ಕೆ.ಸಿ.ರೆಡ್ಡಿ,ಸರೋಜಮ್ಮ ಫೌಂಡೇಷನ್‌ನಿAದ ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಕಿಟ್ಪ್ರಾಯೋಗಗಳ ಮೂಲಕ ಕಲಿಕೆ ಹೆಚ್ಚು ಪರಿಣಾಮಕಾರಿ/ವಸಂತ ಕವಿತಾ ಅಭಿಮತ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಮಕ್ಕಳಿಗೆ ಪ್ರಯೋಗಗಳ ಮೂಲಕ ಕಲಿಸುವುದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿ ಎಂಬ ಕಾರಣದಿಂದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೂ ವಿಜ್ಞಾನ ಕಿಟ್ ವಿತರಿಸುತ್ತಿರುವುದಾಗಿ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಸರೋಜಮ್ಮ ಫೌಂಡೇಷನ್‌ನ ವಸಂತ ಕವಿತಾ ತಿಳಿಸಿದರು.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕೆಸಿ ರೆಡ್ಡಿ ಸರೋಜಮ್ಮ ಫೌಂಡೇಷನ್ ಹಾಗೂ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್, ಟೆಕ್ನಾಲಜಿ ಕಮ್ಯೂನಿಕೇಷನ್ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ವಿಜ್ಞಾನ, ಗಣಿತ ಕಲಿಕೆ ಕಬ್ಬಿಣದ ಕಡಲೆ ಎಂಬ ಆರೋಪವಿದೆ ಆದರೆ ಇದನ್ನು ಸುಳ್ಳಾಗಿಸಲು ಮಕ್ಕಳಿಗೆ ಪ್ರಯೋಗಗಳ ಮೂಲಕ ಬೋಧನೆ ಮಾಡಿದರೆ ಅದು ಸುಲಭವಾಗಲಿದೆ ಮತ್ತು ಮಕ್ಕಳ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂದರು.

ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಡೆದು ಸುಸಜ್ಜಿತ ಸೌಲಭ್ಯಗಳೊಂದಿಗೆ ಶಿಕ್ಷಣ ನೀಡಲಾಗುತ್ತಿದೆ ಆದರೆ ಸರ್ಕಾರಿ ಶಾಲಾ ಮಕ್ಕಳು ಸೌಲಭ್ಯಗಳ ಕೊರತೆ ನಡುವೆ ತಮ್ಮ ಕಲಿಕೆ ಮುಂದುವರೆಸಬೇಕಾಗಿದೆ, ಇದನ್ನು ತಪ್ಪಿಸಲು ದಾನಿಗಳು ಮುಂದೆ ಬರಬೇಕು, ಸರ್ಕಾರಿ ಶಾಲೆಗಳ ಅಭಿವೃದ್ದಿಯ ಮೂಲಕ ದಾಖಲಾತಿ ಹೆಚ್ಚಿಸಿ ಸಮಾನ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ತಾಲ್ಲೂಕು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಸ್.ಪ್ರವೀಣ್ ಮಾತನಾಡಿ, ಕೆಸಿ ರೆಡ್ಡಿ, ಸರೋಜಮ್ಮ ಫೌಂಡೇಷನ್ ಸರ್ಕಾರಿ ಶಾಲೆಗಳ ಮಕ್ಕಳ ಕುರಿತು ಹೊಂದಿರುವ ಕಾಳಜಿ ಶ್ಲಾಘನೀಯವಾಗಿದೆ, ಸರ್ಕಾರಿ ಶಾಲಾ ಮಕ್ಕಳಿಗೂ ನೆರವಾಗುವ ಹೃದಯಂತಿಕೆ ಎಲ್ಲರಿಗೂ ಬರುವುದಿಲ್ಲ ವಸಂತ ಕವಿತಾ ಅವರ ಶೈಕ್ಷಣಿಕ ಕಾಳಜಿ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ನೀಡಿರುವ ವಿಜ್ಞಾನದ ಪ್ರಾಯೋಗಿಕ ಪರಿಕರಗಳನ್ನು ಬಳಸುವ ವಿಧಾನ ಮತ್ತು ನಿರ್ವಹಣೆ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೋವಿಂದ್, ಇಸಿಒ ಎಸ್.ರಾಘವೇಂದ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಹಾಗೂ ಕೋಲಾರ ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.

ಚಿತ್ರ ೦೭ ಕೆ.ಎಲ್.ಆರ್. ೦೩ : ಕೋಲಾರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕೆಸಿ ರೆಡ್ಡಿ ಸರೋಜಮ್ಮ ಫೌಂಡೇಷನ್ ಹಾಗೂ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್, ಟೆಕ್ನಾಲಜಿ ಕಮ್ಯೂನಿಕೇಷನ್ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಕೆ.ಸಿ.ರೆಡ್ಡಿ, ಸರೋಜಮ್ಮ ಫೌಂಡೇಷನ್‌ನ ವಸಂತ ಕವಿತಾ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net