ಕೆ.ಎಸ್.ಅಶ್ವತ್ಥ್ ಜನ್ಮ ಶತಾಬ್ದಿ ಕಾರ್ಯಕ್ರಮ

Shankar Ashwath 16 Jan 20
Published on

ಕನ್ನಡ ಚಿತ್ರರಂಗದ ಖ್ಯಾತ ನಟ ಕೆ.ಎಸ್.ಅಶ್ವತ್ಥ್ ಅವರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ಜು.15ರ ಸಂಜೆ 4.30ಕ್ಕೆ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಶಂಕರ್ ಅಶ್ವತ್ಥ್ ಅವರ ಸಾರಥ್ಯದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕ ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ್ ವಿ.ಬೈರಿ ತಿಳಿಸಿದರು.

ಅಶ್ವತ್ಥ್ ಅವರಿಗೆ ಇಷ್ಟವಾಗಿದ್ದ 32 ಹಾಡುಗಳನ್ನು ಹಾಡಲಾಗುತ್ತದೆ. ನಿರೂಪಣೆ ಶಂಕರ್ ಅಶ್ವತ್ಥ್ ಅವರದ್ದಾಗಿದೆ. ಈ ಹಿಂದೆ ಕಲಾಮಂದಿರದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಅಶ್ವತ್ಥ್ ಅವರ ಅಭಿಮಾನಿಗಳ ಬೇಡಿಕೆ ಮೇರೆಗೆ ಈಗ ಮತ್ತೊಮ್ಮೆ ಆಯೋಜಿಸಿದ್ದು, ಸಂಪೂರ್ಣ ಉಚಿತ ಕಾರ್ಯಕ್ರಮವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಂಕರ್ ಅಶ್ವತ್ಥ್, ಕೆ.ರಘುರಾಂ ವಾಜಪೇಯಿ, ರಾಜಶೇಖರ ಕದಂಬ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net