ಕೃಷ್ಣಾ ಬಗ್ಗೆ ನಮ್ಮಲ್ಲಿ ಜಾಗೃತಿ ಕೊರತೆ ಇದೆ

Published on

ಬಾಗಲಕೋಟೆ: ತಮಿಳುನಾಡಿಗೆ ಕಾವೇರಿ ನೀಡುವ ಬಿಡುವ ವಿಚಾರವಾಗಿ ಆ ಭಾಗದಲ್ಲಿ ಉಗ್ರ ಹೋರಾಟ ನಡೆಯುತ್ತಿದ್ದು, ಇದಕ್ಕೆ ಕಲಾವಿದರು, ಸ್ವಾಮೀಜಿಗಳು, ಸಾಹಿತಿಗಳು ಕೈಜೋಡಿಸಬೇಕು ಎನ್ನುವ ಮಾತು ಕೇಳಿ ಬರುತ್ತಿರುವ ಬಗ್ಗೆ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಾವೇರಿ ನದಿ ಎಲ್ಲಿ ಹುಟ್ಟುತ್ತೋ ಅಲ್ಲಿ ಪ್ರಥಮ ಪ್ರಾತಿನಿದ್ಯ ಕೊಡಬೇಕು. ನಾಡಿನ ಜನರು ತಮ್ಮ ನೀರು ತಮಗೆ ಬೇಕು ಎನ್ನುವುದು. ಇದರ ಜೊತೆಗೆ ನ್ಯಾಯಾಧಿಕರಣದ ಆದೇಶ ಬಂದಿರುವುದರಿಂದ ಈ ವಿಷಯದ ಬಗ್ಗೆ ಆ ಭಾಗದ ಜನರು ಹಾಗೂ ಜನಪ್ರತಿನಿಽಗಳು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ನನಗೆ ಇರುವ ಬೇಸರ ಎಂದರೆ ಉತ್ತರ ಕರ್ನಾಟಕದ ಕೃಷ್ಣಾ ಬಿ ಸ್ಕೀಮಗಳು ಸರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ ಎನ್ನುವ ಬಗ್ಗೆ ಎಂದರು.
ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೃಷ್ಣಾ ಬಿ ಸ್ಕೀಮ ಹಾಗೂ ಇನ್ನೀತರ ಯೋಜನೆಗಳಿಗೆ ಸರ್ಕಾರ ಆದ್ಯತೆ ಕೊಡಬೇಕು. ಕೃಷ್ಣಾ, ಭೀಮಾ ನದಿ ಜಲವನ್ನು ರೈತರಿಗೆ ಉಪಯೋಗ ಮಾಡಿಕೊಡಬೇಕು ಎನ್ನುವುದು ನನ್ನ ಆಗ್ರಹವಾಗಿದೆ. ಈ ವಿಚಾರದಲ್ಲಿ ಈ ಭಾಗದ ಜನರು ಹಾಗೂ ಜನಪ್ರತಿನಿಧಿಗಳಲ್ಲಿ ಜಾಗೃತಿ ಕೊರತೆ ಇದೆ ಎಂದು ಸ್ವಾಮೀಜಿ ಹೇಳಿದರು.

ಆಂಧ್ರಪ್ರದೇಶದಲ್ಲಿ ಕೃಷ್ಣಾ ನೀರು ಬಳಕೆ ಮಾಡಿಕೊಳ್ಳಲು ಈಗಾಗಲೇ ಮತ್ತೊಂದು ಮಗದೊಂದು ಯೋಜನೆಗಳನ್ನು ಮಾಡಿಕೊಂಡಿದ್ದಾರೆ. ನಾವು ಇಲ್ಲಿ ಯೋಜನೆ ಅನುಷ್ಠಾನ ಆಗದೇ ನಮ್ಮ ಜನರು ಬಡತನ ಅನುಭವಿಸಲು ಈ ಭಾಗದ ಜನಪ್ರತಿನಿಧಿಗಳು ತರುವಂತದ್ದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net