ಕಾಳಿಕಾಂಬ ಕೊಂಡೋತ್ಸವ

IMG-20230315-WA0004
ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದಲ್ಲಿ ಕಾಳಿಕಾಂಬ ಕೊಂಡೋತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
Published on

ಕಲ್ಕುಂದ: ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದಲ್ಲಿ ಇತ್ತೀಚೆಗೆ ಕಾಳಿಕಾಂಬ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.

ಕಾಳಿಕಾಂಬ ದೇವರನ್ನ ಅರ್ಚಕರು ಹೊತ್ತು ಮಂಗಳವಾದ್ಯ, ಛತ್ರಿ ಚಾಮರಗಳ ಸಮೇತ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಮನೆಯಂಗಳವನ್ನು ಸಾರಿಸಿ ಗುಡಿಸಿ ತಳಿರು- ತೋರಣಗಳಿಂದ ಅಲಂಕಾರ ಮಾಡಿ ರಂಗೋಲಿ ಹಾಕಿದ್ದರು. ಭಕ್ತರು ದೇವರಿಗೆ ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು.

ಮೆರವಣಿಗೆ ಬಳಿಕ ದೇವಾಲಯದ ಮುಂದೆ ಹಾಕಿರುವ ಕೊಂಡದಲ್ಲಿ ದೇವರು ಹಾದು ಗುಡಿ ಸೇರಿತು. ನಂತರ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಿ ತಂಬಿಟ್ಟು, ತಂಪು ನೀಡಿ ಪೂಜೆ ಸಲ್ಲಿಸಿದರು. ರಾತ್ರಿ ಗ್ರಾಮಸ್ಥರಿಂದ ದಕ್ಷಯಜ್ಞ ಪೌರಾಣಿಕ ನಾಟಕ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net