ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ, ಮಾಲೂರು, ಬಂಗಾರಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳ ಕೆರೆಗಳಿಗೆ ಕೆ.ಸಿ.ವ್ಯಾಲಿನ ೧ನೇ ಫೇಸಿನಲ್ಲಿ ಬರಬೇಕಾಗಿದ್ದ ನೀರು ಕೆಲವು ದಿನಗಳಿಂದ ನಿಂತಿದ್ದು, ಬೇಸಿಗೆ ಸಮೀಪಿಸುತ್ತಿದೆ. ಈಗಾಗಲೇ ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಕೆ.ಸಿ.ವ್ಯಾಲಿ ನೀರು ಮತ್ತೆ ಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಪಡಿಸಿದ್ದಾರೆ.
ಅಂತರ್ಜಲ ವೃದ್ಧಿಯಾಗಲು ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ೧ನೇ ಫೇಸ್ ಯೋಜನೆ ಜಾರಿಯಾದ ನಂತರ ಸುಮಾರು ೧೩೯ ಕೆರೆಗಳಿಗೆ ನೀರನ್ನು ಹರಿಸಲಾಯಿತು. ೨ನೇ ಫೇಸ್ ಯೋಜನೆ ಕಾಮಗಾರಿ ಶೇ.೯೦ ರಷ್ಟು ಮುಗಿದಿದ್ದು, ೨೭೯ ಕೆರೆಗಳಿಗೆ ಈ ಯೋಜನೆಯಿಂದ ನೀರು ಹರಿಯಲಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದ ಮೂಲಕ ೩ ತಾಲ್ಲೂಕುಗಳಿಗೆ ಸೇರಿದ ಚಿನ್ನಾಪುರ, ನರ‍್ನಹಳ್ಳಿ, ದಂಡಿಗಾನಹಳ್ಳಿ, ಮುದುವತ್ತಿ, ಚೋಳಘಟ್ಟ, ಅಂಚಾಳ, ಮಾದಮಂಗಲ, ಸೂಲಿಕುಂಟೆ, ಸಿದ್ಧನಹಳ್ಳಿ, ಕುಪ್ಪನಹಳ್ಳಿ, ಬ್ಯಾಡಬಲ್ಲಿ ಕೆರೆಗಳಿಗೆ ೧ನೇ ಫೇಸ್ ಮೂಲಕ ಕೆ.ಸಿ.ವ್ಯಾಲಿ ನೀರನ್ನು ಹರಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಈ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ನಿಲುಗಡೆಯಾಗಿರುವುದರಿಂದ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು, ಬೇಸಿಗೆ ಸಮೀಪಿಸುತ್ತಿದೆ. ಅಂತರ್ಜಲ ಕುಸಿಯುತ್ತಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗುತ್ತಿದೆ. ಜನಗಳಿಗೆ ಕುಡಿಯಲು ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಎದುರಾಗುವ ಸಾಧ್ಯತೆ ಇರುವುದರಿಂದ ಸದರಿ ಕೆರೆಗಳಿಗೆ ನೀರು ಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಪಡಿಸುತ್ತಿದ್ದಾರೆ.
ಬಾಕ್ಸ್
ಕೆ.ಸಿ.ವ್ಯಾಲಿ ೧ನೇ ಫೇಸ್ ಪ್ರಾರಂಭದಲ್ಲಿ ೨೩೦ ಎಂ.ಎಲ್.ಡಿ.ನೀರು ಬರುತ್ತಿದ್ದ ಕಾರಣ ಕೆರೆಗಳಿಗೆ ತಡವಾಗಿ ನೀರು ಹರಿತ್ತಿತ್ತು. ಈಗ ೨೬೫ ರಿಂದ ೨೭೦ ಎಂ.ಎಲ್.ಡಿ.ನೀರು ಬರುತ್ತಿದೆ. ಡಿಸೆಂಬರ್ ಅಂತ್ಯದೊಳಗಾಗಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಕೆರೆಗಳಿಗೆ ನೀರು ಹರಿಯಲಿದೆ. ಶಿವಾರಪಟ್ಟಣ ಮೂಲಕ ಮಾಲೂರು, ಕೋಲಾರ, ಬಂಗಾರಪೇಟೆ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಶಿವಾರಪಟ್ಟ ಕೆರೆಗೆ ನೀರು ಬಿಡದೆ ಪೈಪ್ ಮೂಲಕ ಹರಿಸಲಾಗುತ್ತಿತ್ತು. ಶಿವಾರಪಟ್ಟಣ ಗ್ರಾಮಸ್ಥರ ಒತ್ತಾಯದ ಮೇರೆಗೆ ಶಿವಾರಪಟ್ಟಣ ಕೆರೆಗೆ ನೀರನ್ನು ಹರಿಸುತ್ತಿರುವುದರಿಂದ ಮುಂದಿನ ಸಾಲಿನ ಕೆರೆಗಳಿಗೆ ನೀರು ನಿಲ್ಲಿಸಲಾಗಿದೆ. ಶಿವಾರಪಟ್ಟಣ ಕೆರೆ ತುಂಬಿದ ನಂತರ ಸದರಿ ಕೆರೆಗಳಿಗೆ ನೀರು ಹರಿಯುತ್ತವೆ ಎಂದು ಕೆ.ಸಿ.ವ್ಯಾಲಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್
ಕಳೆದ ಒಂದು ವರ್ಷದಿಂದ ಕೆ.ಸಿ.ವ್ಯಾಲಿ ನೀರು ಶಿವಾರಪಟ್ಟಣ ಮೂಲಕ ಬರುವ ಮೂರು ತಾಲ್ಲೂಕಿನ ಸುಮಾರು ೧೨ ಗ್ರಾಮಗಳ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿದೆ. ನೀರಿನ ಅಭಾವ ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತಿದೆ. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಅವರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಿಂತಿರುವ ಕೆ.ಸಿ.ವ್ಯಾಲಿ ನೀರು ಮತ್ತೆ ಕರೆಗಳಿಗೆ ಹರಿಯಬೇಕಾಗಿದೆ.
-ಅಶ್ವಥಪ್ಪ, ಹಂಚಾಳ.
ಕೋಟ್
ಶಿವಾರಪಟ್ಟಣ ಮೂಲಕ ಚಿನ್ನಾಪುರ ನೆರ್ನಹಳ್ಳಿ, ದಂಡಿಗಾನಹಳ್ಳಿ ಮೂಲಕ ಹರಿಯುತ್ತಿದ್ದ ಸುಮಾರು ೧೧ಕ್ಕೂ ಹೆಚ್ಚು ಗ್ರಾಮಗಳ ಕರೆಗಳಿಗೆ ನೀರು ೧೫ ದಿನಗಳಿಂದ ಮಾತ್ರ ನಿಂತಿವೆ. ಶಾಸಕ ನಂಜೇಗೌಡರು ಶಿವಾರಪಟ್ಟಣದ ಕೆರೆ ತುಂಬಿದ ನಂತರ ಸದರಿ ಕೆರೆಗಳಿಗೆ ನೀರು ಹರಿಸಲು ತಿಳಿಸಿದ್ದಾರೆ. ಶಿವಾರಪಟ್ಟಣ ಕೆರೆ ಶೇ.೭೦ ರಷ್ಟು ತುಂಬಿದೆ. ಈ ಕೆರೆಯಿಂದ ಸದರಿ ಕೆರೆಗಳಿಗೆ ನೀರು ಹರಿಸಲಾಗುವುದು. ನವೆಂಬರ್ ಅಂತ್ಯದೊಳಗಾಗಿ ಎಲ್ಲಾ ಕೆರೆಗಳಿಗೂ ನೀರು ಹರಿಯುತ್ತವೆ. ಫೇಸ್-೨ ಕಾಮಗಾರಿ ಡಿಸೆಂಬರ್ ಒಳಗಾಗಿ ಮುಗಿಯುತ್ತದೆ. ಇದರಿಂದ ೨೭೬ ಕೆರೆಗಳಿಗೆ ನೀರು ಹರಿಸಲಾಗುವುದು. ಮುದುವಾಡಿ ಬಳಿ ಇರುವ ಪಂಪ್‌ಹೌಸ್‌ಗೆ ವಿದ್ಯುಚ್ಛಕ್ತಿ ಅಳವಡಿಸದ ನಂತರ ಶ್ರೀನಿವಾಸಪುರ ತಾಲ್ಲೂಕಿನ ೭೦ ಕೆರೆಗಳಿಗೆ ನೀರು ಹರಿಸಲಾಗುವುದು. ಮುದುವಾಡಿ ಕೆರೆಯಿಂದ ಚಿಲ್ಲಪ್ಪನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕೆರೆ ತುಂಬಲಿದೆ. ನಂತರ ಮುಳಬಾಗಿಲು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು. ಕೆರೆಯಿಂದ ಕೆರೆಗೆ ಕಾಲುವೆ ಮೂಲಕ ನೀರು ಹೋಗುತ್ತಿರುವುದರಿಂದ ಕೆರೆ ತುಂಬುವುದು ತಡವಾಗುತ್ತಿದೆ. ಡಿಸೆಂಬರ್ ನಂತರ ಕೆ.ಸಿ.ವ್ಯಾಲಿ ಯೋಜನೆ ಫೇಸ್-೧ ಮತ್ತು ಫೇಸ್-೨ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುತ್ತದೆ.
-ಕೃಷ್ಣ, ಕೆ.ಸಿ.ವ್ಯಾಲಿ ಇಂಜಿನೀಯರ್.
ಚಿತ್ರ ೧೩ ಕೆ.ಎಲ್.ಆರ್. ೦೧ : ಬೆಂಗಳೂರಿನಿAದ ಬರುತ್ತಿರುವ ಕೋಲಾರ ತಾಲ್ಲೂಕು ಲಕ್ಷಿö್ಮÃಸಾಗರದ ಬಳಿ ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವುದು.
ಚಿತ್ರ ೧೩ ಕೆ.ಎಲ್.ಆರ್. ೦೧ಎ : ೨ನೇ ಫೇಸ್ ಕಾಮಗಾರಿಯ ಪೈಪ್‌ಲೈನ್ ಕಾಮಗಾರಿ ಜರೂರಾಗಿ ನಡೆಯುತ್ತಿರುವುದು.