ಕೃಷಿ ಹೊಂಡದಲ್ಲಿ ಶವ ಪತ್ತೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಕಾಕಿನೆತ್ತ ಗ್ರಾಮದಲ್ಲಿನ ಕೃಷಿ ಹೊಂಡದಲ್ಲಿ ಗುರುವಾರ ಪತ್ತೆಯಾಗಿದೆ.
ತೊಟ್ಲಿ ಗ್ರಾಮದ ಟಿ.ಎಂ.ಮಂಜುನಾಥ್ (37) ಮೃತರು. ಜ 4ರಂದು ಆರೋಗ್ಯ ಸರಿ ಇಲ್ಲವೆಂದು ಆಸ್ಪತ್ರೆಗೆ ಹೋಗಿ ಮನೆಗೆ ವಾಪಸಾಗಿದ್ದರು. ಕಾಕಿನೆತ್ತದ ನಾರಾಯಣಸ್ವಾಮಿ ಅವರ ಜಮೀನಿನಲ್ಲಿ ಉಳುಮೆ ಮಾಡಿರುವ ಹಣ ಪಡೆದುಬರುವುದಾಗಿ ರಾತ್ರಿ 9.30ರ ವೇಳೆಗೆ ಮನೆಯಿಂದ ಹೋದವರು ವಾಪಸಾಗಿರಲಿಲ್ಲ. ಗುರುವಾರ ಬೆಳಗ್ಗೆ 11ರ ವೇಳೆಗೆ ಕಾಕಿನೆತ್ತ ಗ್ರಾಮದ ಅಮರಾವತಿ ಎಂಬವರ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ.
ಈ ಸಂಬಂಧ ಮೃತರ ಸಹೋದರ ಎಂ.ವೆಂಕಟೇಶ್ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವಿನ ಬಗ್ಗೆ ದೂರು ನೀಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಶವದ ಪಂಚನಾಮೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net