನಿಂತಿದ್ದರೂ ಸಹ ಬಿಂಗಿ ಅಂಗಮಾರಿ ರೋಗ ಟೊಮೆಟೋ ಬೆಳೆಗಾರರನ್ನು ಕಾಡುತ್ತಿರುವುದರಿಂದ ತೋಟಗಳಲ್ಲಿ ಕಾಯಿ ಕೊಳೆತು ಉದುರುತ್ತಿರುತ್ತಿವೆ. ಮಾರುಕಟ್ಟೆಯಲ್ಲಿ ಅವಕ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಲು ಕಾರಣವಾಗಿದೆ.
ಪ್ರತಿವರ್ಷ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಟೊಮೆಟೋಗೆ ಸಾಧಾರಣ ಬಲೆ ಇರುತ್ತದೆ ಎಂದು ಬೆಳೆಗಾರರು ಬೆಳೆ ಮಾಡುವುದು ಕಡಿಮೆ. ಬೆಳೆ ಮಾಡಿರುವ ಬೆಳೆಗಾರರಿಗೆ ಬೆಲೆ ಏರಿಕೆಯಿಂದ ಶುಕ್ರದೆಸೆ ಬಂದAತಾಗಿದೆ. ೧೫ ಕೆ.ಜಿ.ಟೊಮೆಟೋ ಬಾಕ್ಸ್ ೩೦೦ ರೂ.ಗಳಿಂದ ಪ್ರಾರಂಭಗೊAಡು ಗುಣಮಟ್ಟ ಇರುವ ಟೊಮೆಟೋ ೧೨೦೦ ರೂ.ಗಳ ತನಕ ಶುಕ್ರವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.
ಫೆಂಗಲ್ ಚಂಡಮಾರುತದಿAದ ಮಳೆ ಹೆಚ್ಚಾಗಿ ಇರುವ ತೋಟಗಳಿಗೂ ರೋಗ ಆವರಿಸಿಕೊಂಡಿರುವುದರಿAದ ಟೊಮೆಟೋ ಗುಣಮಟ್ಟವನ್ನು ಕಳೆದುಕೊಂಡಿರುವುದರಿAದ ಗುಣಮಟ್ಟದ ಟೊಮೆಟೋಗೆ ಬೇಡಿಕೆ ಹೆಚ್ಚಾಗಿದೆ. ಹೊರಗಿನ ಟೊಮೆಟೋ ಮಾರುಕಟ್ಟೆಗೆ ಬರದೆ ಇದ್ದರೆ ೧೫ ಕೆ.ಜಿ.ಟೊಮೆಟೋ ಬಾಕ್ಸ್ ೧೫೦೦ ರೂ.ಗಳು ದಾಟುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕೋಟ್
ಶುಕ್ರವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ೧೫ ಕೆ.ಜಿ.ಟೊಮೆಟೋ ಬಾಕ್ಸ್ ೩೦೦ ರೂ.ಗಳಿಂದ ೧೨೦೦ ರೂ.ಗಳ ತನಕ ಮಾರಾಟವಾಗಿದೆ. ಗುಣಮಟ್ಟದ ಟೊಮೆಟೋ ಮಾರುಕಟ್ಟೆಗೆ ಬರುತ್ತಿಲ್ಲ. ಚಂಡಮಾರುತದ ಎಫೆಕ್ಟ್ ಕಾರಣವಾಗಿದೆ. ಇದೇ ರೀತಿ ಇನ್ನು ಒಂದು ವಾರಗಳ ಕಾಲ ಬೆಲೆ ಇರುತ್ತದೆ. ಏರಿಕೆಯಾಗುವ ಸಾಧ್ಯತೆಗಳು ಇವೆ. ಹೊರ ರಾಜ್ಯಗಳಿಂದ ಟೊಮೆಟೋ ಮಾರುಕಟ್ಟೆಗೆ ಬಂದರೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಮಳೆ ಅವಾಂತರದಿAದ ಫಸಲಿನ ಮೇಲೆ ಹೊಡೆತ ಬಿದ್ದಿದೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಕಾಯಿ ಕಡಿಮೆಯಾಗಿದೆ. ಗುಣಮಟ್ಟದ ಕಾಯಿ ಬೇಡಿಕೆ ಇದೆ.
-ಮುನೇಗೌಡ, ಎನ್.ಎಂ.ಆರ್.ಮAಡಿ ಮಾಲಿಕ
ಕೋಟ್
ಡಿಸೆಂಬರ್ ತಿಂಗಳಿನಲ್ಲಿ ಟೊಮೆಟೋ ಬೆಲೆ ಏರಿಕೆಯಾಗಿರುವುದು ಇತಿಹಾಸದಲ್ಲೇ ಇದೇ ಪ್ರಥಮ. ೧೫ ಕೆ.ಜಿ.ಟೊಮೆಟೋ ಬಾಕ್ಸ್ ೮೦೦ ರೂ.ಗಳು ಗಡಿ ದಾಟುತ್ತಿಲ್ಲ. ರಾಜ್ಯ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿರುವ ಕಾರಣ ಟೊಮೆಟೋ ಗುಣಮಟ್ಟ ಕಳೆದುಕೊಂಡಿದೆ. ಉತ್ತಮ ಗುಣಮಟ್ಟದ ಟೊಮೆಟೋಗೆ ಬೇಡಿಕೆಯಿದೆ. ಹೊರ ದೇಶಗಳಿಂದಲೂ ಬೇಡಿಕೆ ಬರುತ್ತಿದೆ. ೨೦೦೦ ರೂ.ಗಳ ಗಡಿ ದಾಟಿದರೂ ಅಚ್ಚರಿ ಇಲ್ಲ. ಗುಣಮಟ್ಟದ ಟೊಮೆಟೋಗಾಗಿ ಹುಡುಕಾಡುವಂತಹ ಪರಿಸ್ಥಿತಿ ಇದೆ.
-ಸಿ.ಎಂ.ಆರ್. ಶ್ರೀನಾಥ್, ಸಿ.ಎಂ.ಆರ್. ಮಂಡಿ ಮಾಲಿಕ
ಚಿತ್ರ ೦೬ ಕೆ.ಎಲ್.ಆರ್. ೦೨ : ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿರು ಟೊಮೆಟೋ