ಕೆಐಎನಲ್ಲಿ ಮಾಸ್ಕ್​ ವೆಂಡಿಂಗ್​ ಕಿಯಾಸ್ಕ್​

Published on

ನೂತನ ವ್ಯವಸ್ಥೆ ಅ. 15ರವರೆಗೆ ಮಾತ್ರ ಇರಲಿದೆ. ಮಾಸ್ಕ್​ ವಿತರಿಸುವುದಕ್ಕಿಂತ ಜನರಲ್ಲಿ ಮಾಸ್ಕ್​ ಧರಿಸುವುದರಿಂದ ಕರೊನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯ ಎಂಬುದನ್ನು ತಿಳಿಸುವುದಾಗಿದೆ. ಹೀಗಾಗಿ ಬೇರೆ ನಗರಗಳಿಂದ ಬರುವವರು ಇನ್ನು 10 ದಿನ ಕೆಐಎನಲ್ಲಿ ಉಚಿತ ಮಾಸ್ಕ್​ ಪಡೆದು ಧರಿಸಿ, ಸುರತವಾಗಿರಬಹುದಾಗಿದೆ.

ಅ. 15ರವರೆಗೆ ವಿತರಣೆ:

ಆರ್​.ಕೆ.ಟ್ರಸ್ಟ್​ ಆರಂಭಿಸಿರುವ ಲೆಟ್ಸ್​ ಮಾಸ್ಕ್​ ಇಂಡಿಯಾ ಅಭಿಯಾನದ ಅಡಿಯಲ್ಲಿ ಮಾಸ್ಕ್​ ಇಲ್ಲದ ವಿಮಾನ ಪ್ರಯಾಣಿಕರಿಗೆ ಮಾಸ್ಕ್​ ನೀಡಲಾಗುತ್ತದೆ. ಮಾಸ್ಕ್​ ಬೇಕೆನ್ನುವವರು ಕಿಯಾಸ್ಕ್​ನಲ್ಲಿ ಅಳವಡಿಸಲಾಗಿರುವ ಸೆನ್ಸಾರ್​ಗೆ ಕೈಯನ್ನು ತೋರಿಸಿದರೆ, ಯಂತ್ರದ ಮೂಲಕ ಮಾಸ್ಕ್​ ಹೊರಬರಲಿದೆ. ಅದಕ್ಕೆ ಯಾವುದೇ ಹಣ ನೀಡುವ ಅವಶ್ಯಕತೆಯಿಲ್ಲ. ಅಲ್ಲದೆ, ಇದು ಕೇವಲ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಿದ್ದು, ಕೆಐಎ ಸಿಬ್ಬಂದಿ ಅಥವಾ ವಾಣಿಜ್ಯ ಮಳಿಗೆಗಳ ಸಿಬ್ಬಂದಿ ಮಾಸ್ಕ್​ ಪಡೆಯುವಂತಿಲ್ಲ ಎಂದು ತಿಳಿಸಲಾಗಿದೆ.

ಉಚಿತ ಮಾಸ್ಕ್​ ವಿತರಣೆ:

ರಾಜ್ಯದಲ್ಲಿ ಮಾಸ್ಕ್​ ಧರಿಸದೆ ಓಡಾಡುವವರಿಗೆ ವಿಧಿಸಲಾಗುವ ದಂಡದ ಪ್ರಮಾಣವನ್ನು 500 ರೂ.ನಿಂದ 1 ಸಾವಿರ ರೂ.ವರೆಗೆ ನಿಗದಿ ಮಾಡಲಾಗಿದೆ. ಆದರೂ, ಜನರು ಮಾತ್ರ ಮಾಸ್ಕ್​ ಧರಿಸುವುದರ ಬಗ್ಗೆ ಇನ್ನೂ ಜಾಗೃತರಾಗಿಲ್ಲ. ಆದರೆ, ಬೇರೆ ನಗರಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸುವಂತೆ ಮಾಡಲು ಬಿಐಎಎಲ್​ ವಿನೂತನ ಕ್ರಮ ಕೈಗೊಂಡಿದೆ. ಅದರಂತೆ ವಿವಿಧ ನಗರಗಳಿಂದ ಬರುವ ವಿಮಾನಗಳಿಂದ ಪ್ರಯಾಣಿಸಿ ಹೊರಬರುವ ಪ್ರಯಾಣಿಕರಿಗೆ ಮಾಸ್ಕ್​ ನೀಡಲು ಕಿಯಾಸ್ಕ್​ ಅಳವಡಿಸಲಾಗಿದೆ.

ಬೆಂಗಳೂರು: ಕರೊನಾದಿಂದ ರಸಿಕೊಳ್ಳಲು ವಿಮಾನಯಾನ ಪ್ರಯಾಣಿಕರಲ್ಲಿ ಮಾಸ್ಕ್​ ಧರಿಸುವ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ತಂತ್ರಜ್ಞಾನದ ಮೊರೆ ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net