ಕೊಂಚಾಡಿ ಬಾಲಕನ ಅಪಹರಣ ಯತ್ನ

Published on

ಮಂಗಳೂರು: ನಗರದ ಕೊಂಚಾಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಸವಾರರು ಬಾಲಕನನ್ನು ಅಪಹರಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಸ್ಥಳೀಯ ಮೂವರು ಬಾಲಕರು ಬುಧವಾರ ರಾತ್ರಿ ದೇವಾಲಯದಿಂದ ಮನೆಗೆ ಹೋಗುತ್ತಿದ್ದಾಗ ಮೂರು ಮಂದಿ ದ್ವಿಚಕ್ರ ವಾಹನದಲ್ಲಿ ಬಂದು ಬಾಲಕರ ಬಳಿ ನಿಲ್ಲಿಸಿದ್ದಾರೆ. ಈ ಸಂದರ್ಭ ಗೋಣಿ ಮುಸುಕು ಹಾಕಿ ಬಾಲಕರನ್ನು ಹಿಡಿಯಲು ಯತ್ನಿಸಿದ್ದಾರೆ. ಓರ್ವ ಬಾಲಕ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಅಷ್ಟರಲ್ಲಿ ಇನ್ನೋರ್ವ ಬಾಲಕನನ್ನು ಹಿಡಿದುಕೊಂಡಾಗ ಆತ ಗಾಬರಿಯಿಂದ ಬೊಬ್ಬೆ ಹಾಕಿದ್ದಾನೆ. ಸ್ವಲ್ಪ ದೂರದಲ್ಲಿದ್ದ ಸಾರ್ವಜನಿಕರು ಓಡಿ ಬರುತ್ತಿರುವುದನ್ನು ಗಮನಿಸಿ ಅಪಹರಣಕಾರರು ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ.
ಕಂಕನಾಡಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪರಿಸರದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು, ಅದರಲ್ಲಿ ಅಪಹರಣ ಯತ್ನ ದೃಶ್ಯ ದಾಖಲಾಗಿದೆ. ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net