ಕಾರು ಡಿಕ್ಕಿ ಹೊಡೆದು ಪಾದಚಾರಿ ಮಹಿಳೆಗೆ ಗಾಯ

Crime Logo
Published on

ಕುವೆಂಪು ನಗರದ ಉದಯರವಿ ರಸ್ತೆಯ ಪಾರ್ಕ್ ಎದುರು ಗುರುವಾರ ರಾತ್ರಿ ಕಾರು ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಗಾಯಗೊಂಡಿದ್ದಾರೆ.

ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳಲು ಯತ್ನಿಸಿ ಕಾರಿನ ಚಾಲಕ ನಿಂತಿದ್ದ ನಾಲ್ಕು ದ್ವಿಚಕ್ರಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದಾನೆ. ಬೋಗಾದಿ ನಿವಾಸಿ ಪಂಕಜ(44) ಗಾಯಗೊಂಡವರು.

ಶಾರದಾದೇವಿ ನಗರದ ನಿವಾಸಿ ರಂಜಿತ್ ಕಾರಿನಲ್ಲಿ ಇಸ್ಕಾನ್ ಕಡೆಯಿಂದ ಆಂದೋಲನ ವೃತ್ತದ ಕಡೆ ತೆರಳುತ್ತಿದ್ದಾಗ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ.

ಬಳಿಕ ಗಾಬರಿಗೊಂಡ ಚಾಲಕ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳು ಮಹಿಳೆ ನೀಡಿದ ದೂರಿನ ಮೇರೆಗೆ ಕುವೆಂಪು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net