

ಕೆ.ಜಿ.ಕೊಪ್ಪಲಿನ ಕನ್ನಡ ಗೆಳಯರ ಬಳಗ ಕಚೇರಿಯ ಆವರಣದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿದ ಇಂಜಿನಿಯರ್ ಕಾರ್ತೀಕ್ ನಾಯಕ್ ಮಾತನಾಡಿ, 75 ವರ್ಷಗಳ ಹಿಂದೆ ಇದೇ ದಿನ ಭಾರತದ ಸಂವಿಧಾನವನ್ನು ಅಂಗೀಕರಿಸಿದ್ದೇವೆ. ಇದು ಪ್ರಜಾಪ್ರಭುತ್ವದದ ಮೌಲ್ಯವನ್ನು ಎತ್ತಿಹಿಡಿಯುತ್ತದೆ ಎಂದರು. ಬಳಗದ ಅಧ್ಯಕ್ಷ ಭೈರಪ್ಪ, ಗೌರವ ಕಾರ್ಯದರ್ಶಿ ನಗರತಳ್ಳಿ ನಿಂಗರಾಜು, ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಸದಸ್ಯ ಮಹದೇವು, ಉಮೇಶ್, ದೀಪ್ತಿ, ಹರ್ಷಿತಾ, ಹರಿಣಿ, ಮನ್ವಿತ ಉಪಸ್ಥಿತರಿದ್ದರು.