

ಶೃಂಗೇರಿ: ರಾಜ್ಯಹೆದ್ದಾರಿ ಶಿಡ್ಲೆ ಸಮೀಪ ಗುರುವಾರ ರಾತ್ರಿ ಅತಿ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಓರ್ವ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರವಾದ ಗಾಯಗಳಾಗಿದೆ. ವೈಕುಂಠಪುರ ಗ್ರಾಮ ಸಮೀಪದ ಬೇಸೂರು ಶೇಖರಪ್ಪ ಗೌಡ (60) ಮೃತದುರ್ದೈವಿ. ವಿಜೇಂದ್ರ (40) ಗಾಯಗೊಂಡವರು. ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಶೇಖರಪ್ಪ ಗೌಡ ಅವರನ್ನು ಮಣಿಪಾಲಗೆ ಕರೆದೊಯ್ಯುವಾಗ ಮೃತಪಟ್ಟರು. ವಿಜೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಕಾರಿನ ಎದುರಿನ ಚಕ್ರ ಒಡೆದು ಹೋದರೂ ಕಾರನ್ನು ಚಲಾಯಿಸಿ ಪಟ್ಟಣಕ್ಕೆ ಬಂದಿದ್ದಾನೆ. ಮೆಸ್ಕಾಂ ಬಳಿ ಜನರು ಜಮಾಯಿಸಿ ಕಾರನ್ನು ತಡೆದಾಗ ಚಾಲಕ ಸೇರಿ ಕಾರಿನಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.