‘ಕೈ ತುತ್ತು’ ಕಾರ್ಯಕ್ರಮಕ್ಕೆ ದೀಪಾ ಕುಡಚಿ ಚಾಲನೆ

2525
Published on

ಬೆಳಗಾವಿ: ಬೆಂಗಳೂರಿನ ವಿಸ್ತಾರ ಫೌಂಡೇಷನ್ ವತಿಯಿಂದ ಅಂತಾರಾಷ್ಟ್ರೀಯ ಆಹಾರ ದಿನ ಅಂಗವಾಗಿ ಬೆಳಗಾವಿಯ ರಾಮ ನಗರದ ದುರ್ಗಾದೇವಿ ಮಂದಿರದಲ್ಲಿ ‘ಕೈ ತುತ್ತು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಉದ್ಘಾಟಿಸಿದರು.

500ಕ್ಕೂ ಅಧಿಕ ಜನರಿಗೆ ಆಹಾರ ಪೊಟ್ಟಣ ಬಡವರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು. ಫೌಂಡೇಷನ್ ಸದಸ್ಯರಾದ ಸುಜಾತಾ ಕುಮಾರ, ಆರತಿ ಅಂಗಡಿ, ದೀಪಾ ಪವಾರ, ಶಕುಂತಲಾ ದೊಡಮನಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net