ಕೆಲ್ಲೂರು ಹಾಲು ಉತ್ಪಾದಕರ ಸಂಘಕ್ಕೆ ಜೆಡಿಎಸ್ ಬೆಂಬಲಿತರ ಆಯ್ಕೆ

RAVANDURU 1
ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿದರು.
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಸಂಘದ 13 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತರು 13 ಸ್ಥಾನಗಳಲ್ಲೂ ವಿಜಯ ಸಾಧಿಸಿದ್ದು. ಆ ಮೂಲಕ ಕಾಂಗ್ರೆಸ್ ಬೆಂಬಲಿತರು ಪರಾಭವಗೊಂಡಿದ್ದಾರೆ.

ನಿರ್ದೇಶಕರಾಗಿ ನಾಗರಾಜು, ಜಯಶಂಕರ್, ಪ್ರಭುಆರಾಧ್ಯ, ನಾಗೇಗೌಡ, ಹರೀಶ್, ಮಾದೇವ, ಕೆ.ಎಸ್.ಅಶೋಕ, ನೇತ್ರಾವತಿ ಮಂಜುಳಮ್ಮ, ಲಲಿತಮ್ಮ, ಕೆ.ಕೆ.ಮಂಜುನಾಥ್, ನಂಜುಂಡ, ಪ್ರಭಾಕರ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಇಲಾಖೆಯ ಚುನಾವಣಾಧಿಕಾರಿ ಯತೀಂದ್ರ ತಿಳಿಸಿದ್ದಾರೆ.
ಜೆಡಿಎಸ್ ಮುಖಂಡರಾದ ಶಿವಣ್ಣ, ರವಿ, ಗ್ರಾಪಂ ಸದಸ್ಯ ಚಲುವೇಗೌಡ, ಮಂಜುನಾಥ್, ಶಿವಣ್ಣ, ರವಿ, ಮದನ್‌ಪಟೇಲ್, ಜವರಯ್ಯ, ಜಯಣ್ಣ, ಕಾರ್ಯದರ್ಶಿ ಸತೀಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net