

ಹೊಳೆನರಸೀಪುರ : ಪಟ್ಟಣದಲ್ಲಿ ಪ್ರಸಿದ್ಧಿ ಪಡೆದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳ ದಾಂದಲ್ಲೆಯಿoದಾಗಿ ಕಲಿಕಾ ಸಾಮಾಗ್ರಿಗಳು ಹಾಗೂ ದಾಖಲೆಗಳು ನಾಶವಾಗಿವೆ.
ಪಟ್ಟಣದ ಶ್ರೀ ಲಕ್ಷಿö್ಮನರಸಿಂಹಸ್ವಾಮಿ ದೇವಾಲಯದ ರಥದ ಶೆಡ್ ಸಮೀಪದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಂಧಲ್ಲೆ ನಡೆದಿದ್ದು, ಶಾಲೆಯ ಪಕ್ಕದಲ್ಲಿ ಇರುವ ಶ್ರೀ ಉತ್ತರಾಧಿಮಠದ ಮೆಟ್ಟಿಲುಗಳನ್ನು ಏರಿ ಶಾಲೆಯ ಆವರಣ ಪ್ರದೇಶಿರುವ ಕಿಡಿಗೇಟಿಗಳು ದಾಂದಲ್ಲೆ ನಡೆಸಿದ್ದಾರೆ. ಶನಿವಾರ ರಾತ್ರಿ ಶಾಲೆಯ ಮುಂಭಾಗದ ರಸ್ತೆಗೆ ಅಡ್ಡವಾಗಿ ವೇದಿಕೆ ನಿರ್ಮಿಸಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದ ಪ್ರದರ್ಶನ ಏರ್ಪಡಿಸಲಾಗಿತ್ತು. ನಾಟಕ ಪ್ರದರ್ಶನದ ಧ್ವನಿವರ್ಧಕದ ಶಬ್ದವನ್ನು ಬಳಸಿಕೊಂಡು ಕಿಡಿಗೇಡಿಗಳು ಶಾಲೆಯ ಹೂ ಹಾಗೂ ಅಲಂಕಾರಿಕಾ ಕುಂಡಗಳು, ಕೊಠಡಿಯಲ್ಲಿನ ಕಲಿಕಾ ಸಾಮಾಗ್ರಿಗಳು, ಶಾಲಾ ದಾಖಲೆಗಳು, ಫ್ಯಾನ್ ಹಾಗೂ ನಲ್ಲಿಯ ಸಂಪರ್ಕ ಕಿತ್ತು ವಿಕೃತಿ ಮೆರೆದಿದ್ದಾರೆ. ಪ್ರಕರಣ ಸಂಬoಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿರುವ ಪುರಸಭಾ ಸದಸ್ಯ ಪ್ರಸನ್ನ ಅವರು ಆರೋಪಿಗಳ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.