ಕೆ.ಎಸ್.ಬಿ.ಸಿ.ಎಲ್. ಲಿಕ್ಕರ್ ಡಿಪೋ, ಕೂರ್ಗಳ್ಳಿಯಲ್ಲಿ ಮಾರಾಟವಾಗದೇ ಉಳಿದಿರುವ ಬಿಯರ್ ದಾಸ್ತಾನುಗಳ ನಾಶ

Crime Logo
Published on

ಮೈಸೂರು ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಮೈಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಹೆಚ್.ಕೆ. ರಮೇಶ್ ನೇತೃತ್ವದಲ್ಲಿ, ಕೆ.ಎಸ್.ಬಿ.ಸಿ.ಎಲ್. ಮೈಸೂರು-1 ಡಿಪೋ ಕೂರ್ಗಳ್ಳಿಯ ಅಬಕಾರಿ ಉಪ ಅಧೀಕ್ಷಕರಾದ ವಿಕ್ರಮ್ ಎಲ್.ಬಿ., ಮತ್ತು ಅಬಕಾರಿ ನಿರೀಕ್ಷಕರು ಹಾಗೂ ಡಿಪೋನ ವ್ಯವಸ್ಥಾಪಕರು, ಮತ್ತು ಇಲಾಖಾ ಸಿಬ್ಬಂದಿಗಳೊoದಿಗೆ ಮಾರಾಟವಾಗದೇ ಉಳಿದಿದ್ದ ಒಟ್ಟು 3185.070 ಲೀಟರ್ ಬಿಯರ್‌ನ್ನು ಹಾಗೂ ಕೆ.ಎಸ್.ಬಿ.ಸಿ.ಎಲ್. ಮೈಸೂರು-2 ಡಿಪೋ ಅಬಕಾರಿ ನಿರೀಕ್ಷಕರು ಹಾಗೂ ಡಿಪೋನ ವ್ಯವಸ್ಥಾಪಕರು, ಮತ್ತು ಇಲಾಖಾ ಸಿಬ್ಬಂದಿಗಳೊoದಿಗೆ ಮಾರಾಟವಾಗದೇ ಉಳಿದಿದ್ದ ಒಟ್ಟು 2103.040 ಲೀಟರ್ ಬಿಯರ್‌ನ್ನು ಒಟ್ಟು 5288.110 ಲೀಟರ್ ಬಿಯರ್‌ನ್ನು ನಾಶಪಡಿಸಲಾಯಿತು ಎಂದು ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net