ಕೇಸರಿ ಸೀರೆ ತೊಟ್ಟ ಮಹಿಳೆಯರು

18bdvt2 rss
Published on

ಭದ್ರಾವತಿ: ಸಾವಿರಾರು ರಾಷ್ಟ್ರೀಯ ಸ್ವಯಂ ಸೇವಕರು, ವಿವಿಧ ಹಿಂದು ಸಂಘಟನೆಗಳ ಪ್ರಮುಖರು ಶನಿವಾರ ಸಂಜೆ ನಗರದಲ್ಲಿ ವಿಜಯದಶಮಿ ಪಥಸಂಚಲನ ನಡೆಸಿದರು.

ನಗರದ ಹೊಸಮನೆ ಶಿವಾಜಿ ವೃತ್ತದಲ್ಲಿ ಸಂಜೆ 5.30ಕ್ಕೆ ಒಂದೆಡೆ ಸೇರಿದ ಗಣಧಾರಿಗಳಿಗೆ ಕೇಸರಿ ಸೀರೆ ತೊಟ್ಟ ಮಹಿಳೆಯರು ತಿಲಕವಿಟ್ಟು, ಆರತಿ ಮಾಡಿ, ಹೂಮಳೆಗೆರೆಯುತ್ತಾ ಪಥಸಂಚಲನಕ್ಕೆ ಅನುವು ಮಾಡಿಕೊಟ್ಟರು. ಭಾರತ ಮಾತೆಯ ವೇಷ ತೊಟ್ಟಿದ್ದ ಮಹಿಳೆ ಮುಂದಡಿ ಇಡುತ್ತಿದ್ದಂತೆ ಪಥಸಂಚನ ಆರಂಭವಾಯಿತು. ಪಥ ಸಂಚಲನವು ಹೊಸಮನೆ ಶಿವಾಜಿ ವೃತ್ತದಿಂದ ಪ್ರಾರಂಭವಾಗಿ ರಂಗಪ್ಪವೃತ್ತ, ಮಾಧವಚಾರ್ ವೃತ್ತದ ಮೂಲಕ ಬಿ.ಎಚ್ ರಸ್ತೆ ಮಾರ್ಗವಾಗಿ ಲೋಯರ್ ಹುತ್ತಾದ ಬಳಿ ಮುಕ್ತಾಯವಾಯಿತು.

ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಗಣವೇಷಧಾರಿಗಳಿಗೆ ಹೂ ಮಳೆ ಸುರಿಸಲಾಯಿತು. ಪಥಸಂಚನ ಸ್ವಾಗತಿಸಲು ಅಕ್ಕಪಕ್ಕದ ನಿವಾಸಿಗಳು ಅಂಗಡಿ ಮುಂಗಟ್ಟಗಳ ಮಾಲೀಕರು ರಸ್ತೆಗಳಲ್ಲಿ ರಂಗೋಲಿ ಬಿಡಿಸಿ ಸ್ವಾಗತ ಕೋರಿದರು. 6 ತಿಂಗಳ ಮಗು ಗಣಾಂಶ್, 2 ವರ್ಷದ ನಚಿಕೇತ್ ಕೂಡ ಗಣಧಾರಿ ವೇಷ ತೊಟ್ಟು ಪಥ ಸಂಚಲನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ರಂಗಪ್ಪವೃತ್ತದಲ್ಲಿ ಭಾರತಮಾತೆ ಪ್ರತಿಷ್ಠಾಪಿಸಿದ್ದರೆ, ಮಾಧವಚಾರ್ ವೃತ್ತದಲ್ಲಿ ರಾಮಭಕ್ತ ಹನುಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು.

ಪಥ ಸಂಚಲನ ಸಾಗುವ ಮುಖ್ಯರಸ್ತೆಗಳನ್ನು ಕೇಸರಿ ಬಂಟಿಂಗ್ಸ್‌ಗಳಿಂದ ಸಿಂಗರಿಸಲಾಗಿದ್ದು. ಪಥ ಸಂಚಲನ ಸಾಗುವ ಮಾರ್ಗದುದ್ದಕ್ಕೂ ಸ್ವಯಂ ಸೇವಕರ ಮೇಲೆ ಹೂವಿನ ಮಳೆಗೆರೆಯಲು ಎರಡು ಕ್ವಿಂಟಾಲ್ ಹೂಗಳನ್ನು ತರಿಸಲಾಗಿತ್ತು.

ಆರ್‌ಎಸ್‌ಎಸ್ ಸಂಘ ಚಾಲಕ್ ಶಿವಕುಮಾರ್, ಡಾ.ದತ್ತಾತ್ರಿ ಮಾರ್ಗದರ್ಶನದಲ್ಲಿ ಪಥಸಂಚಲನ ನಡೆಯಿತು. ಪ್ರಚಾರಕ್ ಪ್ರವೀಣ್, ವಿಎಚ್‌ಪಿ ಪ್ರಮುಖ್ ಹಾ.ರಾಮಪ್ಪ, ಬಿಜೆಪಿ ಮುಖಂಡರಾದ ಜಿ.ಧರ್ಮಪ್ರಸಾದ್, ಎಚ್.ಕೆ.ತೀರ್ಥಯ್ಯ, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ಮಂಜಣ್ಣ, ಸುರೇಶಪ್ಪ, ಚನ್ನೇಶ್, ವಡಿವೇಲು. ವಿಶ್ವನಾಥ್, ಧನುಷ್, ನಕುಲ್, ಅರಳಿಹಳ್ಳಿ ಪ್ರಕಾಶ್, ರಾಮಚಂದ್ರ, ಕಾ.ರಾ. ನಾಗರಾಜ್, ಬಿ.ಆರ್.ಶಿವಕುಮಾರ್, ನವನೀತ್, ಮುರಳಿ, ಮಾಲತೇಶ್, ಸೇರಿದಂತೆ ಬಿಜೆಪಿ, ವಿಎಚ್‌ಪಿ, ಬಿಎಂಎಸ್, ಎಚ್‌ಎಂಎಸ್ ಸೇರಿದಂತೆ 33 ವಿಭಾಗದವರೂ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net