ಕೊಪ್ಪದ ವಂಶಿ ಮಿಸ್ ಯುನಿವರ್ಸ್ ಕರ್ನಾಟಕ

miss koopa
ಮಿಸ್ ಕೊಪ್ಪ
Published on

ಕೊಪ್ಪ: ಬೆಂಗಳೂರಿನಲ್ಲಿ ನಡೆದ ಮಿಸ್ ಯುನಿವರ್ಸ್ ಕರ್ನಾಟಕ 2025ರ ಬ್ಯೂಟಿ ಪೇಜೆಂಟ್‌ನಲ್ಲಿ ಕೊಪ್ಪದ ಯುವತಿ ವಂಶಿ ಭಾಗವಹಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇವರು ಕೊಪ್ಪ ತಾಲೂಕಿನ ಶಾನುವಳ್ಳಿಯ (ದಪ್ಪದಮನೆ ಕುಟುಂಬ) ನಿವೃತ್ತ ಪ್ರೊ. ಉದಯ್ಕುಮಾರ್ ಮತ್ತು ಶಿಲ್ಪಾ ಅವರ ಪುತ್ರಿ. ಪ್ರಾಥಮಿಕ ಶಿಕ್ಷಣ ಕೊಪ್ಪದಲ್ಲಿ, ಪ್ರೌಢಶಿಕ್ಷಣ ಉಡುಪಿ, ಕಾನೂನು ಪದವಿಯನ್ನು ಮಂಗಳೂರಿನಲ್ಲಿ ಮುಗಿಸಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಮಿಸ್ ಯುನಿವರ್ಸ್ ಕರ್ನಾಟಕ 2025ರ ಸ್ಪರ್ಧೆಯ ನಾನಾ ಸುತ್ತುಗಳಲ್ಲಿ ಪಾಲ್ಗೊಂಡ ಮಾಡೆಲ್ ವಂಶಿ ಮೊದಲನೇ ಸ್ಥಾನ ಪಡೆದು ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net