ಕುಡಿದು ಮಲಗಿದ್ದಾಗ ವಾಹನ ಹಾಯ್ದು ಸಾವು

Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಮಲಬಾದ ಗ್ರಾಮದ ಹೊರವಲಯದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಪಕ್ಕ ಕುಡಿದ ಅಮಲಿನಲ್ಲಿ ಮಲಗಿದ್ದ ಯುವಕನ ಮೇಲೆ ಅಪರಿಚಿತ ವಾಹನ ಹಾಯ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ವಜ್ರವಾಡ ಗ್ರಾಮದ ಭೀಮಣ್ಣ ಅಣ್ಣಪ್ಪ ಬಿರಾದಾರ (30) ಮತ.

ದ್ರಾಕ್ಷಿ ಕಟಾವು ಕಾರ್ಮಿಕನಾಗಿದ್ದ ಮಲ್ಲಪ್ಪ ಬೆಳ್ಳಂಕಿ ಗ್ರಾಮದಿಂದ ಕಟಾವು ಮುಗಿಸಿ ಬೈಕ್ ಮೇಲೆ ಮಲಾಬಾದ, ಅನಂತಪುರ ಮಾರ್ಗವಾಗಿ ಗ್ರಾಮಕ್ಕೆ ತೆರಳುವ ವೇಳೆ ನಶೆ ಹೆಚ್ಚಾಗಿದ್ದರಿಂದ ಬೈಕ್ ನಿಲ್ಲಿಸಿ ರಸ್ತೆ ಬದಿ ಮಲಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net