ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ರೈತರ ವಾರ್ಷಿಕ ಬೆಳೆಯಾದ ಮಾವಿಗೆ ಬೆಲೆ ಕುಸಿದಿದ್ದು, ಇದರ ಜೊತೆ ರೈತರ ತೋಟಗಾರಿಕೆ ಬೆಳೆಗಳಾದ ಟೊಮೆಟೋ ಜೊತೆಗೆ ಪಪ್ಪಾಯಿ ಬೆಲೆಯೂ ಕುಸಿದಿದ್ದು, ರೈತರಿಗೆ ಸರಣಿ ಆತಂಕಗಳು ಎದುರಾಗಿವೆ.
ಜಿಲ್ಲೆಯಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಕ್ಯಾಪ್ಸಿಕಂ, ಬಜ್ಜಿ ಸೇರಿದಂತೆ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಪಪ್ಪಾಯಿಯನ್ನು ಬೆಳೆಯುತ್ತಿದ್ದಾರೆ. ಪಪ್ಪಾಯಿ ೨ ವರ್ಷದ ಬೆಳೆಯಾಗಿದ್ದು, ನಾಟಿ ಮಾಡಿದ ೮ ತಿಂಗಳಿಗೆ ಫಸಲು ಬಂದು ೨ ವರ್ಷಗಳ ಕಾಲ ಫಸಲು ನೀಡುತ್ತದೆ.
ಹೆಚ್ಚು ಫಸಲು ಮತ್ತು ಲಾಭದಾಯಕವಾದ ಕೆಂಪು ಸುಂದರಿ ಎಂಬ ಪಪ್ಪಾಯಿ ತಳಿಯನ್ನು ನುಗ್ಗಲಾಪುರದ ರೈತ ಆಂಜಿನಪ್ಪ ಎಂಬುವವರು ತಮ್ಮ ನಾಲ್ಕೂವರೆ ಎಕೆರೆ ತೋಟದಲ್ಲಿ ಉತ್ತಮ ಫಸಲನ್ನು ಬೆಳೆದಿದ್ದು, ಬೆಲೆ ಕುಸಿದಿರುವ ಕಾರಣ ಆತಂಕಕ್ಕೆ ಒಳಗಾಗಿದ್ದಾನೆ.
ಒಂದು ಎಕೆರೆಯಲ್ಲಿ ಪಪ್ಪಾಯಿ ಬೆಳೆಯಲು ಸುಮಾರು ೪.೫ ಲಕ್ಷ ಖರ್ಚು ಬಂದಿದ್ದು, ಪಪ್ಪಾಯಿ ಸಸಿ ನಾಟಿ ಮಾಡಿ ೮ ತಿಂಗಳಿಗೆ ಫಸಲು ಬಂದಿದ್ದು, ೨ ತಿಂಗಳಿನಿAದ ಫಸಲು ಮಾರಾಟ ಮಾಡುತ್ತಿದ್ದು, ಪ್ರತಿ ಕೆ.ಜಿ.ಗೆ ೯ ರೂ.ಗಳಿಗೆ ಮಾರಾಟವಾಗುತ್ತಿದೆ. ಹಾಕಿದ ಬಂಡವಾಳವೂ ಬರದಂತೆ ಆಗಿದೆ. ಕನಿಷ್ಟ ಕೆ.ಜಿ. ೧೫ ರೂ.ಗಳಿಂದ ೧೬ ರೂ.ಗಳಿಗೆ ಮಾರಾಟ ಆದರೆ ಅಸಲು ಬರುತ್ತದೆ ಎಂಬುದು ಕೆಂಪು ಸುಂದರಿ ಪಪ್ಪಾಯಿ ಬೆಳೆದ ರೈತರದ್ದಾಗಿದೆ.
ದೇಶಿ ತಳಿಯ ಪಪ್ಪಾಯಿಯನ್ನು ಬೆಳೆಯುತ್ತಿದ್ದ ರೈತರು ಲಾಭದಾಯಕ ಬೆಳೆಯಲ್ಲ ಎಂದು ಉತ್ತರ ಭಾರತದಲ್ಲಿ ಬೆಳೆಯುತ್ತಿದ್ದ ಕೆಂಪು ಸುಂದರಿ ಪಪ್ಪಾಯಿ ತಳಿಯನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಬೆಳೆಯಲು ಪ್ರಾರಂಭಿಸಿ ಲಾಭದಾಯಕ ಬೆಳೆ ಎಂದು ತೀರ್ಮಾನಿಸಿ ಕೆಂಪು ಸುಂದರಿ ಪಪ್ಪಾಯಿಯನ್ನು ಜಿಲ್ಲೆಯ ಇತರೆ ಭಾಗಗಳಲ್ಲಿ ರೈತರು ಬೆಳೆಯಲು ಮುಂದಾಗಿದ್ದಾರೆ.
ಟೊಮೆಟೋ ಮತ್ತು ತರಕಾರಿ ಬೆಳೆಗಳಿಗೆ ಇತ್ತೀಚೆಗೆ ವೈರಸ್ ಕಾಟ ಜಿಲ್ಲೆಯಲ್ಲಿ ಹೆಚ್ಚಾದ ಕಾರಣ ಪಪ್ಪಾಯಿ ಬೆಳೆಯಲು ರೈತರು ಮುಂದಾದರು. ಪಪ್ಪಾಯಿ ಬೆಳೆಯಲು ನಷ್ಟ ಅನುಭವಿಸಿದ ರೈತರು ಕೆಲವು ದಿನಗಳ ಕಾಲ ಪಪ್ಪಾಯಿ ಬೆಳೆಯನ್ನು ಕೈಬಿಟ್ಟರು. ಉತ್ತರ ಭಾರತದಲ್ಲಿ ಬೆಳೆಯುತ್ತಿದ್ದ ಕೆಂಪು ಸುಂದರಿ ತಳಿಯಲ್ಲಿ ಹೆಚ್ಚು ಲಾಭ ಪಡೆಯಬಹುದು. ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರುತ್ತದೆ ಎಂದು ನಿರೀಕ್ಷಿಸಿದ ರೈತರು ಕೆಂಪು ಸುಂದರಿ ಪಪ್ಪಾಯಿ ತಳಿಯನ್ನು ಬೆಳೆಯಲು ಮುಂದಾಗಿದ್ದಾರೆ.
ಕೋಟ್
ಕೆಂಪು ಸುಂದರಿ ಪಪ್ಪಾಯಿ ಬೆಳೆಯಲು ತೀರ್ಮಾನಿಸಿ ಒಂದು ನಾರಿಗೆ ೧೫ ರೂ.ಗಳಂತೆ ತಂದು ನಾಟಿ ಮಾಡಿ ಬೆಳೆಯನ್ನು ಬೆಳೆಯಲಾಗಿದೆ. ಇತ್ತೀಚೆಗೆ ವೈರಸ್ ಕಾಟ ಹೆಚ್ಚಾಗುತ್ತಿದೆ. ಬೆಲೆಯು ದಿಢೀರನೆ ಮಾರುಕಟ್ಟೆಯಲ್ಲಿ ಕುಸಿದಿದೆ. ತೋಟದಲ್ಲಿಯೇ ವ್ಯಾಪಾರಸ್ಥರು ಕೆ.ಜಿ.ಗೆ ೫ ರೂ.ಗಳಂತೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ನಷ್ಟ ಅನುಭವಿಸುವಂತೆ ಆಗಿದೆ. ಒಂದು ಕೆ.ಜಿ.೨೦ ರೂ.ಗಳಿಗೆ ಮಾರಾಟವಾದರೆ ಮಾತ್ರ ರೈತನಿಗೆ ಲಾಭ ಬರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಹಾಕಿದ ಬಂಡವಾಳ ಕೈ ಸೇರದಂತೆ ಆಗಿದೆ.
-ಆಂಜಿನಪ್ಪ, ನುಗ್ಗಲಾಪುರ ರೈತ.
ಚಿತ್ರ ೨೭ ಕೆ.ಎಲ್.ಆರ್. ೦೨ : ನಾಗಲಾಪುರದ ರೈತ ಕೆಂಪು ಸುಂದರಿ ತಳಿಯ ಪಪ್ಪಾಯಿಯನ್ನು ಅವರ ತೋಟದಲ್ಲಿ ಬೆಳೆದಿರುವುದು.
ಚಿತ್ರ ೨೭ ಕೆ.ಎಲ್.ಆರ್. ೦೨ಎ : ಆಂಜಿನಪ್ಪ, ನುಗ್ಗಲಾಪುರ ರೈತ ಭಾವಚಿತ್ರ