ಕೆ.ಆರ್.ನಗರ ಸ್ವಚ್ಛತೆಗೆ ಟ್ರ್ಯಾಕ್ಟರ್ ಖರೀದಿ

30 KRN-1
Published on

ಕೆ.ಆರ್.ನಗರ: ಪುರಸಭೆ ವತಿಯಿಂದ ಘನ ತ್ಯಾಜ್ಯ ವಸ್ತು ನಿರ್ವಹಣೆ ಮಾಡಲು ಹೊಸದಾಗಿ ಟ್ರಾೃಕ್ಟರ್ ಖರೀದಿಸಲಾಗಿದ್ದು, ಪಟ್ಟಣದ ಜನತೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್ ಹೇಳಿದರು.


ಕಚೇರಿ ಆವರಣದಲ್ಲಿ ಮಾತನಾಡಿದ ಅವರು, ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪುರಸಭೆಯ ನಗರೋತ್ಥಾನ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಟ್ರಾೃಕ್ಟರ್ ಖರೀದಿಸಲಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿ, ಮಾಹಿತಿ ನೀಡಿದರು.


ನಗರದ ಜನತೆ ಸ್ವಚ್ಛತೆ ಕಾಪಾಡಲು ಬೆಳಗ್ಗೆ ಪುರಸಭೆ ವತಿಯಿಂದ ಬರುವ ವಾಹನಗಳಿಗೆ ಕಸ ಹಾಕಬೇಕು. ಯಾವುದೇ ಕಾರಣಕ್ಕೂ ಎಲ್ಲೆಂದರಲ್ಲಿ ಕಸ ಸುರಿಯಬಾರದು. ಸರ್ಕಾರದ ನಿಯಮಾನುಸಾರ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಕಸ ಸುರಿದು ನೈರ್ಮಲ್ಯ ಹಾಳು ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರಿಗೆ ಪುರಸಭೆಯಿಂದ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.


ಪಟ್ಟಣ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ.ಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಶಾಸಕ ಸಾ.ರಾ.ಮಹೇಶ್ ಅವರ ಮೂಲಕ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪಟ್ಟಣದ ಜನತೆ ಗುಣಮಟ್ಟ ಪರಿಶೀಲಿಸಿಕೊಳ್ಳಬೇಕು. ಕಳಪೆ ಎಂದು ಕಂಡುಬಂದಲ್ಲಿ ಪುರಸಭೆ ಅಥವಾ ಶಾಸಕರಿಗೆ ದೂರು ನೀಡಬೇಕು ಎಂದು ಮನವಿ ಮಾಡಿದರು.

ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ನಟರಾಜು, ಮುಖ್ಯಾಧಿಕಾರಿ ಡಾ.ಜಯಣ್ಣ, ಅಭಿಯಂತರರಾದ ರಿತುಸಿಂಗ್, ಸೌಮ್ಯ, ಕಂದಾಯ ಅಧಿಕಾರಿ ರಮೇಶ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net