ಕಾವ್ಯ ಮನಸ್ಸಿಗೆ ನೇರ ತಾಗುವಂತೆ ಇರಬೇಕು

Published on

ಮೈಸೂರು: ಯಾವುದೇ ಕಾವ್ಯ ಮನಸ್ಸಿಗೆ ನೇರ ತಾಗುವಂತೆ ಇರಬೇಕು, ಬುದ್ಧಿಗೂ ಕೆಲಸ ನೀಡಬೇಕು. ಡಿವಿಜಿ ಅವರ ಎಲ್ಲ ಕಾವ್ಯಗಳು ಹಾಗೇ ಇವೆ ಎಂದು ಡಾ.ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಜಿ.ಎಸ್. ನಟೇಶ್ ಹೇಳಿದರು.

ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡಮಿ ಟ್ರಸ್ಟ್ ವತಿಯಿಂದ ಸಂಗೀತ ಕಲಾನಿಧಿ ಕೆ.ವಾಸುದೇವಾಚಾರ್ಯ ಭವನಲ್ಲಿ ಸೋಮವಾರ ಆಯೋಜಿಸಿದ್ದ ‘ಡಾ. ಡಿವಿಜಿ ಅವರ ಮಂಕುತಿಮ್ಮನ ಕಗ್ಗ’ ಮುಕ್ತ ಕೃತಿ ಆಧಾರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಿಧಿಯ ಲೀಲಾ ವಿನೋದ’ ವಿಷಯ ಕುರಿತು ಮಾತನಾಡಿದರು.

ಡಿವಿಜಿ ಅವರ ಎಲ್ಲ ಕಾವ್ಯಗಳು ಅರ್ಥಗರ್ಭಿತವಾಗಿವೆ. ಒಂದು ಪದವೂ ಅರ್ಥ ರಹಿತವಾಗಿಲ್ಲ. ಕಗ್ಗ ಕೇಳಿದರೆ ಖುಷಿ ಆಗುತ್ತದೆ ಎಂದರು. ಕಾವ್ಯ ಮನಸ್ಸಿಗೆ ನೇರವಾಗಿ ಪ್ರವೇಶವಾಗುವ ರೀತಿ ಇರಬೇಕು. ಶ್ರವಣ ಮೋಹಕತ್ವ, ಮನೋ ವೇದತ್ವ, ಬುದ್ಧಿ ಚೋಧಕತ್ವ ಮನಸ್ಸಿನಲ್ಲಿ ಇಟ್ಟಿಕೊಂಡು ಕಾವ್ಯ ರಚಿಸಬೇಕು. ಡಿವಿಜಿ ಅವರ ಕಗ್ಗದಲ್ಲಿ ಈ ಮೂರು ಮೌಲ್ಯಗಳು ನಮಗೆ ಸಿಗುತ್ತವೆ. ಕಗ್ಗ ಕೇಳಿದಾಗ ನಮ್ಮನ್ನು ತಿದ್ದುವಿಕೆಗೆ ಒಳಪಡಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net