ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಲ್ಲಿ ಕೆರೆಯಿಂದ ಕೆರೆಗೆ ಹರಿಯುತ್ತಿರುವ ಕೆ.ಸಿ.ವ್ಯಾಲಿ ನೀರಿನ ಕಾಲುವೆಗಳಲ್ಲಿ ಹುಲ್ಲು ಮತ್ತು ಗಿಡಗಂಟೆಗಳು ಬೆಳೆದು ತ್ಯಾಜ್ಯ ತುಂಬಿರುವುದರಿAದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ರೈತರ ತೋಟಗಳಿಗೆ ನೀರು ನುಗ್ಗುತ್ತಿದ್ದು, ಇದರಿಂದ ಬೆಳಗಳು ಹಾಳಾಗುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಒಂದನೇ ಹಂತದಲ್ಲಿ ಸುಮಾರು ೧೩೬ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಕೆಲವೊಂದು ಕೆರೆಗಳಿಗೆ ಕಾಲುವೆ ಮೂಲಕವೇ ನೀರು ಹರಿಯುತ್ತಿರುವುದರಿಂದ ಕಾಲುವೆಯ ಅಕ್ಕಪಕ್ಕದಲ್ಲಿ ಹುಲ್ಲು ಮತ್ತು ಗಿಡಗಂಟೆಗಳು ಎತ್ತರಕ್ಕೆ ಬೆಳೆದಿರುವುದರಿಂದ ಅಲ್ಲಲ್ಲಿ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯಲು ಅವಕಾಶ ಇಲ್ಲದಂತೆ ಆಗಿದೆ.
ಈಗ ಮಳೆಗಾಲ ಆಗಿರುವುದರಿಂದ ಮಳೆ ನೀರು ಕಾಲುವೆಗೆ ಸೇರಿಕೊಂಡು ಕಾಲುವೆಗಳ ತುಂಬಾ ಹರಿಯತೊಡಗಿದ್ದು, ಕಲುವೆಯಲ್ಲಿ ತ್ಯಾಜ್ಯ ಮತ್ತು ಗಿಡಗಂಟೆಗಳು ಇರುವುದರಿಂದ ನೀರಿನ ಹರಿವಿನ ಪ್ರಮಾಣ ಹೆಚ್ಚಾದಂತೆ ರೈತರ ಹೊಲ ಗದ್ದೆಗಳಿಗೆ ಮತ್ತು ತೋಟಗಳಿಗೆ ನುಗ್ಗುತ್ತಿವೆ. ನೀರು ಕಾಲುವೆಗಳನ್ನು ಸ್ವಚ್ಛಗೊಳಿಸಬೇಕೆಂದು ರೈತರು ಒತ್ತಾಯಪಡಿಸಿದ್ದಾರೆ.
ಕೋಲಾರ ತಾಲ್ಲೂಕಿನ ಕೆಂದಟ್ಟಿಯಿAದ ಚುಂಚದೇನಹಳ್ಳಿ, ಚೆಲುವನಹಳ್ಳಿ ಕೆರೆಗಳಿಗೆ ಹೋಗುವ ಕೆ.ಸಿ.ವ್ಯಾಲಿ ನೀರಿನ ಕಾಲುವೆಗಳಲ್ಲಿ ಗಿಡಗಂಟೆಗಳು ಬೆಳೆದು ತ್ಯಾಜ್ಯ ತುಂಬಿದ್ದು, ಈಗ ಮಳೆಗಾಲ ಆಗಿರುವ ಕಾರಣ ಕೆ.ಸಿ.ವ್ಯಾಲಿ ನೀರಿನ ಜೊತೆಗೆ ಮಳೆ ನೀರು ಹರಿಯುತ್ತಿದ್ದು, ಕಾಲುವೆ ಪ್ರಮಾಣ ಕಡಿಮೆಯಾಗಿದ್ದು, ನೀರು ಹೊಲಗಳ ಮತ್ತು ತೋಟಗಳಿಗೆ ನುಗ್ಗುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೋಟ್
ಕೆ.ಸಿ.ವ್ಯಾಲಿ ನೀರು ಕೆರೆಗಳಿಗೆ ಬರುತ್ತಿರುವ ಕಾಲುವೆಗಳಲ್ಲಿ ಹುಲ್ಲು ಮತ್ತು ಗಿಡಗಂಟೆಗಳು ಬೆಳೆದಿರುವುದರಿಂದ ಅಲ್ಲಲ್ಲಿ ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದ್ದೆ. ಈ ಮಧ್ಯೆ ಮಳೆ ಬರುತ್ತಿದ್ದು, ಮಳೆ ನೀರು ಕಾಲುವೆಗಳಲ್ಲಿ ಸೇರಿಕೊಂಡು ಹರಿವಿನ ಪ್ರಮಾಣ ಹೆಚ್ಚಾಗಿ, ತೋಟಗಳಿಗೆ ಮತ್ತು ಹೊಲಗಳಿಗೆ ನುಗ್ಗಿತ್ತಿವೆ. ಮಳೆ ಕೊರತೆ, ವೈರಸ್ ಕಾಟ ಇತ್ಯಾದಿಗಳಿಂದ ರೈತ ಇಟ್ಟ ಬೆಳೆಗೆ ಬೆಲೆ ಬಾರದೆ ನಷ್ಟ ಅನುಭವಿಸುವ ಸಂದರ್ಭದಲ್ಲಿ ನೀರು ನುಗ್ಗಿ ಇರುವ ಬೆಳೆಗಳು ನಾಶವಾಗುತ್ತಿವೆ. ಸಂಬAಧಪಟ್ಟ ಇಲಾಖೆ ಕೂಡಲೇ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು.
-ಹೆಚ್.ಸೊಣ್ಣಪ್ಪ, ರೈತ, ಅರಾಭಿಕೊತ್ತನೂರು.
ಕೆ.ಸಿ.ವ್ಯಾಲಿ ನೀರು ಕರೆಯಿಂದ ಕೆರೆಗೆ ಕಾಲುವೆಗಳ ಮೂಲಕವೇ ಹರಿಯುತ್ತಿವೆ. ಕಾಲುವೆ ಅಕ್ಕಪಕ್ಕದಲ್ಲಿ ತೇವಾಂಶ ಇರುವುದರಿಂದ ಹುಲ್ಲು ಮತ್ತು ಗಿಡಗಂಟೆಗಳು ಬೆಳೆಯುತ್ತವೆ. ಆಗಾಗ ಸ್ವಚ್ಛಗೊಳಿಸಬೇಕು. ಸ್ವಚ್ಛತೆಗೆ ನಮ್ಮಲ್ಲಿ ಅನುದಾನದ ಕೊರತೆಯಿದೆ. ಸಣ್ಣ ನೀರಾವರಿ ಇಲಾಖೆಯು ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಚುಂಚದೇನಹಳ್ಳಿ ಕೆರೆಯಿಂದ ಚೆಲುವನಹಳ್ಳಿ ಕೆರೆಗೆ ಹೋಗುವ ಕಾಲುವೆಯನ್ನು ಸ್ವಚ್ಛಗೊಳಿಸಲು ನಮ್ಮ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗುವುದು.
-ಕೃಷ್ಣ, ಕೆ.ಸಿ.ವ್ಯಾಲಿ ಇಂಜಿನೀಯರ್
ಚಿತ್ರ ೨೦ ಕೆ.ಎಲ್.ಆರ್. ೦೪ : ಚುಂಚದೇನಹಳ್ಳಿ ಕೆರೆಯಿಂದ ಚೆಲುವನಹಳ್ಳಿ ಕೆರೆಗೆ ಬರುವ ಕೆ.ಸಿ.ವ್ಯಾಲಿ ನೀರಿನ ಕಾಲುವೆಯಲ್ಲಿ ಗಿಡಗಂಟೆಗಳು ಬೆಳೆದು ನೀರು ಹರಿಯಲು ಕಾಲುವೆ ಕಿರಿದಾಗಿರುವುದು.
ಚಿತ್ರ ೨೦ ಕೆ.ಎಲ್.ಆರ್. ೦೪ಎ : ಹೆಚ್.ಸೊಣ್ಣಪ್ಪ, ರೈತರ ಅರಾಭಿಕೊತ್ತನೂರು ರವರ ಭಾವಚಿತ್ರ