ಕುಮಾರ್ ಬಂಗಾರಪ್ಪಗೆ ಮತ್ತೆ ನಮೋ ವೇದಿಕೆ ಗುದ್ದು; ಆನವಟ್ಟಿಯಲ್ಲಿ ಬೃಹತ್ ಬೈಕ್ ರ‌್ಯಾಲಿ; ಟಿಕೆಟ್ ನೀಡದಂತೆ ವರಿಷ್ಠರಿಗೆ ಸಂದೇಶ

SOR WWWEEB
Published on

ನಮೋ ವೇದಿಕೆ, ಬೈಕ್ ರ‌್ಯಾಲಿ, ಕುಮಾರ್ ಬಂಗಾರಪ್ಪ, ಆಕ್ರೋಶ, ಸೊರಬ, ಆನವಟ್ಟಿ

ಸೊರಬ: ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾರೋಪ ಸಮಾರಂಭ ನಡೆಸುತ್ತಿದ್ದರೆ, ಇತ್ತ ಸೊರಬದಲ್ಲಿ ಬಿಜೆಪಿ ಶಾಸಕರ ವಿರುದ್ಧ ನಮೋ ವೇದಿಕೆ ಶನಿವಾರ ತಾಲೂಕಿನ ಆನವಟ್ಟಿಯಲ್ಲಿ ಬೃಹತ್ ಬೈಕ್ ರ‌್ಯಾಲಿ ನಡೆಸಿತು. ಈ ಮೂಲಕ ಶಾಸಕ ಕುಮಾರ ಬಂಗಾರಪ್ಪಗೆ ಟಿಕೆಟ್ ನೀಡದಂತೆ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿತು.

ತಾಲೂಕಿನ ಆನವಟ್ಟಿಯ ಕೋಟಿಪುರದ ಕೈಟಭೇಶ್ವರ ದೇವಾಲಯದ ಮುಂಭಾಗದಿಂದ ಆರಂಭಗೊಂಡ ನಮೋ ವೇದಿಕೆಯ ಬೈಕ್ ರ‌್ಯಾಲಿಗೆ ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಚಾಲನೆ ನೀಡಿದರು. ಸಾವಿರಾರು ಜನರು ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡು 2 ಕಿಮೀ ದೂರ ಜಾಥಾ ನಡೆಸಿ ನಂತರ ಸೊರಬ- ಆನವಟ್ಟಿ ಸರ್ಕಲ್‌ನಲ್ಲಿ ಸಮಾವೇಶಗೊಂಡಿತು.

ಅಪ್ಪ, ಅಮ್ಮಗೆ ಕೈಕೊಟ್ಟ ದುರಹಂಕಾರಿ. ಇಂತಹವರಿಂದ ತಾಲೂಕಿನಲ್ಲಿ ಕಾರ್ಯಕರ್ತರಾಗಲಿ, ಪಕ್ಷವಾಗಲಿ, ಸಂಘಟನೆಗೊಳ್ಳಲು ಸಾಧ್ಯವಿಲ್ಲವೆಂದು ಹಲವಾರು ಬಾರಿ ಪಕ್ಷದ ಗಮನ ತಂದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರ ಫಲವಾಗಿ ಕಾರ್ಯಕರ್ತರನ್ನು ಮತ್ತು ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ನಮೋ ವೇದಿಕೆ ಹುಟ್ಟಿಕೊಂಡಿತು. ಇಂದು ಆನವಟ್ಟಿಯಲ್ಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಬಾರದೆಂದು ಬೃಹತ್ ಸಂದೇಶವನ್ನು ಈ ರ‌್ಯಾಲಿ ಮೂಲಕ ನೀಡಲಾಗಿದೆ. ಇದನ್ನು ಮೀರಿಯೂ ಬಿಜೆಪಿ ಟಿಕೆಟ್ ನೀಡಿದರೆ ನಮೋ ವೇದಿಕೆಯಿಂದ ಅಭ್ಯರ್ಥಿ ಸ್ಪರ್ಧಿಸುವುದು ಖಚಿತ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net