ಕೊಳತ್ತೂರು ಗ್ರಾಪಂ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ

11tnpnewsfile01 (4)
ತಿ.ನರಸೀಪುರ ತಾಲೂಕು ಕೊಳತ್ತೂರು ಗ್ರಾ.ಪಂ.ಗೆ ಆಯ್ಕೆಯಾದ ಅಧ್ಯಕ್ಷ ಕೆ.ಪಿ.ರವಿಪ್ರಸಾದ್ ಹಾಗೂ ಉಪಾಧ್ಯಕ್ಷೆ ಯಶೋದಾ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಎಂ.ಕುಮಾರಸ್ವಾಮಿ, ಕೆ.ಟಿ.ನಂಜುಂಡಸ್ವಾಮಿ, ಸರಸ್ವತಿ, ಮಹದೇವಮ್ಮ ಇತರರು ಇದ್ದರು.
Published on

ತಿ.ನರಸೀಪುರ: ತಾಲೂಕಿನ ಕೊಳತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಪಿ.ರವಿಪ್ರಸಾದ್, ಉಪಾಧ್ಯಕ್ಷರಾಗಿ ಸಿ.ಎಂ.ಯಶೋದಾ ಶಿವಮೂರ್ತಿ ಅವಿರೋಧ ಆಯ್ಕೆಯಾದರು.

ಒಟ್ಟು 17 ಸದಸ್ಯ ಬಲವುಳ್ಳ ಪಂಚಾಯಿತಿಗೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಪ.ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕೆ.ಪಿ.ರವಿಪ್ರಸಾದ್, ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಎಂ.ಯಶೋದಾ ಶಿವಮೂರ್ತಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಗೋವಿಂದೇಗೌಡ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಸದಸ್ಯರಾದ ಎಂ.ಕುಮಾರಸ್ವಾಮಿ, ಕೆ.ಟಿ.ನಂಜುಂಡಸ್ವಾಮಿ, ಸರಸ್ವತಿ, ಮಹದೇವಮ್ಮ, ನಂಜುಂಡೇಗೌಡ, ಸಿದ್ದಮ್ಮ, ಶಾಂತರಾಜು, ಎಚ್.ಬಿ.ಶೀಲಾ, ನಾಗೇಶ್, ಮೀನಾಕ್ಷಿ ಹಾಜರಿದ್ದರು. ಸಹಾಯಕ ಚುನಾವಣಾಧಿಕಾರಿಯಾಗಿ ಭವ್ಯಶ್ರೀ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net