ಕೃಷ್ಣೇಗೌಡ, ರತ್ನಮ್ಮ ಅವಿರೋಧ ಆಯ್ಕೆ

29hgr3
ಬೆನಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣೇಗೌಡ ಹಾಗೂ ಉಪಾಧ್ಯಕ್ಷೆ ರತ್ನಮ್ಮ ಅವರನ್ನು ಸದಸ್ಯರು ಅಭಿನಂದಿಸಿದರು. ಬಿ.ಸಿ.ಭೀಮೇಗೌಡ, ಜಿ.ರಮೇಶ್, ಬಿ.ಪಿ.ಪ್ರಕಾಶ್, ಬಿ.ಎಸ್. ತೇಜಸ್ವಿನಿ, ಚನ್ನಬಸಮ್ಮ, ರತ್ನಮ್ಮ, ಸುಧಾ, ಬಿ.ಎಂ.ನಾಗರಾಜು, ಮುಖಂಡರಾದ ಭೀಮೇಶ್, ಪ್ರಸನ್ನ ಕುಮಾರ್ ಇದ್ದರು.
Published on

ಹಲಗೂರು: ಸಮೀಪದ ಬೆನಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣೇಗೌಡ ಮತ್ತು ಉಪಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆಯಾದರು.

ಸಂಘದ 10 ನಿರ್ದೇಶಕರ ಆಡಳಿತ ಮಂಡಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೃಷ್ಣೇಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ರಾಮಕೃಷ್ಣ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನಿರ್ದೇಶಕರಾದ ಬಿ.ಸಿ.ಭೀಮೇಗೌಡ, ಜಿ.ರಮೇಶ್, ಬಿ.ಪಿ.ಪ್ರಕಾಶ್, ಬಿ.ಎಸ್. ತೇಜಸ್ವಿನಿ, ಚನ್ನಬಸಮ್ಮ, ರತ್ನಮ್ಮ, ಸುಧಾ, ಬಿ.ಎಂ.ನಾಗರಾಜು, ಮುಖಂಡರಾದ ಭೀಮೇಶ್, ಪ್ರಸನ್ನ ಕುಮಾರ್, ಲಿಂಗರಾಜು, ಸಂತೋಷ್, ಕಾರ್ಯದರ್ಶಿ ಬಿ.ಎಂ.ಸೌಮ್ಯಾ, ಸಿಬ್ಬಂದಿ ಕೀರ್ತಿ, ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net