ಕೆಐಒಸಿಎಲ್ 2019-20ರ ಅಥಿರ್ಕ ವರ್ಷ ಮುಕ್ತಾಯಕ್ಕೆ ಕಂಪನಿಯು 2056.53 ಕೋಟಿ ರೂ.ವಹಿವಾಟು ನಡೆಸಿದ್ದು, 43.38 ಕೋಟಿ ರೂ.ಲಾಭವನ್ನು ಗಳಿಸಿದೆ. ಕೆಐಒಸಿಎಲ್ ತನ್ನ 44ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಬೆಂಗಳೂರಿನ ಕಚೇರಿಯಲ್ಲಿ ಮಂಗಳವಾರ ನಡೆಸಿತು. ಕೆಐಒಸಿಎಲ್‌ನ ಸಿಎಂಡಿ ಎಂ.ವಿ.ಸುಬ್ಬಾರಾವ್ ವಾರ್ಷಿಕ ವರದಿ ಬಿಡುಗಡೆ ಮಾಡಿ ಲಾಭಾಂಶದ ಬಗ್ಗೆ ಮಾಹಿತಿ ನೀಡಿದರು. ನಂತರ ಷೇರುದಾರರು ಉದ್ದೇಶಿಸಿ ಮಾತನಾಡಿದ ಸುಬ್ಬಾರಾವ್ ಅವರು, 2 2019-20ರ ಅಥಿರ್ಕ ವರ್ಷ ಮುಕ್ತಾಯಕ್ಕೆ ಕಂಪನಿಯು 2056.53 ಕೋಟಿ ರೂ.ವಹಿವಾಟು ನಡೆಸಿದೆ. 43.38 ಕೋಟಿ ರೂ.ಲಾಭವನ್ನು ಗಳಿಸಿದೆ. ಈವರೆಗೆ ನಡೆದ ವಹಿವಾಟುಗಳನ್ನು ಹಿಂದಿಕ್ಕಿ ನಮ್ಮ ಕಂಪನಿಯು ಹೊಸ ದಾಖಲೆ ಸೃಷ್ಟಿಸಿದೆ. 019-20ನೇ ವಾರ್ಷಿಕ ಲೆಕ್ಕಪತ್ರದ ಮೂಲಕ 10 ರೂ.ಮುಖ ಬೆಲೆಯ ಷೇರುಗಳಿಗೆ ಶೇ.0.7(ಪ್ರತಿ ಈಕ್ವಿಟಿಗೆ) ಲಾಭಾಂಶವನ್ನು ವಿತರಿಸಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದರು. ಕರೊನಾದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರು ಮತ್ತು ಪೆಲೆಟ್ಸ್ ಉತ್ಪಾದನೆಯಲ್ಲಿ ತೊಡಕು ಉಂಟಾಗಿತ್ತು. ಇದು ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ. ಆದರೂ, ನಮ್ಮ ಕಂಪನಿಯು ಪರಿಸ್ಥಿತಿ ಅರ್ಥ ಮಾಡಿಕೊಂಡು ಕೆಲಸ ಮಾಡುವ ಮೂಲಕ ಬದ್ಧತೆಯನ್ನು ಮೆರೆದಿದ್ದು, ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಿದೆ ಎಂದರು. 2.375 ಮಿಲಿಯನ್ ಟನ್ ಪೆಲೆಟ್ಸ್ ಉತ್ಪಾದನೆ (ಶೇ.6 ವೃದ್ಧಿ)ಮಾಡಿದ್ದೇವೆ. 2.356 ಮಿಲಿಯನ್ ಟನ್ಸ್(ಶೇ.7 ವೃದ್ಧಿ) ಪೆಲೆಟ್ಸ್ ರವಾನೆ ಮಾಡಿದ್ದೇವೆ. ಒಟ್ಟಾರೆ 2056.53 ಕೋಟಿ ರೂ.(ಶೇ.2 ವೃದ್ಧಿ) ವಹಿವಾಟು ನಡೆಸಿದ್ದೇವೆ. ತೆರಿಗೆ ಮುಂಚಿನ ಲಾಂಭಾಂಶ ಲಾಭ 63.68 ಕೋಟಿ ರೂ. ತೆರಿಗೆ ನಂತರ 43.48 ಕೋಟಿ ರೂ.ಲಾಭ ದೊರೆತಿದೆ. ಪೆಲೆಟ್ಸ್ ರ್ತು 1.99 ಮಿಲಿಯನ್ ಟನ್ಸ್‌ಗೆ 1574.13 ಕೋಟಿ ರೂ. ಇದೆ. ಇದು 2005ರ ನಂತರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕಂಪನಿಯು ಶೇ.84 ಉತ್ಪನ್ನವನ್ನು ಬ್ರೆಜಿಲ್, ಮಧ್ಯ ಪೂರ್ವ ಭಾಗ, ಚೀನಾ, ಯುರೋಪ್ ಸೇರಿದಂತೆ ಹಲವು ಪ್ರದೇಶಗಳಿಗೆ ರ್ತು ಮಾಡಿದೆ. ಕರಾವಳಿ ಭಾಗದ ಮಾರ್ಗವನ್ನು ಬಳಕೆ ಮಾಡಿಕೊಂಡು ರ್ತು ಮಾಡಲಾಗಿದೆ ಎಂದರು. ಕಂಪನಿಯನ್ನು ಮತ್ತಷ್ಟು ಅಭಿವೃದ್ಧಿಯ ಪಥದ ಕಡೆ ಕೊಂಡೊಯ್ಯಲು ಯೋಜನೆ ರೂಪಿಸಲಾಗುತ್ತಿದೆ. ಕರ್ನಾಟಕದಲ್ಲಿ 5 ಮೆಗಾ ವ್ಯಾಟ್ ಸೋಲಾರ್ ಪವರ್ ಪ್ಲಾಟ್ ನಿರ್ಮಾಣ ಮಾಡುವ ಕಾರ್ಯ, ಪೆಲೆಟ್ಸ್ ಪ್ಲಾಟ್ ಯೂನಿಟ್ ಆಧುನೀಕರಣ, ಖನಿಜ ಪರಿಶೋಧನಾ ಯೋಜನೆಗಳು, ರಾಜ್ಯದಲ್ಲಿ ಗುರುತಿಸಿರುವ ಖನಿಜ ಸಂಪನ್ಮೂಲ ಪ್ರದೇಶಗಳಿಗೆ ನಿರಪೇಕ್ಷಣಾ ಪತ್ರ ಪಡೆಯುವ ಎಲ್ಲ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಸಿಎಸ್‌ಆರ್ ಯೋಜನೆ ಅಡಿ 3.31 ಕೋಟಿ ರೂ.ಗಳನ್ನು ಶಿಕ್ಷಣ, ಕ್ರೀಡಾ ಪ್ರೋತ್ಸಾಹ, ಸ್ವಚ್ಛ ಕುಡಿಯುವ ನೀರು, ಆರೋಗ್ಯ ಮತ್ತು ಅಭಿವೃದ್ಧಿಗಾಗಿ ಬಳಕೆ ಮಾಡಲಾಗಿದೆ. 10.10 ಕೋಟಿ ರೂ.ಗಳನ್ನು ಪಿಎಂ ಕೇರ್ ಂಡ್‌ಗೆ ಮತ್ತು 15 ಲಕ್ಷ ರೂ.ಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ ಎಂದರು. (ೊಟೋ ಸ್ಟೇಟ್‌ನಲ್ಲಿ ಸೆ.30ರಲ್ಲಿ ಕೆಐಒಸಿಎಲ್ ಎಂಬ ೈಲ್‌ನೇಮ್‌ನಲ್ಲಿದೆ)