ಕೆರೆಯಲ್ಲಿ ಮುಳುಗಿ ಬಾಲಕ ಸಾವು

08-PRAJWAL-2
ಮೃತ ಬಾಲಕ ಪ್ರಜ್ವಲ್
Published on

ಕೆ.ಆರ್.ನಗರ: ತಾಲೂಕಿನ ಕೋಗಿಲೂರು ಗ್ರಾಮದಲ್ಲಿ ಗುರುವಾರ ಕೆರೆಯಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವಿಗೀಡಾಗಿದ್ದು, ಮತ್ತೊಬ್ಬನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ಗ್ರಾಮದ ನಿಂಗರಾಜು ಪುತ್ರ ಪ್ರಜ್ವಲ್(14) ಮೃತಪಟ್ಟವ. ಗ್ರಾಮದ ರಮೇಶ್ ಎಂಬವರ ಪುತ್ರ ಪ್ರಜ್ವಲ್‌ನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.


ಹಂಡಿತವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಮೃತ ಬಾಲಕ ತನ್ನ ಸ್ನೇಹಿತನ ಜತೆ ದನ ತೊಳೆಯಲು ಹೋಗಿದ್ದ. ಈ ವೇಳೆ ಪ್ರಜ್ವಲ್ ಈಜಲು ಮುಂದಾದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.


ಇನ್ನು ಸ್ನೇಹಿತನನ್ನು ರಕ್ಷಿಸಲು ಮುಂದಾಗಿ ನೀರಿನಲ್ಲಿ ಮುಳುಗುತ್ತಿದ್ದ ರಮೇಶ್ ಪುತ್ರ ಪ್ರಜ್ವಲ್‌ನನ್ನು ಕೆರೆ ಸಮೀಪ ಹೋಗುತ್ತಿದ್ದ ಗ್ರಾಮಸ್ಥರು ನೀರಿಗಿಳಿದು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರ ಭಾಸ್ಕರ್ ನೀರಿನಲ್ಲಿ ಮುಳುಗಿದ್ದ ಪ್ರಜ್ವಲ್ ಶವವನ್ನು ಹೊರತೆಗೆದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net