ಕೊಡವ ಜನಾಂಗ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯಿಂದ ಜೀವನ ನಡೆಸಲಿ

9vpt01
ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟ ವತಿಯಿಂದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಈಶ್ವರಿ ಗಂಗಮ್ಮ, ಮಾಳೇಟಿರ ಕವಿತಾ ಶ್ರೀನಿವಾಸ್, ತಾತಂಡ ಯಶು ಕಬೀರ್ ಇದ್ದರು.
Published on

ವಿರಾಜಪೇಟೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟ ವತಿಯಿಂದ ಸನ್ಮಾನಿಸಲಾಯಿತು.

ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಒಕ್ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ತಪ್ಪಡಕ ಕಟ್ಟುವ ಮೂಲಕ ಚಾಲನೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ಕೊಡವ ಜನಾಂಗ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಜೀವಿತಾವಧಿಯಲ್ಲಿ ಆದಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

ನನ್ನ ಜೀವನದ ಕೊನೇ ಉಸಿರಿರುವ ತನಕ ಜಾನಪದ ಕಲಾ ಪ್ರಾಕಾರವಾದ ಉಮ್ಮತಾಟ್ ಕಲಾ ಪ್ರಕಾರವನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸ ನಿರಂತರವಾಗಿ ಮಾಡಲಿದ್ದೇನೆ ಎಂದರು.

ಇದೇ ಸಂದರ್ಭ ಒಕ್ಕೂಟದ ಸದಸ್ಯೆಯರಿಗೆ ಕೊಡವ ಮದುವೆಯಲ್ಲಿ ಕೊಡವ ಹೆಣ್ಣುಮಕ್ಕಳ ವೇಷ ಭೂಷಣ ಹೇಗೆ ಇದ್ದರೆ ಚೆಂದ ಎಂಬ ವಿಚಾರದ ಬಗ್ಗೆ ಚರ್ಚಾ ಸ್ಪರ್ಧೆ ನಡೆಯಿತು. ಪ್ರಥಮ ಬಹುಮಾನವನ್ನು ನಾಯಕಂಡ ಬೇಬಿ ಚಿಣ್ಣಪ್ಪ, ದ್ವಿತೀಯ ತಾತಂಡ ಪ್ರಭಾ ನಾಣಯ್ಯ, ತೃತೀಯ ಪೆಮ್ಮಂಡ ಗೀತಾ ಪವಿತ್ರಾ ಪಡೆದುಕೊಂಡರು.

ತಾತಂಡ ಜ್ಯೋತಿ ಪ್ರಕಾಶ್ ಒಕ್ಕೂಟಕ್ಕೆ ನೀಡಿದ ದತ್ತಿನಿಧಿಯನ್ನು ಖಜಾಂಚಿ ತಾತಂಡ ಯಶು ಕಬೀರ್ ಪಡೆದುಕೊಂಡರು. ವಿಜೇತರಿಗೆ ಬಹುಮಾನವನ್ನು ಅತಿಥಿ ರಾಣಿ ಮಾಚಯ್ಯ ನೀಡಿದರು.

ಒಕ್ಕೂಟದ ಸದಸ್ಯೆ ಉದ್ದಪಂಡ ವಿಮಲಾ, ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ, ಉಪಾಧ್ಯಕ್ಷೆ ಈಶ್ವರಿ ಗಂಗಮ್ಮ, ಸಹ ಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ಸಲಹಾ ಸಮಿತಿ ಸದಸ್ಯೆ ಬಿದ್ದಂಡ ರಾಣಿಉತ್ತಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net