ಕೊಲೆ ಪತ್ತೆಹಚ್ಚುದ ಪೊಲೀಸ್ ತಂಡಕ್ಕೆ ೫೦ ಸಾವಿರ ಬಹುಮಾನ

Published on

ಕುಂದಾಪುರ : ಬೈಂದೂರು ಹೇನುಬೇರೆ ಬಳಿ ಮಂಗಳವಾರ ರಾತ್ರಿ ಕಾರಿಗೆ ಪೆಟ್ರೂಲ್ ಸರಿದು ಕೊಲೆ ಮಾಡಿದ ಪ್ರಕರಣ ಒಂದೇ ದಿನದಲ್ಲಿ ಪತ್ತೆ ಮಾಡಿದ ಬೈಂದೂರು ಪೊಲೀಸ್ ತಂಡಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ೫೦ ಸಾವಿರ ನಗದುಹುಮಾನ ಘೋಷಿಸಿದ್ದಾರೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಆನಂದ ದೇವಾಡಿಗ ಕೊಲೆಯಧ ವ್ಯಕ್ತಿ. ಸದಾನಂದ ದೇವಾಡಿಗ, ಶಿಲ್ಪಾ ಕೊಲೆ ಆಪಾದಿತರು. ಸತೀಶ್ ಆರ್.ದೇವಾಡಿಗ ಹಾಗೂ ನಿತಿನ್ ದೇವಾಡಿಗ ಪ್ರತ್ಯಕ್ಷ ಸಹಕಾರ ನೀಡಿದ ವ್ಯಕ್ತಿಗಳು.
ಆನಂದ ದೇವಾಡಿಗ ಎಂಬವರಿಗೆ ವಯಾಗ್ರಾ ಮಾತ್ರೆ ಎಂದು ನಂಬಿಸಿ, ನಿದ್ರೆ ಮಾತ್ರ ಮದ್ಯದಲ್ಲಿ ಸೇರಿಸಿ ಕುಡಿಸಿ, ಕಾರಲ್ಲಿ ಬೈಂದೂರು ಹೇನುಬೇರಿಗೆ ಕರೆತಂದು ಕಾರ್ ಲಾಕ್ ಮಾಡಿ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net