ಕೆ.ಸಿ.ವ್ಯಾಲಿ ಯೋಜನೆಯ ನೀರಿನ ಹರಿಯುವ ಪ್ರಮಾಣ ಕಡಿಮೆ / ಖಾಲಿಯಾಗುತ್ತಿರುವ ಕೆರೆಗಳಲ್ಲಿ ನೀರು / ಅಂತರ್ಜಲ ಕುಸಿಯುವ ಭೀತಿ / ಟೊಮೆಟೋ ಬೆಳೆಗಾರರಿಗೆ ಆತಂಕ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೆ.ಸಿ.ವ್ಯಾಲಿ ಯೋಜನೆಯಿಂದ ಜಿಲ್ಲೆಯ ಕೆಲವೊಂದು ಕೆರೆಗಳಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೆರೆಗಳಲ್ಲಿ ನೀರು ಖಾಲಿಯಾಗತೊಡಗಿವೆ. ಬೆಂಗಳೂರಿನಿAದ ಸಂಸ್ಕರಿಸಿ ನೀರು ಕೆರೆಗಳಿಗೆ ಹರಿಸುತ್ತಿದ್ದು, ದಿನೇ ದಿನೇ ನೀರು ಕಡಿಮೆಯಾಗಿದ್ದು, ಇದರಿಂದ ಅಂತರ್ಜಲ ಕುಸಿಯುವ ಆತಂಕ ಎದುರಾಗಿದೆ.

ಕೋಲಾರ ಜಿಲ್ಲೆಗೆ ಯಾವುದೇ ನದಿ ಮೂಲಗಳು ಇಲ್ಲದ ಕಾರಣ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ನೀಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದ ಮೊದಲನೇ ಹಂತದ ೧೬೭ ಕೆರೆಗಳಿಗೆ ನೀರು ತುಂಬಿಸಲಾಯಿತು. ೨ನೇ ಹಂತದ ಯೋಜನೆಯ ಕಾಮಗಾರಿ ಮುಂದುವರೆದಿದೆ. ಈ ಯೋಜನೆಯಿಂದಲೇ ಕೆಲವೊಂದು ಕರೆಗಳಿಗೆ ನೀರು ಹರಿಯಲಿವೆ.

ಮೊದಲನೇ ಹಂತದಲ್ಲಿ ಹರಿಸಲಾಗುತ್ತಿರುವ ನೀರಿನ ಪ್ರಮಾಣ ಬೇಸಿಗೆಯ ತಾಪಮಾನ ಹೆಚ್ಚಾಗುತಿದ್ದಂತೆ ಬೆಂಳೂರಿನಿAದ ಹರಿಸಲಾಗುತ್ತಿರುವ ನೀರಿನ ಪ್ರಮಾಣವು ದಿನೇ ದಿನೇ ಕಡಿಮೆಯಾಗತೊಡಗಿದೆ. ಕೆರೆಗಳಿಂದ ಕೆರೆಗಳಿಗೆ ಹರಿಸಲಾಗುತ್ತಿರುವ ನೀರು ಮುಂದಕ್ಕೆ ಹೋಗದಂತೆ ಆಗಿದೆ.

ಮುದುವಾಡಿ ಕೆರೆಯಿಂದ ಚಿಲ್ಲಪ್ಪನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿತ್ತು. ಕಳೆದ ಒಂದು ವಾರದಿಂದ ನೀರು ನಿಂತಿವೆ. ಮೇಲಿನ ಕೆರೆಗಳಿಂದ ಬರುವ ನೀರು ನಿಂತಿರುವ ಕಾರಣ ಕೆರೆಯಿಂದ ಕೆರೆಗೆ ಹರಿಯುವ ನೀರು ನಿಂತಿದೆ. ಕೆರೆಗಳಲ್ಲಿ ಇರುವ ನೀರು ದಿನೇ ದಿನೇ ಕಡಿಮೆಯಾಗುತ್ತಿದೆ.

ಕೆ.ಸಿ.ವ್ಯಾಲಿ ನೀರು ಕೆರೆಗಳಿಗೆ ತುಂಬಿದ ನಂತರ ಜಿಲ್ಲೆಯಲ್ಲಿ ಅಂತರ್ಜಲ ಸ್ವಲ್ಪ ಮಟ್ಟಿಗೆ ವೃದ್ಧಿಯಾಯಿತು. ನೀರು ಕೊಳವೆ ಬಾವಿಗಳಲ್ಲಿ ಸಿಗುತ್ತದೆಂದು ರೈತರು ತರಕಾರಿ ಬೆಳೆಗಳನ್ನು ಬೆಳೆಯಲು ಮುಂದಾಗದ್ದಾರೆ. ಪ್ರತಿವರ್ಷ ಜೂನ್ ಜುಲೈ ತಿಂಗಳು ಟೊಮೆಟೋ ಸುಗ್ಗಿಯಾದ ಕಾರಣ ಫ್ರೆಬ್ರವರಿ ಮಾರ್ಚ್ ತಿಂಗಳಲ್ಲಿ ಟೊಮೆಟೋ ಸಸಿಗಳನ್ನು ನಾಟಿ ಮಾಡುತ್ತಾರೆ. ಇದಕ್ಕಾಗಿ ರೈತರು ಲಕ್ಷಾಂತರ ರೂ.ಗಳ ಬಂಡವಾಳವನ್ನು ಹಾಕಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಸಾವಿರಾರು ಟೊಮೆಟೋ ಸಸಿಗಳನ್ನು ನಾಟಿ ಮಾಡಿದ್ದಾರೆ. ಇನ್ನೂ ನಾಟಿ ಮಾಡುವವರು ಇದ್ದಾರೆ. ಕೆ.ಸಿ.ವ್ಯಾಲಿ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿರುವ ಕಾರಣ ಕೆರೆಗಳು ಖಾಲಿಯಾಗಿದ್ದು, ಅಂರ್ತಜಹಲ ಸುರಿಯುವ ಭೀತಿ ಎದುರಾಗಿತ್ತು. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದರೆ ಟೊಮೆಟೋ ಫಸಲನ್ನು ಕಾಪಾಡುವುದು ಹೇಗೆ ಎಂಬುದು ರೈತರಲ್ಲಿ ಆತಂಕ ಶುರುವಾಗಿದೆ.

ಕೋಟ್

ಮುದುವಾಡಿ ಕೆರೆಯಲ್ಲಿ ಈಗಾಗಲೇ ನೀರಿನ ಪ್ರಮಾಣ ಕಡಿಮೆಯಾಗತೊಡಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಇದೆ ಎಂದು ಟಿಮೆಟೋ ಸಸಿಗಳನ್ನು ನಾಟಿ ಮಾಡಲಾಗಿದೆ. ಅಂತರ್ಜಲ ಕುಸಿದರೆ ಕೊಳವೆ ಬಾವಿಗಳು ಬತ್ತಿಹೋಗುತ್ತವೆ. ಲಕ್ಷಾöಂತರ ರೂ.ಗಳ ಬಂಡವಾಳ ಹಾಕಿ ಬೆಳೆಯಲಾಗಿರುವ ಫಸಲು ಕೈಗೊಡುವ ಭೀತಿ ಎದುರಾಗಿದೆ. ಜನಪ್ರತಿನಿಧಿಕಗಳು ಈಗಲಾದರೂ ಎಚ್ಚೆತ್ತುಕೊಂಡು ಕೆ.ಸಿ.ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ಎಷ್ಟು ನೀರು ಬರಬೇಕು ಎಂಬುದನ್ನು ಆ ನೀರನ್ನು ಕೆರೆಗಳಿಗೆ ಹರಿಸುವಂತೆ ಮಾಡಬೇಕಾಗಿದೆ.

-ಸಂಪತ್‌ಕುಮಾರ್, ಕಿತ್ತಂಡೂರು.

ಕೋಟ್

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರ ಪಟ್ಟಣದ ಕೆರೆಯ ಕೆ.ಸಿ.ವ್ಯಾಲಿ ಯೋಜನೆಯಿಂದ ಕೋಲಾರ ತಾಲ್ಲೂಕಿನ ಹಾಗೂ ಬಂಗಾರಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳ ಕೆರೆಗಳಿಗೆ ನೀರು ಹರಿಯುವುದನ್ನು ನಿಲ್ಲಿಸಲಾಗಿದೆ. ಇದರಿಂದ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯುವ ಹಂತಕ್ಕೆ ಬಂದಿದ್ದು, ಜನ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ. ಕೂಡಲೇ ಈ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಬೇಕು.

-ಹೆಚ್.ವೈ.ಅಶ್ವಥಪ್ಪ, ಹಂಚಾಳ.

ಚಿತ್ರ ೨೪ ಕೆ.ಎಲ್.ಆರ್. ೦೧ : ಹೆಚ್.ವೈ.ಅಶ್ವಥಪ್ಪ, ಹಂಚಾಳ.

ಚಿತ್ರ ೨೪ ಕೆ.ಎಲ್.ಆರ್. ೦೧ : ಸಂಪತ್‌ಕುಮಾರ್, ಕಿತ್ತಂಡೂರು

ಚಿತ್ರ ೨೪ ಕೆ.ಎಲ್.ಆರ್. ೦೧ : ಸಂಸ್ಕರಿಸಿದ ಕೆ.ಸಿ.ವ್ಯಾಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net