ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಮುಲ್ ಆಡಳಿತ ಮಂಡಳಿ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಇದುವರೆವಿಗೂ ೧೩ ಕ್ಷೇತ್ರಗಳಿಗೆ ೬೪ ಮಂದಿ ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.
ಜೂ.೧೩ ರಿಂದ ನಾಮಪತ್ರಗಳ ಸಲ್ಲಿಕೆ ಪ್ರಾರಂಭಗೊAಡು ೧೭ಕ್ಕೆ ಮುಕ್ತಾಯಗೊಂಡಿದೆ. ಜೂ.೧೮ ರಿಂದ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂ.೨೦ ನಾಮಪತ್ರಗಳನ್ನು ವಾಪಸ್ಸು ಪಡೆಯಲು ಕಾಲಾವಕಾಶ ನೀಡಲಾಗಿದೆ. ಜೂ.೨೫ ರಂದು ಚುನಾವಣೆ ನಡೆಯಲಿದೆ.
ಒಂದೊAದು ಕ್ಷೇತ್ರಕ್ಕೆ ಒಬ್ಬೊಬ್ಬ ಅಭ್ಯರ್ಥಿಗಳಿಂದ ೨ ರಿಂದ ೩ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ನಾಮಪತ್ರಗಳ ವಾಪಸ್ಸಾತಿಯ ನಂತರ ಅಂತಿಮ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಇರುತ್ತಾರೆ ಎಂಬುದು ಗೊತ್ತಾಗುತ್ತದೆ.
ಬಂಡಾಯದ ಭೀತಿ :
ಕೆಲವೊಂದು ಕ್ಷೇತ್ರಗಳಿಗೆ ಬಂಡಾಯದ ಭೀತಿ ಅಧಿಕೃತ ಅಭ್ಯರ್ಥಿಗಳನ್ನು ಕಾಡುತ್ತಿದ್ದು, ಇದನ್ನು ಶಮನಗೊಳಿಸುವುದು ಆಯಾ ಪಕ್ಷಗಳ ಮುಖಂಡರಿಗೆ ತಲೆ ಬಿಸಿ ತಂದಿದೆ. ಕೋಲಾರದ ಈಶಾನ್ಯ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಡಿ.ವಿ.ಹರೀಶ್, ಕಾಂಗ್ರೇಸ್ ಬೆಂಬಲಿತರಾಗಿ ಸೀಸಂದ್ರ ಗೋಪಾಲಗೌಡ ಅಧಿಕೃತವಾಗಿ ಪಕ್ಷಗಳ ಬೆಂಬಲದಿAದ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎ ಯಿಂದ ಬೆಂಬಲ ಕೋರಿ ಬ್ಯಾಲಹಳ್ಳಿ ಶಂಕರೇಗೌಡ ನಾಮಪತ್ರ ಸಲ್ಲಿಸಿರುವುದರಿಂದ ಬಂಡಾಯದ ಭೀತಿ ಎದುರಾಗಿದೆ.
ಕೋಲಾರದ ವೇಮಗಲ್ ಕ್ಷೇತ್ರದಿಂದ ಸುಮಾರು ೫೦ ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದಿ.ವೆಂಕಟಮುನಿಯಪ್ಪನವರ ಸಹೋದರ ಕೃಷ್ಣಪ್ಪ ಪಕ್ಷದಿಂದ ಟಿಕೇಟ್ ನಿರಾಕರಿಸಿದ್ದಾರೆಂದು ಎನ್‌ಡಿಎ ಬೆಂಬಲ ಪಡೆದು ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಬಂಡಾಯಕ್ಕಿAತ ಕಾಂಗ್ರೇಸ್ ಪಕ್ಷದಿಂದಲೇ ಇಬ್ಬರು ಸ್ಪರ್ಧೆ ಮಾಡಿದಂತೆ ಆಗಿದೆ. ಆದರೆ ಕಾಂಗ್ರೇಸ್‌ನವರು ಅಧಿಕೃತ ಅಭ್ಯರ್ಥಿಗೆ ಮಾತ್ರ ನಮ್ಮ ಬೆಂಬಲ ಎಂದು ತಿಳಿಸಿದ್ದಾರೆ.
ಮಹಿಳಾ ಮೀಸಲು ದಕ್ಷಿಣ ಕ್ಷೇತ್ರ ಮತ್ತು ಉತ್ತರ ಕ್ಷೇತ್ರದಿಂದಲೂ ಕಾಂಗ್ರೇಸ್ ಪಕ್ಷದ ಬೆಂಬಲ ಕೋರಿ ಇಬ್ಬಿಬ್ಬರು ನಾಮಪತ್ರಗಳನ್ನು ಸಲ್ಲಿಸಿರುವುದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೇಸ್‌ಗೆ ಬಂಡಾಯದ ಭೀತಿ ಕಾಡುತ್ತಿದೆ. ಮುಳಬಾಗಿಲು ಪೂರ್ವ ಕ್ಷೇತ್ರದಿಂದ ಮೂರು ಜನ ಸ್ಪರ್ಧೆ ಮಾಡಿರುವುದರಿಂದ ಇಲ್ಲಿಯೂ ಬಂಡಾಯದ ಭೀತಿ ಎದುರಾಗಿದೆ. ಕಲ್ಲುಪಲ್ಲಿ ಪ್ರಕಾಶ್ ನಾಮಪತ್ರ ಸಲ್ಲಿಸಿರುವುದು ಎನ್‌ಡಿಎ ಮತ್ತು ಕಾಂಗ್ರೇಸ್ ಅಧಿಕೃತ ಅಭ್ಯರ್ಥಿಯಾಗಿ ಬಂಡಾಯದ ಭೀತಿ ಎದುರಾಗಿದೆ.
ಝಣ ಝಣ ಕಾಂಚಾಣದ ಸದ್ದು :
ಈಗಾಗಲೇ ಅಧಿಕೃತ ಅಭ್ಯರ್ಥಿಗಳನ್ನು ಆಯಾ ಪಕ್ಷಗಳಿಂದ ಘೋಷಣೆ ಆಗಿರುವ ಅಭ್ಯರ್ಥಿಗಳು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡು ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಭರ್ಜರಿ ಬಾಡೂಟಗಳ ಪಾರ್ಟಿಗಳನ್ನು ಏರ್ಪಡಿಸುವುದರ ಜೊತೆಗೆ ಮತದಾರರಿಗೆ ಝಣ ಝಣ ಕಾಂಚಾಣ ಸದ್ದು ಮಾಡಿಸುತ್ತಿದ್ದಾರೆ.
ಒಂದು ಮತಕ್ಕೆ ಒಂದು ಲಕ್ಷದಿಂದ ೫ ಲಕ್ಷದ ತನಕ ಆಫರ್‌ಗಳನ್ನು ನೀಡಿ ಆಮಿಷಗಳನ್ನು ಒಡ್ಡುತ್ತಿದ್ದಾರೆ ಎನ್ನಲಾಗಿದೆ. ಮುಂಗಡವಾಗಿ ೫೦ ಸಾವಿರದಿಂದ ಒಂದು ಲಕ್ಷದ ಮತದಾರರಿಗೆ ತಲುಪಿಸುವ ಕೆಲಸವು ಸದ್ದು ಗದ್ದು ಇಲ್ಲದೆ ನಡೆಯುತ್ತಿದೆ ಎನ್ನಲಾಗಿದೆ. ಇದಲ್ಲದೆ ನಾಮಪತ್ರಗಳ ವಾಪಸ್ಸಾತಿಯ ನಂತರ ಅಧಿಕೃತ ಅಭ್ಯರ್ಥಿಗಳಿಂದ ಪ್ರವಾಸ ಕೈಗೊಳ್ಳಲು ಮತದಾರರು ಸಿದ್ಧರಿರಬೇಕೆಂಬ ಸೂಚನೆಯು ಸಹ ಮುಖಂಡರು ಮತ್ತು ಅಭ್ಯರ್ಥಿಗಳಿಂದ ತಲುಪಿದೆ.
ದುಡ್ಡೇ ದೊಡ್ಡಪ್ಪ :
ಇತ್ತೀಚಿನ ದಿನಗಳಲ್ಲಿ ಮತದಾರರಿಗೆ ಬದ್ದತೆ, ಪಕ್ಷನಿಷ್ಟೆ, ಪ್ರಾಮಾಣಿಕತೆ ಎಲ್ಲವೂ ಮಾಯವಾಗಿರುವುದರಿಂದ ದುಡ್ಡೇ ದೊಡ್ಡಪ್ಪ ಎನ್ನುವಂತಾಗಿದೆ. ರೈತರ ಸಹಕಾರ ಸಂಸ್ಥೆಗಳಿಗೆ ಆಯ್ಕೆ ಆಗಬೇಕಾದರೆ ಲಕ್ಷಗಟ್ಟಲೆ ದುಡ್ಡು ಸುರಿದು ಸಂಸ್ಥೆಗಳ ನಿರ್ದೇಶಕರು ಮತ್ತು ಅಧ್ಯಕ್ಷರಾಗಿ ಆಯ್ಕೆ ಆಗುವಂತಹ ಕಾಲ ಬಂದಿರುವುದರಿAದ ಆಯ್ಕೆ ಆದ ನಿರ್ದೇಶರಿಂದ ರೈತರು ನೆರವು ಪಡೆಯುವುದು ಹೇಗೆ ಎಂಬ ಪ್ರಶ್ನೆ ರೈತರನ್ನೇ ಕಾಡುವಂತಾಗಿದೆ.
ಚಿತ್ರ ೧೭ ಕೆ.ಎಲ್.ಆರ್. ೦೨ : ಕೋಮುಲ್ ಕಛೇರಿ ಭಾವಚಿತ್ರ