ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಚಾಲನೆ

HUN-JUNE-19-2(LEPRECY PROGRAMME)
Published on

ಹುಣಸೂರು: ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಸೋಮವಾರ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಚಾಲನೆ ನೀಡಿದರು.
ಮೈಕ್ರೋಬ್ಯಾಕ್ಟೀರಿಯಾ ಲೆಪ್ರೆ ಎಂಬ ರೋಗಾಣುವಿನಿಂದ ಕುಷ್ಠರೋಗ ಬರುತ್ತದೆ. ದೇಹದ ಮೇಲೆ ಯಾವುದೇ ಸ್ಪರ್ಶಜ್ಞಾನವಿಲ್ಲದ, ತಿಳಿಬಿಳಿ ಅಥವಾ ತಾಮ್ರವರ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಕೈಕಾಲು ಜೋಮು ಹಿಡಿಯುವುದು ರೋಗದ ಲಕ್ಷಣಗಳಾಗಿವೆ. ತಾಲೂಕಿನಲ್ಲಿ 196 ತಂಡಗಳು ಮನೆ ಮನೆಗೆ ತೆರಳಿ ಕುಷ್ಠರೋಗಿಗಳನ್ನು ಪತ್ತೆಹಚ್ಚುವ ಕಾರ್ಯ ನಡೆಸಲಿದ್ದು, ಜು.6ರವರೆಗೆ ಅಭಿಯಾನ ನಡೆಯಲಿದೆ. ತಂಡದಲ್ಲಿ ಒಬ್ಬ ಸ್ವಯಂಸೇವಕ ಮತ್ತು ಒಬ್ಬ ಆಶಾ ಕಾರ್ಯಕರ್ತೆ ಇರುತ್ತಾರೆ. 10 ತಂಡಗಳಿಗೆ ಒಬ್ಬರಂತೆ ಒಟ್ಟು 39 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ತಾಲೂಕಿನಲ್ಲಿ ಪ್ರಸ್ತುತ ಒಂದು ಕುಷ್ಠರೋಗ ಪ್ರಕರಣ ಮಾತ್ರ ದಾಖಲಾಗಿದ್ದು, ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್, ಎಲ್‌ವಿಎಚ್ ಪ್ರಮೀಳಾ, ಸರಿತಾ, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net