ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ

28 TKE 1 (DAM)
ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಅಂಜುಮ್ ಪರ್ವೇಜ್ ಭೇಟಿ ನೀಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲಿಸಿದರು. ಎಚ್.ಎಸ್.ಕೀರ್ತನಾ, ಯಶ್‌ಪಾಲ್ ಕ್ಷೀರ್‌ಸಾಗರ್, ಹನುಮಂತಪ್ಪ, ಎಜಾಜ್ ಹುಸೇನ್ ಇತರರಿದ್ದರು.
Published on

ತರೀಕೆರೆ: ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಸೋಮವಾರ ಭೇಟಿ ನೀಡಿ ಹೊಸದುರ್ಗ, ತರೀಕೆರೆ, ಅಜ್ಜಂಪುರ, ಕಡೂರು ಹಾಗೂ ಚಿಕ್ಕಮಗಳೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಮಾತನಾಡಿ, ಕುಡಿಯುವ ನೀರಿನ ಮಹತ್ವಾಕಾಂಕ್ಷಿ ಯೋಜನೆಗೆ ಜಾಕ್‌ವೆಲ್ ನಿರ್ಮಿಸಲು ಜಾಗದ ಗೊಂದಲವಿದೆ. ಶೀಘ್ರದಲ್ಲೇ ಜಾಗ ಅಂತಿಮಗೊಳಿಸಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಡಾ.ಎಚ್.ಎಸ್.ಕೀರ್ತನಾ, ಚಿಕ್ಕಮಗಳೂರು ಹುಲಿ ಸಂರಕ್ಷಿತ ಯೋಜನೆ ಸಿಸಿಎ್ ಯಶಪಾಲ್ ಕ್ಷೀರ್ ಸಾಗರ್, ಶಿವಮೊಗ್ಗ ಸಿಸಿಎ್ ಹನುಮಂತಪ್ಪ, ಡಿಸಿಎ್ ಡಾ. ಆಶಿಶ್ ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಅಭಿಯಂತರ ಎಜಾಜ್ ಹುಸೇನ್, ಇಇ ಚಿದಾನಂದಪ್ಪ, ಎಇಇ ಜೈನುಲ್ಲಾಬ್ದಿನ್, ಎಇ ಎಚ್.ಡಿ.ರವಿಕುಮಾರ್ ಕರ್ನಾಟಕ ನೀರಾವರಿ ನಿಗಮದ ಇಇ ರವಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net