ಪ್ರಕಾಶ್ ಮಂಜೇಶ್ವರ ಮಂಗಳೂರು
ಸಾಕಷ್ಟು ಬೇಡಿಕೆ ಇದ್ದರೂ ನಾಟಿ ಆಸಿಲ್ ಕೋಳಿ ಮರಿಗಳ ಉತ್ಪಾದನೆಯನ್ನು ಕಡಬ ಕೊಲ ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದ ಕುಕ್ಕುಟ ವಿಸ್ತರಣಾ ಕೋಳಿ ಮರಿ ಉತ್ಪಾದನೆ ಘಟಕ ಸ್ಥಗಿತಗೊಳಿಸಿದೆ.
ಬೆಂಗಳೂರಿನ ಹೇಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯು ಆಸಿಲ್ ಮರಿಗಳನ್ನು ತಮಿಳುನಾಡು. ಕೇರಳ, ಆಂಧ್ರಪ್ರದೇಶ, ಗುವಾಹಟಿ ಮುಂತಾದ ಕಡೆ ಕಳುಹಿಸುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ನೇರ ಪೂರೈಕೆ ವ್ಯವಸ್ಥೆ ಇರಲಿಲ್ಲ. ಅಗತ್ಯವಿರುವವರು ಬೆಂಗಳೂರಿನಿಂದ ಸ್ವಂತ ವಾಹನ ವ್ಯವಸ್ಥೆಯಲ್ಲಿ ತರಿಸಿಕೊಳ್ಳಬೇಕಾಗಿತ್ತು.
ಎರಡು ವರ್ಷಗಳ ಹಿಂದೆ ಹೇಸರಘಟ್ಟದಿಂದ ಒಂದು ದಿನ ವಯಸ್ಸಿನ 800 ಆಸಿಲ್ ಮರಿಗಳನ್ನು ತಂದು ಕೊಲ ಾರ್ಮ್‌ನಲ್ಲಿ ಪೇರಂಟ್ ಬರ್ಡ್ (ಮರಿ ಮಾಡುವ ಸಲುವಾಗಿ ಸಾಕುವ ಕೋಳಿಗಳು) ಆಗಿ ಬೆಳೆಸಲಾಗಿತ್ತು. ಈ ಮಾತೃಕೋಳಿಗಳಿಂದ ದೊರೆತ ಮೊಟ್ಟೆಗಳಿಂದ ಮರಿ ಪಡೆದು ರೈತರಿಗೆ ಹಂಚಿಕೆ ಮಾಡಲಾಗಿತ್ತು.
ಆಸಿಲ್ ಮಾತೃಕೋಳಿಗಳ ಅವಧಿ ಮುಗಿದ ಬಳಿಕ ಹೊಸ ಆಸಿಲ್ ಹೊಸ ಮಾತೃಕೋಳಿಗಳ ಬ್ಯಾಚನ್ನು ಕೊಲ ಕೇಂದ್ರ ಸಿದ್ಧಪಡಿಸಬೇಕಿತ್ತಾದರೂ ಇದಕ್ಕೆ ಆಸಕ್ತಿ ತೋರಿಸಿಲ್ಲ. ಬದಲಿಯಾಗಿ ಬೇರೆ ನಾಟಿಕೋಳಿ ಬ್ಯಾಚನ್ನು ಸಿದ್ಧಪಡಿಸುತ್ತಿದೆ. ಸಿದ್ಧಪಡಿಸುತ್ತಿರುವ 620 ಹೊಸ ನಾಟಿ ಮಾತೃಕೋಳಿಗಳಿಗೆ 19 ವಾರ ಪ್ರಾಯ ತುಂಬಿದ್ದು, ರೈತರಿಗೆ ಮರಿಗಳನ್ನು ವಿತರಿಸಲು ಇನ್ನು ಕನಿಷ್ಠ ಒಂದೂವರೆ ತಿಂಗಳು ಕಾಯಬೇಕು.
ಪ್ರಸ್ತುತ ಕೊಲ ಾರ್ಮ್‌ನಲ್ಲಿ ರೈತರಿಗೆ ವಿತರಿಸಲು ಗಿರಿರಾಜ ಕೋಳಿಯ ಒಂದು ದಿನದ ಮರಿಗಳು ಮಾತ್ರ ಲಭ್ಯ.
--- ಕೋಟ್ ---
ಪ್ರಸ್ತುತ ಕೊಲ ಾರ್ಮ್‌ನಲ್ಲಿ ನಾಟಿ ಕೋಳಿ ಮತ್ತು ಗಿರಿರಾಜ ಕೋಳಿ ಮರಿಗಳು ಇವೆ. ಉತ್ಪಾದನೆಯಾಗುವ ಕೋಳಿ ಮರಿಗಳಿಗೆ ಬೇಡಿಕೆಯಿದ್ದು, ಸುತ್ತಲಿನ ಊರುಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಕೊಂಡೊಯ್ಯುತ್ತಾರೆ.
(((ೆಟೋ
ಎಂಎನ್‌ಜಿ- ಎಸ್‌ಇಪಿ 16- ಕೊಲ ಾರ್ಮ್
ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದಲ್ಲಿ ಬೆಳೆಯುತ್ತಿರುವ ನಾಟಿ ಕೋಳಿ ಮರಿಗಳು.