ಕೆಬಿಜೆಎನ್​ಎಲ್​ ಕಚೇರಿ ಮುಂದೆ ಪ್ರತಿಭಟನೆ ಇಂದು

Published on

ಕೊಲ್ದಾರ: ಕೃಷ್ಣಾ ನದಿ ನೀರನ್ನು ತೆಲಂಗಾಣಕ್ಕೆ ಬಿಟ್ಟಿರುವುದನ್ನು ಖಂಡಿಸಿ ಆಲಮಟ್ಟಿ ಕೃಷ್ಣಾ ಜಲನಿಗಮ (ಕೆಬಿಜಿಎನ್​ ಎಲ್​) ಕಚೇರಿ ಮುಂದೆ ಬಸವನಬಾಗೇವಾಡಿ ಬಿಜೆಪಿ ಮಂಡಲ ಹಾಗೂ ಮತೇತ್ರದ ಜನರ ಸಹಯೋಗದಲ್ಲಿ ಮಾ.11 ರಂದು ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಎಸ್​.ಕೆ.ಬೆಳ್ಳುಬ್ಬಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ನೀರಾವರಿ ಯೋಜನೆಯಿಂದ ರೈತರು ವಂಚಿತವಾಗಿದ್ದಾರೆ. ರೈತರ ಜಮೀನಿಗೆ ನೀರು ಕೊಡುವುದನ್ನು ಬಿಟ್ಟು ಸರ್ಕಾರ ತೆಲಂಗಾಣಕ್ಕೆ ಬಿಟ್ಟಿರುವುದು ಸರಿಯಲ್ಲ ಎಂದರು.

ಕೂಡಗಿ, ತೆಲಗಿ, ಗೊಳಸಂಗಿ,ಅಂಗಡಗೇರಿ, ಬೇನಾಳ ಆರ್​.ಎಸ್​., ಕೊಲ್ಹಾರ ಸೇರಿ ಅನೇಕ ಗ್ರಾಮಗಳಿಗೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಅನ್ಯ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮಾರ್ಚ್​ ತಿಂಗಳ 15ರವರೆಗೆ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net