ಕೋಮುಲ್‌ಗೆ ಇಂದಿನಿAದ ನಾಮಪತ್ರ ಸಲ್ಲಿಕೆ / ಜೂ.೧೭ ಕಡೆದಿನ / ೧೩ ಕ್ಷೇತ್ರಗಳಿಂದ ೯೩೭ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಮುಲ್ ಆಡಳಿತ ಮಂಡಳಿಯ ೧೩ ನಿರ್ದೇಶಕರ ಸ್ಥಾನಗಳಿಗೆ ಜೂ.೨೫ ರಂದು ನಡೆಯಲಿರುವ ಚುನಾವಣೆಗೆ ಜೂ.೧೩ ರಿಂದ ನಾಮಪತ್ರಗಳ ಸಲ್ಲಿಕೆ ಪ್ರಾರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಜೂ.೧೭ ಕಡೇದಿನವಾಗಿದೆ.

೧೩ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ೯೩೭ ಮತದಾರರು ಮತದಾನದ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ೯೮೬ ಮತದಾರರು ಇದ್ದರು. ೪೯ ಮತದಾರರು ವಿವಿಧ ಕಾರಣಗಳಿಂದ ಅನರ್ಹಗೊಂಡಿದ್ದಾರೆ.

ಕೋಲಾರ : ಈಶಾನ್ಯ- ೭೩, ನೈರುತ್ಯ-೭೬, ವೇಮಗಲ್-೮೨,

ಮುಳಬಾಗಿಲು : ಪೂರ್ವ-೮೭, ಪಶ್ಚಿಮ-೭೩

ಮಾಲೂರು : ಟೇಕಲ್-೮೨, ಕಸಬಾ-೬೨

ಶ್ರೀನಿವಾಸಪುರ : ಅಡ್ಡಗಲ್-೮೪, ಯಲ್ದೂರು-೮೪

ಬಂಗಾರಪೇಟೆ ೫೪

ಕೆಜಿಎಫ್. ೬೦

ಕೋಲಾರ ಜಿಲ್ಲಾ ಮಹಿಳಾ ಕ್ಷೇತ್ರ : ಉತ್ತರ ಕ್ಷೇತ್ರ-೬೪, ದಕ್ಷಿಣ ಕ್ಷೇತ್ರ-೫೬ ಮತದಾರರಿದ್ದಾರೆ.

ರಂಗೇರಿದ ಚುನಾವಣಾ ಕಣ :

ಇಂದಿನಿAದ ನಾಮಪತ್ರ ಸಲ್ಲಿಕೆ ಪ್ರಾರಂಭಗೊಳ್ಳಲಿದ್ದು, ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಆರಿಸಿಕೊಂಡಿದ್ದಾರೆ. ಉಳಿದ ಕಡೆ ಇನ್ನೂ ಅಭ್ಯರ್ಥಿಗಳು ಅಂತಿಮಗೊಳ್ಳಬೇಕಾಗಿದೆ.

ಈಗಾಗಲೇ ಮುಖಂಡರು ಸಭೆಗಳನ್ನು ನಡೆಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಸದರಿ ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಇನ್ನು ಗೊಂದಲ ಉಂಟಾಗಿದೆ. ನಾಮಪತ್ರ ಸಲ್ಲಿಕೆ ವೇಳೆಗೆ ಅಭ್ಯರ್ಥಿಗಳ ಫೈನಲ್ ಆಗಲಿದೆ. ಕೆಲವು ಕ್ಷೇತ್ರಗಳಿಗೆ ಬಂಢಾಯದ ಭೀತಿ ಎದುರಾಗಿದೆ.

ಕೋಲಾರದ ಜೆಡಿಎಸ್‌ನ ಒಂದು ಕ್ಷೇತ್ರ ಮತ್ತು ಮುಳಬಾಗಿಲಿನ ಒಂದು ಕ್ಷೇತ್ರದಲ್ಲಿ ಬಂಢಾಯದ ಭೀತಿ ಇದ್ದು, ಇಬ್ಬಿಬ್ಬರು ನಾಮಪತ್ರ ಒಂದೇ ಪಕ್ಷದಿಂದ ಸಲ್ಲಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಕಾಂಗ್ರೇಸ್ ಬೆಂಬಲಿತರಿAದ ಸ್ಪರ್ಧೆ ಮಾಡುವ ಯಾವ ಕ್ಷೇತ್ರಗಳಲ್ಲಿಯೂ ಬಂಢಾಯದ ಭೀತಿ ಸದ್ಯಕ್ಕೆ ಕಾಣುತ್ತಿಲ್ಲ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಂಢಾಯದ ಭೀತಿ ಎದುರಾಗಲೂ ಬಹುದು. ವೇಮಗಲ್ ಕ್ಷೇತ್ರಕ್ಕೆ ಕಾಂಗ್ರೇಸ್ ಬೆಂಬಲಿತರಾಗಿ ಚಂಚಿಮಲೆ ರಮೇಶ್ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಕಾಂಗ್ರೇಸ್ ಬಂಢಾಯದಿAದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪನವರ ಸಹೋದರ ಕೃಷ್ಣಪ್ಪ ನಾಮಪತ್ರ ಸಲ್ಲಿಸಲು ಸಿದ್ಧತೆಯಲ್ಲಿ ತೊಡಗಿದ್ದು, ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇವರಿಗೆ ಜೆಡಿಎಸ್ ಮತ್ತು ಬಿಜೆಪಿ ಬೆಂಬಲ ನೀಡಿದೆ ಎನ್ನಲಾಗುತ್ತಿದೆ.

ಚಿತ್ರ ೧೨ ಕೆ.ಎಲ್.ಆರ್. ೦೨ : ಕೋಮುಲ್ ಕಛೇರಿ ಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net