ಕುಟುಂಬ ಸದಸ್ಯರಿಂದ ಅಧಿಕಾರದಲ್ಲಿ ಹಸ್ತಕ್ಷೇಪವಾಗಿಲ್ಲ

25 TKE 1 (GP)
ತರೀಕೆರೆ ತಾಲೂಕಿನ ಬೇಲೇನಹಳ್ಳಿ ಗ್ರಾಮದಲ್ಲಿ ಭಾರತ್ ನಿರ್ಮಾಣ್ ಸೇವಾ ಕೇಂದ್ರವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಡಾ.ಆರ್.ದೇವೇಂದ್ರಪ್ಪ, ಕಾಂತಕುಮಾರನಾಯ್ಕ, ವನಜಾಕ್ಷಿಬಾಯಿ, ಎನ್.ಚರಣ್‌ರಾಜ್, ಸಿ.ಟಿ.ಯೋಗೀಶ್ ಇತರರಿದ್ದರು.
Published on

ತರೀಕೆರೆ: ಕುಟುಂಬ ಸದಸ್ಯರು ನನ್ನ ನೆರವಿಗೆ ನಿಂತು ಜನಸೇವೆ ಮಾಡುತ್ತಿದ್ದಾರೆಯೇ ಹೊರತು ರಾಜಕಾರಣವಾಗಲಿ, ಅಧಿಕಾರದಲ್ಲಿ ಹಸ್ತಕ್ಷೇಪವಾಗಲಿ ಮಾಡುತ್ತಿಲ್ಲ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ತಾಲೂಕಿನ ಬೇಲೇನಹಳ್ಳಿ ಗ್ರಾಮದಲ್ಲಿ ನರೇಗಾ, 15ನೇ ಹಣಕಾಸು ಮತ್ತು ಶಾಸನ ಬದ್ಧ ಯೋಜನೆಯ 51 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ಭಾರತ್ ನಿರ್ಮಾಣ್ ಸೇವಾ ಕೇಂದ್ರ, 11 ಲಕ್ಷ ರೂ. ವೆಚ್ಚದ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಹಾಗೂ ಹುರಳಿಹಳ್ಳಿ ಗ್ರಾಮದಲ್ಲಿ ನರೇಗಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 12.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಕೆಲವರು ನನ್ನ ಪತ್ನಿ ಮತ್ತು ಪುತ್ರಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. ಅವರು ಕ್ಷೇತ್ರದಲ್ಲಿ ನಾನಿಲ್ಲದಿದ್ದಾಗ ಜನರ ಸಮಸ್ಯೆಗೆ ಸ್ಪಂದಿಸಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರ ಹೊರತು ಸಂವಿಧಾನಾತ್ಮಕವಾಗಿ ಜನರು ನನಗೆ ನೀಡಿರುವ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದರು.

ಗ್ರಾಪಂ ಅಧ್ಯಕ್ಷ ಕಾಂತಕುಮಾರನಾಯ್ಕ, ಉಪಾಧ್ಯಕ್ಷೆ ವನಜಾಕ್ಷಿಬಾಯಿ, ಸದಸ್ಯರಾದ ಇ.ನಾಗರಾಜ್, ಆರ್.ಬಲರಾಮ, ಎಚ್.ಆರ್.ಉಮೇಶ್, ಟಿ.ಆರ್.ಬಸವರಾಜ್, ಬಿ.ಎಸ್.ದೀಪಾ, ಸುಂಕಮ್ಮ, ಸಿಡಿಪಿಒ ಎನ್.ಚರಣ್‌ರಾಜ್, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್, ಪಿಡಿಒ ಡಿ.ಎಸ್.ರಘುವೀರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net