ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

saligrama 01
ಶ್ರೀರಾಂಪುರ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶಾಸಕರ ಸಾ.ರಾ.ಮಹೇಶ್ ಭೂಮಿಪೂಜೆ ಮಾಡಿದರು. ಅನಿತಾ ಸಾ ರಾ ಮಹೇಶ್‌ ಇದ್ದರು.
Published on


ಶಾಸಕ ಸಾ.ರಾ.ಮಹೇಶ್ ಸೂಚನೆ


ಸಾಲಿಗ್ರಾಮ: ಕನ್ನಂಬಾಡಿ ಕಟ್ಟೆ ಕಟ್ಟಲು ತಾವಿದ್ದ ಜಾಗವನ್ನು ಬಿಟ್ಟುಕೊಟ್ಟು ಶ್ರೀರಾಂಪುರ ಗ್ರಾಮಕ್ಕೆ ಬಂದವರ ಋಣ ತೀರಿಸಲು ನನ್ನ ಕುಟುಂಬ ಮರೆಯುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.


ರಾಂಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಬೆಂಗಳೂರಿ ನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದರೆ ಅದಕ್ಕೆ ಕಾರಣ ಕನ್ನಂಬಾಡಿ ಕಟ್ಟೆ. ಕನ್ನಂಬಾಡಿಕಟ್ಟೆ ಕಟ್ಟಲು ಜಾಗ ಬಿಟ್ಟುಕೊಟ್ಟ ಶ್ರೀರಾಂಪುರ ಜನರ ಕಾರ್ಯವನ್ನು ಇತಿಹಾಸವೇ ಹೇಳುತ್ತದೆ. ಇಲ್ಲಿನ ಜನ ಕೈ ಎತ್ತಿ ಕೊಡುವ ಜನರೇ ಹೊರತು ಬೇರೆಯವರಿಂದ ಕೈಚಾಚಿ ಕೇಳುವವರಲ್ಲ ಎಂದರು.


ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಈಗಾಗಲೇ 20 ಲಕ್ಷ ರೂ. ಅನುದಾನ ನೀಡಲಾಗಿದ್ದು, ಕಾಮಗಾರಿ ಪ್ರಾರಂಭವಾದ ಮೇಲೆ ಮತ್ತಷ್ಟು ಅನುದಾನ ನೀಡಲಾಗುವುದು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಶಾಲೆಯ ಪಕ್ಕದಲ್ಲಿರುವ ರಸ್ತೆ ಅಭಿವೃದ್ಧಿಪಡಿಸಲು 20 ಲಕ್ಷ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.


ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ತ್ಯಾಗರಾಜ್, ಶ್ರೀರಾಂಪುರ ಗ್ರಾಪಂ ಸದಸ್ಯರಾದ ಅಭಿಲಾಷ್, ಉಮಾ ಸೋಮಶೇಖರ್, ಸುಕನ್ಯಾ ಕುಮಾರ್, ಶಿವಕುಮಾರ್, ಡೇರಿ ಅಧ್ಯಕ್ಷ ಪ್ರಸನ್ನ, ದಲಿತ ಮುಖಂಡ ದಿವಾಕರ್, ಚುಂಚನಕಟ್ಟೆ ಮಂಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net