ಕಾರು ಡಿವೈಡರ್‌ಗೆ ನುಗ್ಗಿ ಬೈಕ್‌ಗೆ ಡಿಕ್ಕಿ / ಬೈಕ್‌ನಲ್ಲಿದ್ದ ಮೂವರ ಸ್ಥಿತಿ ಚಿಂತಾಜನಕ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಪಕ್ಕದ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗೇಟ್ ನ ರಾಷ್ಡ್ರೀಯ ಹೆದ್ದಾರಿ ೭೫ ರಲ್ಲಿ ಗುರುವಾರ ಸಂಜೆ ಕೋಲಾರ ಕಡೆಯಿಂದ ಬೆಂಗಳೂರು ಕಡೆ ಚಲಿಸುತ್ತಿದ್ದ ಕಾರು ಅತೀ ವೇಗವಾಗಿ ಚಲಿಸಿ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಇನ್ನೊಂದು ಕಾರು ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಹಿಂಬದಿಯಲ್ಲಿ ಡಿಕ್ಕಿ ಹೊಡೆದು ನಂತರ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಮೇಲೆ ಹತ್ತಿ ಪಕ್ಕದ ರಸ್ತೆಯಲ್ಲಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಚುಂಚದೇನಹಳ್ಳಿ ಗ್ರಾಮದ ನಾಗೇಂದ್ರಬಾಬು (೩೦) ಹಾಗೂ ಬೈಕ್ ಮೇಲೆ ಕುಳಿತಿದ್ದ ನಾಗಮಣಿ (೩೦) ಮತ್ತು ಲಲಿತ (೨೮) ತೀವ್ರವಾಗಿ ಗಾಯಗೊಂಡು ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ.

ಅಪಘಾತ ನಡೆದು ಒಂದು ಗಂಟೆಯಾದರೂ ಆಂಬುಲೆನ್ಸ್ ಬರದ ಕಾರಣ ಕೋಲಾರ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಕಾಂತರಾಜು ಮತ್ತು ಸಬ್‌ಇನ್ಸ್ಪೆಕ್ಟರ್ ಭಾರತಿ ಗಾಯಾಳುಗಳನ್ನು ತಮ್ಮ ಜೀಪಿನಲ್ಲಿ ಸಾಗಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

ಚಿತ್ರ ೦೩ ಕೆ.ಎಲ್.ಆರ್. ೦೪ : ಅರಾಭಿಕೊತ್ತನೂರು ಗೇಟ್ ಸಮೀಪ ಡಿವೈಡರ್‌ಗೆ ನುಗ್ಗಿರುವ ಕಾರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net